ಮಾನಸಿಕ ಆರೋಗ್ಯ ತಪಾಸಣೆಗೆ ನ್ಯಾ. ಕರ್ಣನ್ ನಕಾರ

ಈ ಸುದ್ದಿಯನ್ನು ಶೇರ್ ಮಾಡಿ

karnan

ಕೊಲ್ಕತ್ತಾ, ಮೇ 4-ತಮ್ಮ ಮಾನಸಿಕ ಆರೋಗ್ಯ ತಪಾಸಣೆಗೆ ನಿರ್ದೇಶನ ನೀಡಿದ ಸುಪ್ರೀಂಕೋರ್ಟ್‍ನ ಆದೇಶವನ್ನು ಕಲ್ಕತ ಹೈಕೋರ್ಟ್ ನ್ಯಾಯಮೂರ್ತಿ ಕರ್ಣನ್ ಮತ್ತೊಮ್ಮೆ ದಿಕ್ಕರಿಸಿದ್ದಾರೆ. ತಮ್ಮ ಆರೋಗ್ಯ ಪರಿಶೀಲಿಸಲು ಬಂದ ನಾಲ್ವರು ವೈದ್ಯರ ತಂಡದಿಂದ ತಪಾಸಣೆಗೆ ಒಳಪಡಲು ಸಾರಾಸಗಟಾಗಿ ನಿರಾಕರಿಸಿದ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಮತ್ತೊಮ್ಮೆ ಸಡ್ಡು ಹೊಡೆದಿದ್ದಾರೆ. ಇದರೊಂದಿಗೆ ಪುನ: ನ್ಯಾಯಾಲಯ ನಿಂದನೆ ಆರೋಪಕ್ಕೆ ಗುರಿಯಾಗಲಿದ್ದಾರೆ. ನ್ಯಾಯಾಲಯದ ಆದೇಶದಂತೆ ಪೊಲೀಸ್ ಭದ್ರತೆಯಲ್ಲಿ ಇಂದು ಕೊಲ್ಕತಾದ ನ್ಯೂಟೌನ್‍ನಲ್ಲಿರುವ ನ್ಯಾ.. ಕರ್ಣನ್ ಮನೆಗೆ ಸರ್ಕಾರಿ ವೈದ್ಯರ ತಂಡ ತೆರಳಿತು. ಆದರೆ ಆರೋಗ್ಯ ತಪಾಸಣೆಗೆ ಒಳಪಡಲು ನಿರಾಕರಿಸಿದರು. ನಾನು ಆರೋಗ್ಯವಾಗಿದ್ದೇನೆ.ನನ್ನ ಮಾನಸಿಕ ಸೌಖ್ಯತೆ ಉತ್ತಮವಾಗಿದೆ. ನನ್ನ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದರು. ವೈದ್ಯರು ಮತ್ತು ಪೊಲೀಸರ ಬಲವಂತಕ್ಕೆ ಜಗ್ಗದ ಅವರು ತಂಡವನ್ನು ವಾಪಸ್ ಕಳುಹಿಸಿದರು.
ನಂತರ ಸುದ್ದಿಗೋಷ್ಠಿ ನಡೆಸಿದ ಅವರು, ತಮ್ಮನ್ನು ಆರೋಗ್ಯ ತಪಾಸಣೆಗೆ ಒಳಪಡಿಸುವ ಅದಿಕಾರ ಸುಪ್ರೀಂಕೋರ್ಟ್‍ಗೆ ಇಲ್ಲ ಎಂದು ಸವಾಲು ಹಾಕಿದರು. ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಏಳು ನ್ಯಾಯಾಧೀಶರನ್ನು ನ್ಯಾಯಾಂಗದ ಭಯೋತ್ಪಾದಕರು ಎಂದು ಜರಿದರು. ದಲಿತ ನ್ಯಾಯಧೀಶನ ಮೇಲೆ ಅನ್ಯಾಯ ಎಸಗಲಾಗುತ್ತಿದೆ. ವಿನಾಕರಣ ಶೋಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಸುಪ್ರೀಂ ಕೋರ್ಟ್ ನ್ಯಾಯಾಧೀಶರುಗಳಿಂದ ನನ್ನ ವೃತ್ತಿ ಜೀವನಕ್ಕೆ ಧಕ್ಕೆಯಾಗಿದೆ ಎಂದು ನ್ಯಾ.ಕರ್ಣನ್ ಆಪಾದಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin