ಮಾಯಾವತಿ ನೇತೃತ್ವದ ಬಿಎಸ್‍ಪಿ ಪಕ್ಷದ ಖಾತೆಗೆ 104 ಕೋಟಿ ರೂ. ಅಕ್ರಮ ಠೇವಣಿ

ಈ ಸುದ್ದಿಯನ್ನು ಶೇರ್ ಮಾಡಿ

Mayavathi-1

ನವದೆಹಲಿ, ಡಿ.27-ಕೇಂದ್ರ ಸರ್ಕಾರ ನ.8ರಿಂದ ನೋಟು ರದ್ದುಗೊಳಿಸಿದ ನಂತರ ಮಾಜಿ ಮುಖ್ಯಮಂತ್ರಿ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಸಕ್ಕೆ(ಬಿಎಸ್‍ಪಿ) ಸೇರಿದ ಖಾತೆಗೆ 104 ಕೋಟಿ ರೂ.ಗಳ ಠೇವಣಿ ಸಂಗ್ರಹವಾಗಿದೆ. ಇದಲ್ಲದೇ ಮಾಯಾವತಿ ಸಹೋದರನ ಖಾತೆಯಲ್ಲೂ 1.43 ಕೋಟಿ ರೂ. ಠೇವಣಿ ಕಂಡುಬಂದಿದೆ. ಈ ಭಾರೀ ಅಕ್ರಮಗಳ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ತೀವ್ರಗೊಳಿಸಿದೆ.  ದೆಹಲಿಯ ಯೂನಿಯನ್ ಬ್ಯಾಂಕ್ ಶಾಖೆಗಳಲ್ಲಿ ಇಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ, ಬಿಎಸ್‍ಪಿಗೆ ಸೇರಿದ ಖಾತೆಯಲ್ಲಿ 104 ಕೋಟಿ ರೂ. ಠೇವಣಿ ಪತ್ತೆಯಾಯಿತು. ನೋಟ್ ನಿಷೇಧದ ನಂತರ ದೊಡ್ಡ ಪ್ರಮಾಣದ ಅಕ್ರಮ-ಅವ್ಯವಹಾರಗಳು ನಡೆದಿರುವ ಸಾಧ್ಯತೆ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಆನಂದ ಕುಮಾರ್ ಎಂಬುವರ ಖಾತೆಗಳಿಗೆ ಈ ಹಣವನ್ನು ಠೇವಣಿ ಇಡಲಾಗಿದ್ದು, ಶಾಖೆ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಬಿಎಸ್‍ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಸಹೋದರ ಖಾತೆಯಲ್ಲಿಯೂ 1.43 ಕೋಟಿ ರೂ. ಪತ್ತೆಯಾಗಿದ್ದು ಈ ಬಗ್ಗೆಯೂ ಸಹ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin