ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆ ಮಾಡುತ್ತಿದ್ದ ಐವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

5Arrested-----01

ಬೆಂಗಳೂರು, ಫೆ.10– ಮಾರಕಾಸ್ತ್ರಗಳಿಂದ ಬೆದರಿಸಿ ಸಾರ್ವಜನಿಕರನ್ನು ದರೋಡೆ ಮಾಡುತ್ತಿದ್ದ ಐವರನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಶಾಂತ ಅಲಿಯಾಸ್ ಪಚ್ಚಿ (19), ರಾಕೇಶ್ ಅಲಿಯಾಸ್ ಜಾಕಿ ಅಲಿಯಾಸ್ ರವಿಕುಮಾರ್ (22), ಕಿರಣ್(19), ವಿನಯ್ (21) ಮತ್ತು ಮಂಜುನಾಥ ಅಲಿಯಾಸ್ ಮಂಜ ಅಲಿಯಾಸ್ ಜುಂಜು (22) ಬಂಧಿತ ದರೋಡೆಕೋರರು.  ಬಂಧಿತರಿಂದ 2 ಮೊಬೈಲ್ ಫೋನ್, ದ್ವಿಚಕ್ರ ವಾಹನ, 300 ರೂ. ನಗದು, ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಡಿಸಿಪಿ ಡಾ.ಎಸ್.ಡಿ.ಶರಣಪ್ಪ ಅವರ ಮಾರ್ಗದರ್ಶನ, ಎಸಿಪಿ ಮಂಜುನಾಥ ಚೌದರಿ ನೇತೃತಯ್ವದಲ್ಲಿ ಪುಟ್ಟೇನ ಹಳ್ಳಿ ಠಾಣೆ ಇನ್ಸ್‍ಪೆಕ್ಟರ್ ಟಿ.ಎಂ.ಧರ್ಮೇಂದ್ರ ಮತ್ತು ಸಿಬ್ಬಂದಿ ದರೋಡೆಕೋರರನ್ನು ಬಂಧಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin