ಮಾರಕ ಮಲೇರಿಯಾಕ್ಕೆ 2 ನಿಮಿಷಕ್ಕೊಂದು ಮಗು ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

Malaria--01

ನವದೆಹಲಿ, ಏ.25-ಇಂದು ವಿಶ್ವ ಮಲೇರಿಯಾ ದಿನ. ಸೋಂಕುಕಾರಕ ಸೊಳ್ಳೆಗಳಿಂದ ಹರಡುವ ಈ ಮಾರಕ ರೋಗದ ಬಗ್ಗೆ ಜಗತ್ತಿನಾದ್ಯಂತ ಅರಿವು ಮತ್ತು ಜಾಗೃತಿ ಮೂಡಿಸುತ್ತಿದ್ದರೂ, ಹೊಸ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ಮಲೇರಿಯಾವನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡು ಮಾನವರ ಪ್ರಾಣ ಉಳಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಆರೋಗ್ಯ ಕ್ಷೇತ್ರದ ದಿಗ್ಗಜರಿಗೆ ಕರೆ ನೀಡಿದೆ.   ಮಲೇರಿಯಾದ ತೀವ್ರ ಉಪಟಳದಿಂದ ಜರ್ಝರಿತವಾದ ನೈರೋಬಿಯಲ್ಲಿ ಇಂದು ನಡೆದ ಜಾಗೃತಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಡಬ್ಲ್ಯುಎಚ್‍ಒ ಮಹಾ ನಿರ್ದೇಶಕಿ ಡಾ. ಮಾರ್ಗರೇಟ್ ಚಾನ್, 2015ರಲ್ಲಿ ಜಾಗತಿಕವಾಗಿ ಮಲೇರಿಯಾದಿಂದ 4,29,000 ಮಂದಿ ಮೃತಪಟ್ಟಿದ್ದು, 212 ದಶಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ. ಪ್ರತಿ ಎರಡು ನಿಮಿಷಕ್ಕೊಮ್ಮೆ ಒಂದು ಮಗು ಈ ಮಾರಕ ರೋಗಕ್ಕೆ ಬಲಿಯಾಗುತ್ತಿದೆ ಎಂದು ಅಂಕಿಅಂಶ ನೀಡಿದರು.ವಿಶ್ವಸಂಸ್ಥೆ ಕೈಗೊಂಡ ಪರಿಣಾಮಕಾರಿ ಕ್ರಮಗಳಿಂದಾಗಿ 2010 ಮತ್ತು 2015ರ ನಡುವೆ ಸಾವು ಪ್ರಕರಣಗಳು ಶೇ.29ರಷ್ಟು ಹಾಗೂ ಹೊಸ ಪ್ರಕರಣಗಳು ಪತ್ತೆಯಾಗುವಿಕೆ ಶೇ.21ರಷ್ಟು ಇಳಿಮುಖವಾಗಿದೆ ಎಂದು ಅವರು ತಿಳಿಸಿದರು.   ವಿಶ್ವದ ಮಲೇರಿಯಾ ಪ್ರಕರಣದಲ್ಲಿ ಶೇ.90ರಷ್ಟು ವರದಿಯಾಗಿರುತ್ತಿರುವ ಆಫ್ರಿಕಾದ ಸಹರಾ ಪ್ರಾಂತ್ಯದಲ್ಲಿ 2001ರಿಂದ ಈವರೆಗೆ 663 ದಶಲಕ್ಷ ಮಲೇರಿಯಾ ರೋಗಗಳನ್ನು ತಪ್ಪಿಸಲಾಗಿದೆ ಎಂದು 2016ರ ವಿಶ್ವ ಮಲೇರಿಯಾ ವರದಿಯಲ್ಲಿ ತಿಳಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin