ಮಾರಾಟ ಮಾಡಲು ಪ್ರದರ್ಶನಕ್ಕಿಟ್ಟಿದ್ದ ಬೆಡ್ ಮೇಲೆಯೇ ಸೆಕ್ಸ್ ಮಾಡಿದ ಜೋಡಿ..!

ಈ ಸುದ್ದಿಯನ್ನು ಶೇರ್ ಮಾಡಿ

Arrest--01

ನ್ಯೂಜೆರ್ಸಿ, ಫೆ.4- ‘ಕಾಮಾತುರಾಣಂ ನ ಲಜ್ಜಾ ನ ಭಯಂ’ ಎನ್ನುವಂತೆ ಇದಕ್ಕೊಂದು ನಿದರ್ಶನವೆಂಬಂತೆ ಇಲ್ಲೊಂದು ಅತ್ಯಂತ ವಿಲಕ್ಷಣ ಮತ್ತು ಮುಜುಗರಕ್ಕೀಡು ಮಾಡಿದ ಕೃತ್ಯ ನಡೆದಿದೆ. ಅಮೆರಿಕದ ನ್ಯೂ ಜೆರ್ಸಿಯ ವುಡ್‍ಲ್ಯಾಂಡ್ ಪಾರ್ಕ್‍ನಲ್ಲಿ ಡಿಸ್‍ಪ್ಲೇ (ಪ್ರದರ್ಶನಕ್ಕೆ ಇರಿಸಲಾದ) ಮಾಡಲಾಗಿದ್ದ ಹಾಸಿಗೆ ಮೇಲೆ ಲೈಂಗಿಕ ಕ್ರಿಯೆ ನಡೆಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.  ಈ ಘಟನೆ ನಡೆದಿರುವುದು ನ್ಯೂಜೆರ್ಸಿಯ ಪ್ರಸಿದ್ದ ಬೆಡ್ ಬಾತ್ ಅಂಡ್ ಬಿಯಾಂಡ್ ಎಂಬ ಶೋ ರೂಮ್‍ನಲ್ಲಿ. ಮಳಿಗೆ ತೆಗೆದಿದ್ದಾಗಲೇ ಅಲ್ಲಿಗೆ ತನ್ನ ಗರ್ಲ್ ಫ್ರೆಂಡ್ ಜೊತೆ ಬಂದ ಒಬ್ಬ ನೆಲದ ಮೇಲೆ ಹಾಕಲಾಗಿದ್ದ ಹಾಸಿಗೆ ಮೇಲೆ ರತಿ ಕ್ರೀಡೆ ನಡೆಸಿದರು.

ಈ ವಿಲಕ್ಷಣ ಕೃತ್ಯವನ್ನು ಗಮನಿಸಿದ ಮಳಿಗೆ ಉದ್ಯೋಗಿಗಳು ಮುಜುಗರಕ್ಕೀಡಾಗಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಕೆಲವು ಕಾರಣಗಳಿಂದಾಗಿ ಬಂಧಿತರ ಹೆಸರನ್ನು ತಿಳಿಸಿಲ್ಲ. ಬಂಧಿತರಲ್ಲಿ ಒಬ್ಬಾತ ಲೈಂಗಿಕ ಸೋಂಕಿಗೆ ಒಳಗಾಗಿದ್ದಾನೆ.  ಇವರು ಲೈಂಗಿಕ ಕ್ರಿಯೆ ನಡೆಸಲು ಬಳಸಲಾಗಿದ್ದ ಹಾಸಿಗೆಯನ್ನು ತಕ್ಷಣ ಮಳಿಗೆಯಿಂದ ಹೊರಗೆ ಕೊಂಡೊಯ್ದು ಎಸೆಯಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin