ಮಾರುಕಟ್ಟೆಗೆ ಬಂತು ಹವಾ ನಿಯಂತ್ರಿತ (ಎ.ಸಿ) ಉಡುಗೆ..!

ಈ ಸುದ್ದಿಯನ್ನು ಶೇರ್ ಮಾಡಿ

Jocket--01

ಪಾಟ್ನಾ, ಮಾ.8-ಸಹಿಸಲಾಗದ ಬಿಸಿಲಿನ ಪ್ರಕೋಪ, ಧಗೆಯಿಂದ ಬೆವರಿ ಬಸವಳಿಯುವ ಶರೀರವನ್ನು ತಂಪು ಮಾಡುವ ಹಾಗೂ ಮೈಕೊರೆಯುವ ಚಳಿಯಲ್ಲಿ ದೇಹವನ್ನು ಬೆಚ್ಚಗಿರಿಸುವ ಹವಾ ನಿಯಂತ್ರಿತ ಉಡುಗೆಯೊಂದು(ಎಸಿ ಜಾಕೆಟ್) ಮಾರುಕಟ್ಟೆಗೆ ಬಂದಿದೆ. ನೀವು ಎಲ್ಲೇ ಇರಲಿ, ಹೇಗೆ ಇರಲಿ ಯಾವುದೇ ಸಮಯದಲ್ಲಿ ದೇಹವನ್ನು ಇದು ಕೂಲ್ ಕೂಲ್ ಮಾಡುತ್ತದೆ. ಅಲ್ಲದೇ ವಾತಾವರಣವನ್ನು ನಿಯಂತ್ರಿಸುವ ಬಟನ್‍ಗಳೂ ಇದರಲ್ಲಿವೆ..!  ಬಿಹಾರದ ರಾಜಧಾನಿ ಪಾಟ್ನಾದ ನವಾಡದಲ ಖಾನ್‍ವಾದಲ್ಲಿ ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಗಿರಿರಾಜ್ ಸಿಂಗ್ ಈ ಎಸಿ ಜಾಕೆಟ್‍ನನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಆಕರ್ಷಕ ವಿನ್ಯಾಸದ ಸಂಯೋಜನೆ ಇದಾಗಿದೆ ಎಂದು ಸಚಿವರು ಬಣ್ಣಿಸಿದ್ದಾರೆ.

ಸ್ವಯಂ ಕೂಲಿಂಗ್ ಲಿನೆನ್ ಜಾಕೆಟ್‍ನಲ್ಲಿ ಎರಡು ಆಯ್ಕೆಗಳಿವೆ- ಕೆಂಪು ಬಟನ್ ಒತ್ತಿದರೆ ಬಿಸಿಯಾಗುತ್ತದೆ ಹಾಘೂ ಹಸಿರು ಗುಂಡಿ ಒತ್ತಿದರೆ ತಂಪಾಗುತ್ತದೆ. 20 ಡಿಗ್ರಿಗಳ ತಾಪಮಾನವನ್ನು ಈ ಜಾಕೆಟ್‍ನಲ್ಲಿ ಏರಿಳಿತ ಮಾಡಬಹುದು. ಈ ವಸ್ತ್ರದಲ್ಲಿ ಅತ್ಯಂತ ಸೂಕ್ಷ್ಮ ಕೂಲ್ ಮತ್ತು ಹಾಟ್ ಏರ್ ಫ್ಯಾನ್‍ಗಳಿದ್ದು, ಬ್ಯಾಟರಿಯಿಂದ ಕಾರ್ಯನಿರ್ವಹಿಸುತ್ತವೆ. ಐಟಿಟಿ ಪದವೀಧರರೊಬ್ಬರು ಇದನ್ನು ಅಭಿವೃದ್ಧಿಗೊಳಿಸಿದ್ದು, ಶೀಘ್ರವೇ ದೇಶದ ಎಲ್ಲ ಮಾರುಕಟ್ಟೆಗಳಲ್ಲೂ ಲಭ್ಯವಾಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin