ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ 500, 2000ರೂ. ನೋಟಿನ ಆಕಾರದ ಪರ್ಸ್’ಗಳು

ಈ ಸುದ್ದಿಯನ್ನು ಶೇರ್ ಮಾಡಿ

China-Parse

ಬೆಂಗಳೂರು, ನ.19- ಐನೂರು, ಎರಡು ಸಾವಿರ ರೂ. ಮುಖಬೆಲೆಯ ನೋಟುಗಳು ಇನ್ನೂ ಜನರ ಕೈ ಸೇರಿಯೇ ಇಲ್ಲ. ಬ್ಯಾಂಕ್‍ಗಳ ಮುಂದೆ ನೋಟಿಗಾಗಿ ಕ್ಯೂ ನಿಂತ ಕೆಲವರಿಗೆ ಕೇವಲ 2000 ರೂ. ನೋಟುಗಳು ಮಾತ್ರ ಸಿಕ್ಕಿವೆ. 500ರೂ. ನೋಟನ್ನು ಇನ್ನೂ ಚಲಾವಣೆಗೆ ಬಿಟ್ಟೇ ಇಲ್ಲ. ಆದರೆ, ಚೀನಾದವರು 500, 2000ರೂ. ನೋಟಿನ ಆಕಾರದ ಪರ್ಸ್‍ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅದೇ ಬಣ್ಣದ ಅದೇ ಸೈಜಿನ ಪರ್ಸ್‍ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದರಿಂದ ಈ ಪರ್ಸ್‍ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ.
ಎಟಿಎಂ, ಬ್ಯಾಂಕ್‍ಗಳ ಮುಂದೆ ಹೊಸ ನೋಟುಗಳನ್ನು ಪಡೆಯಲು ಕಳೆದ 10 ದಿನಗಳಿಂದ ಜನ ಸರದಿ ಸಾಲಿನಲ್ಲಿ ನಿಂತು ಪರದಾಡುತ್ತಿದ್ದಾರೆ.

ಆದರೆ, ಚೀನಾದವರ ಮಾರ್ಕೆಟಿಂಗ್ ಐಡಿಯಾ ಹೇಗಿದೆ ನೋಡಿ. ಹೊಸ 500 ಮತ್ತು 2000 ನೋಟುಗಳ ತರಹದ ಪರ್ಸ್‍ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ತನ್ನ ಮಾರುಕಟ್ಟೆಯಲ್ಲಿ ಹೆಚ್ಚಿಸಿಕೊಳ್ಳುವ ತಂತ್ರ ಮಾಡಿದೆ. ಈಗಾಗಲೇ ಈ ಪರ್ಸ್‍ಗಳು ಎಲ್ಲ ಕಡೆ ಸಿಗುತ್ತಿವೆ. ನೋಟುಗಳು ಸಿಗದಿದ್ದರೇನಂತೆ, ನೋಟಿನಾಕಾರದ ಪರ್ಸ್‍ಗಳು ಸಿಗುತ್ತಿವೆ. ಜನ ಖುಷಿಯಿಂದ ಅವುಗಳನ್ನೇ ಕೊಳ್ಳುತ್ತಿದ್ದಾರೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin