ಮಾರುಕಟ್ಟೆಯಲ್ಲಿ ಇಬ್ಬರು ಮಹಿಳಾ ಆತ್ಮಾಹುತಿ ಬಾಂಬರ್‍ ದಾಳಿ : 45 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Suicide-attack

ಕಾನೋ(ನೈಜೀರಿಯಾ), ಡಿ.10-ಜನಸಂದಣಿಯ ಮಾರುಕಟ್ಟೆಯೊಂದರಲ್ಲಿ ಇಬ್ಬರು ಮಹಿಳಾ ಆತ್ಮಾಹುತಿ ಬಾಂಬರ್‍ಗಳು ತಮ್ಮನ್ನು ತಾವು ಸ್ಫೋಟಿಸಿಕೊಂಡು ನಡೆಸಿದ ಭೀಕರ ದಾಳಿಯಲ್ಲಿ 45ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಇತರ 33 ಜನ ಗಂಭೀರ ಗಾಯಗೊಂಡಿರುವ ಘಟನೆ ನೈಜೀರಿಯಾ ಈಶಾನ್ಯ ಭಾಗ ಮಡಗಾಲಿಯಲ್ಲಿ ನಡೆದಿದೆ.  ಗಾಯಾಳುಗಳು ಸ್ಥಳೀಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.  ಮಡಗಾಲಿಯಲ್ಲಿ ಸಂಭವಿಸಿದ ಎರಡು ಸೂಯಿಸೈಡ್ ಬಾಂಬ್ ಸ್ಫೋಟಗಳಲ್ಲಿ 45 ಜನ ಬಲಿಯಾಗಿರುವುದು ದೃಢಪಟ್ಟದೆ ಎಂದು ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆಯ (ಎನ್‍ಇಎಂಎ) ಉನ್ನತಾಧಿಕಾರಿ ಸಾದ್ ಬೆಲ್ಲೋ ತಿಳಿಸಿದ್ದಾರೆ.

ಈ ಭಯಾನಕ ದಾಳಿಗಳ ಹೊಣೆಯನ್ನು ಯಾವುದೇ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿಲ್ಲವಾದರೂ ಅತ್ಯಂತ ಕ್ರೂರ ಉಗ್ರಗಾಮಿ ಸಂಘಟನೆಯಾದ ಬೋಕೊ ಹರಾಮ್ ಕೃತ್ಯವೇ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಪ್ರದೇಶದಲ್ಲಿ ಕಳೆದ ಏಳು ವರ್ಷಗಳಿಂದ ನಡೆಸಲಾಗುತ್ತಿರುವ ಹಿಂಸಾಚಾರದಲ್ಲಿ ಮಹಿಳೆಯರು ಮತ್ತು ಯುವತಿಯರನ್ನು ಆತ್ಮಹತ್ಯೆ ದಾಳಿಗೆ ಬೋಕೊ ಹರಾಮ್ ಉಗ್ರರು ಬಳಸುತ್ತಿರುವುದು ಈ ಗುಮಾನಿಗೆ ಪುಷ್ಟಿ ನೀಡಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin