ಮಾರ್ಚ್ 31ರ ಒಳಗೆ ಕಪ್ಪು ಹಣವನ್ನು ಘೋಷಿಸಿಕೊಳ್ಳಿ : ಕಾಳಧನಿಕರಿಗೆ ಐಟಿ ಕೊನೆಯ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Income-Tax-01

ನವದೆಹಲಿ, ಮಾ.24-ತಮ್ಮ ಅಕ್ರಮ ಹಣ ಜಮಾವಣೆಗಳ ಬಗ್ಗೆ ತನ್ನಲ್ಲಿ ಮಾಹಿತಿ ಇದೆ ಎಂದು ಕಾಳಧನಿಕರಿಗೆ ಎಚ್ಚರಿಕೆ ನೀಡಿರುವ ಆದಾಯ ತೆರಿಗೆ ಇಲಾಖೆ, ಮಾರ್ಚ್ 31ರೊಳಗೆ ರಹಸ್ಯ ನಗದು ಹೊಂದಿರುವವರು ತಮ್ಮ ಕಪ್ಪು ಹಣವನ್ನು ಘೋಷಿಸುವಂತೆ ತಾಕೀತು ಮಾಡಿದೆ.   ಈ ಸಂಬಂಧ ಇಂದು ರಾಷ್ಟ್ರೀಯ ಪ್ರಮುಖ ದಿನಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟವಾಗಿದ್ದು, ಕ್ಷಣಗಣನೆ ಆರಂಭವಾಗಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (ಪಿಎಂಜಿಕೈವೆ) ಗವಾಕ್ಷಿ ಮಾರ್ಚ್ 31ರಂದು ಬಂದ್ ಆಗಲಿದೆ. ಆಷ್ಟರೊಳಗೆ ಕಾಳಧನಿಕರು ತಮ್ಮ ಕಪ್ಪು ಹಣವನ್ನು ಘೋಷಿಸಿಕೊಳ್ಳಬೇಕು ಇಲ್ಲದಿದ್ದರೆ ಪಶ್ಚಾತ್ತಾಪ ಅನುಭವಿಸಬೇಕು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.

ನಿಮ್ಮ ಠೇವಣಿಗಳ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಇದೆ. ತಮ್ಮ ಕಾಳಧನ, ಅಕ್ರಮ ಸಂಪತ್ತು ಮತ್ತು ನಿಧಿಗಳನ್ನು ಈ ಯೋಜನೆ ಅಡಿ ಘೋಷಿಸಿಕೊಳ್ಳುವ ಮಂದಿಯ ಮಾಹಿತಿಯನ್ನು ಸಂಪೂರ್ಣ ಗೋಪ್ಯವಾಗಿಡಲಾಗುವುದು ಎಂದು ಐಟಿ ತಿಳಿಸಿದೆ. ಈ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳಿ ಇಲ್ಲದಿದ್ದರೆ ಬೇನಾಮಿ ಕಾನೂನು ಅಡಿ ಕಠಿಣ ಕ್ರಮ ಎದುರಿಸಿ ಎಂದು ಈ ಹಿಂದೆ ಕಾಳಧನಿಕರಿಗೆ ಐಟಿ ಎಚ್ಚರಿಕೆ ನೀಡಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin