ಮಾರ್ಚ್ 6 ರಂದು ನಟಿ ಅಮೂಲ್ಯ ನಿಶ್ಚಿತಾರ್ಥ, ಹುಡುಗ ಯಾರು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Amulya-02

ಬೆಂಗಳೂರು.ಫೆ.23. : ಚೆಲುವಿನ ಚಿತ್ತಾರ ಸಿನಿಮಾದ ಮೂಲಕ ‘ಐಶು’ ಎಂದೇ ಖ್ಯಾತಿಯಾಗಿದ್ದ ಅಮೂಲ್ಯ ಶೀಘ್ರದಲ್ಲೇ ಜಗದೀಶ್‌ ಎಂಬುವರನ್ನು ವರಿಸಲಿದ್ದಾರೆ.  ಶ್ರಾವಣಿ ಸುಬ್ರಮಣ್ಯ ಚೆಲುವೆ ಅಮೂಲ್ಯಾ ಆರ್ ಆರ್ ನಗರದ ಮಾಜಿ ಕಾರ್ಪೊರೇಟರ್ ರಾಮಚಂದ್ರ ಅವರ ಪುತ್ರ ಜಗದೀಶ್ರ ಜೊತೆ ಹಸೆಮಣೆ ಏರಲಿದ್ದಾರೆ. ಮಾರ್ಚ್ 6ಕ್ಕೆ ರಾಜರಾಜೇಶ್ವರಿ ನಗರದಲ್ಲಿ ನಿಶ್ಚಿತಾರ್ಥ ನಡೆಯಲಿದ್ದು ಇಂದು ಗುಡ್ಡಹಳ್ಳಿಯ ಅಮೂಲ್ಯ ನಿವಾಸದಲ್ಲಿ ಹುಡುಗಿ ನೋಡೋ ಶಾಸ್ತ್ರ ನೆರವೇರಿದೆ.  ನಟಿ ಅಮೂಲ್ಯಗೆ ಜಗದೀಶ್ರ ಪರಿಚಯ ಮಾಡಿಸಿದ್ದು ಶಿಲ್ಪಾ ಗಣೇಶ್. ಅವರೇ ಮುಂದೆ ನಿಂತು ಎರಡೂ ಕುಟುಂಬದ ಜೊತೆ ಈ ಮದುವೆ ಮಾತುಕತೆ ಮಾಡಿದ್ದಾರೆ. ಅಮೂಲ್ಯಾ ತಾಯಿ ವಿಜಯಲಕ್ಷ್ಮೀ ಮತ್ತು ಸೋದರ ದೀಪಕ್ ಮದುವೆ ವಿಚಾರವನ್ನ ಖಚಿತಪಡಿಸಿದ್ದಾರೆ. ಅಮೂಲ್ಯಾ ಮದುವೆಯಾಗಲಿರೋ ಜಗದೀಶ್ ಲಂಡನ್ನಲ್ಲಿ ಎಂಬಿಎ ಮುಗಿಸಿದ್ದಾರೆ.

Amulya

ನಟಿ ಅಮೂಲ್ಯ ಬಿಕಾಂ ಮುಗಿಸಿದ್ದು, ಸದ್ಯ ಗಣೇಶ್ ಜೊತೆ ಮುಗುಳು ನಗೆ ಮತ್ತು ದುನಿಯಾ ವಿಜಿ ಅಭಿನಯದ ಮಾಸ್ತಿ ಗುಡಿ ಚಿತ್ರಗಳಲ್ಲಿ ಅಭಿನಯಿಸಿದ್ಧ್ಯ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಮಾರ್ಚ್ 6ರಂದು ನಿಶ್ಚಿತಾರ್ಥ ನಡೆದ ನಂತರ ಮದುವೆಯ ದಿನಾಂಕ ನಿಗದಿಯಾಗಲಿದೆ.  ಮಾರ್ಚ್ 6 ರಂದು ಅಮೂಲ್ಯ ಅವರ ನಿಶ್ಚಿತಾರ್ಥ ನಡೆಯಲಿದೆ. ಬೆಂಗಳೂರಿನವರಾದ ಜಗದೀಶ್‌ ಲಂಡನ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ ಎನ್ನಲಾಗಿದೆ.  ಅಮೂಲ್ಯ ಮತ್ತು ಜಗದೀಶ್‌ ವಿವಾಹಕ್ಕೆ ಎರಡು ಕುಟುಂಬದವರು ಒಪ್ಪಿ ನಿಶ್ಚಿತಾರ್ಥಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.  ಅಮೂಲ್ಯ ನಟಿಸಿರುವ ‘ಮಾಸ್ತಿಗುಡಿ’ ಸಿನಿಮಾ ಈಗಾಗಲೇ  ಬಿಡುಗಡೆಗೆ ಸಿದ್ಧವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Amulya-1

Facebook Comments

Sri Raghav

Admin