ಮಾರ್ಷಲ್ ಆರ್ಟ್ ಕಲಿಯುತ್ತಿರುವ ವಿರಾಟ್ ಕೊಹ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

Virat-Kohli

ಫ್ಲೋರಿಡಾ, ಆ.26– ಏಕದಿನ, ಟೆಸ್ಟ್ ಹಾಗೂ ಟಿ-20 ಸೇರಿದಂತೆ ಮೂರು ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ವಿರಾಟ್ ಕೊಹ್ಲಿ ಅವರು ಮಾರ್ಷಲ್ ಆರ್ಟ್ (ಸಮರ ಕಲೆ) ಕಲಿಯಲು ಉತ್ಸಾಹರಾಗಿದ್ದಾರೆ.  ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಎರಡು ಟಿ-20 ಪಂದ್ಯಗಳನ್ನು ಆಡಲಿದ್ದು, ಸದ್ಯ ಅಮೆರಿಕದಲ್ಲಿರುವ ವಿರಾಟ್ ಕೊಹ್ಲಿ, ಕೆನಡಾದ ಮಾರ್ಷಲ್ ಆರ್ಟಿಸ್ಟ್ ಜಾರ್ಜಸ್ ಸೆಂಟ್ ಪಿಯರೆ ಅವರನ್ನು ಭೇಟಿ ಮಾಡಿ ಮಾರ್ಷಲ್ ಆರ್ಟ್ ಕಲೆಯನ್ನು ಹೇಳಿಕೊಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪಿದ ಸೆಂಟ್ ಪಿಯರ್ ಕೊಹ್ಲಿಗೆ ಮಾರ್ಷಲ್ ಆಟ ಹೇಳಿಕೊಡುವುದಾಗಿ ಒಪ್ಪಿಕೊಂಡಿದ್ದಾರೆ. ಕ್ರಿಕೆಟ್ನಲ್ಲಿ ಕಮಾಲ್ ಮಾಡುತ್ತಿರುವ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಾರ್ಷಲ್ ಆಟ ಕಲಿಯಲು ಆಸಕ್ತಿ ತೋರುವ ಬಗ್ಗೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin