ಮಾಲಿಕರನ್ನೆ ಕೂಡಿ ಹಾಕಿ ಕೈಗೆ ಸಿಕ್ಕಿದ್ದನ್ನು ದೋಚಿ ಹೋದ ಕಳ್ಳ

ಈ ಸುದ್ದಿಯನ್ನು ಶೇರ್ ಮಾಡಿ

ಶಿವಮೊಗ್ಗ, ಅ.13- ಕಳ್ಳತನ ಮಾಡುತ್ತಿದ್ದಾಗ ಮನೆಯವರು ಎಚ್ಚರಗೊಂಡಿದ್ದರಿಂದ ಕಳ್ಳ ಕೈಗೆ ಸಿಕ್ಕಿದ ಹಣದೊಂದಿಗೆ ಮುಂಬಾಗಿಲು ಬೀಗ ಹಾಕಿಕೊಂಡು ಮನೆ ಮುಂದೆ ನಿಲ್ಲಿಸಲಾಗಿದ್ದ ಬೈಕನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ತುಂಗಾನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಿಯಾಂಕ ಬಡಾವಣೆಯ ಮನೆಯೊಂದಕ್ಕೆ ಕಳ್ಳನೊಬ್ಬ ನುಗ್ಗಿ ಮನೆಯಲ್ಲಿದ್ದ ವಸ್ತುಗಳನ್ನು ಕದಿಯುವ ವೇಳೆ ಮಲಗಿದ್ದವರಿಗೆ ಎಚ್ಚರವಾಗಿದೆ. ಕಳ್ಳ ಕಳ್ಳ ಎಂದು ಕೂಗಿಕೊಳ್ಳುತ್ತಿದ್ದಂತೆ ಕಳ್ಳ ಮನೆಯಲ್ಲಿದ್ದ ಮೊಬೈಲ್, ಚಿನ್ನಾಭರಣ ಸೇರಿದಂತೆ ಹಲವು ವಸ್ತುಗಳನ್ನು ದೋಚಿ ಮನೆಯ ಮುಂಬಾಗಿಲಿನ ಬೀಗ ಹಾಕಿ ಮನೆಯವರಿಗೆ ಸೇರಿದ ಬೈಕನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಈ ಬಗ್ಗೆ ತುಂಗಾನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin