ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಹೈಡ್ರಾಮಾ

ಈ ಸುದ್ದಿಯನ್ನು ಶೇರ್ ಮಾಡಿ

PCBK

ಬೆಂಗಳೂರು, ಏ.24- ಸಮಸ್ಯೆ ಆಲಿಸಿ ಸ್ವೀಕರಿಸಲು ಅಧ್ಯಕ್ಷರು ಸ್ಥಳಕ್ಕೆ ಬರಲಿಲ್ಲ ಎಂದು ವ್ಯಕ್ತಿಯೊಬ್ಬ ಕೈ ಕುಯ್ದುಕೊಳ್ಳಲು ಮುಂದಾಗಿ ಹೈಡ್ರಾಮಾ ನಡೆಸಿದ ಪ್ರಸಂಗ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಜರುಗಿತು. ಕೆಲವು ದಿನಗಳಿಂದ ಶಾಂತಿನಗರ ವಾರ್ಡ್‍ನ ಹಲವು ಪ್ರದೇಶಗಳಲ್ಲಿ ಕಾವೇರಿ ನೀರಿನಲ್ಲಿ ಬಣ್ಣ ಮಿಶ್ರಿತ ನೀರು ಬರುತ್ತಿದ್ದು, ಈ ಬಗ್ಗೆ ಮಂಡಳಿಗೆ ದೂರು ಸಲ್ಲಿಸಿದ್ದರೂ ಯವುದೇ ಕ್ರಮಕೈಗೊಂಡಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.ಇಂದು ನವಭಾರತ ಪ್ರಜಾಸತ್ತಾತ್ಮಕ ಪಕ್ಷ ಮತ್ತು ಶಾಂತಿನಗರ ವಾರ್ಡ್ ಜನರು ಮಾಲಿನ್ಯ ನಿಯಂತ್ರಣ ಮಂಡಳಿಗೆ ತೆರಳಿ ದೊಡ್ಡ ಪತ್ರ ಮುಖೇನ ದೂರು ಸಲ್ಲಿಸಿದ್ದಾರೆ.
ಈ ವೇಳೆ ಮಂಡಳಿಯ ಅಧ್ಯಕ್ಷರು ಮನವಿ ಸ್ವೀಕರಿಸಲು ಆಗಮಿಸಲಿಲ್ಲೆ ಂದು ರೊವ್ಯಾಂಡ್ ಎಂಬ ವ್ಯಕ್ತಿ ತನ್ನ ಕೈ ಕುಯ್ದುಕೊಳ್ಳಲು ಮುಂದಾಗಿದ್ದಾನೆ. ಕೂಡಲೇ ಅಲ್ಲಿದ್ದ ಜನ ಅದನ್ನು ತಡೆದಿದ್ದಾರೆ.

ನೋಟೀಸ್ ನೀಡಿದ್ದೇವೆ:

ಈ ಮಧ್ಯೆ ಮನವಿ ಸ್ವೀಕರಿಸಿರುವ ಮಂಡಳಿ ಸದಸ್ಯ ಕಾರ್ಯದರ್ಶಿ ಶಾಂತಪ್ಛ್ಪ ಅವರು ಮೂರು ರೇಷ್ಮೆ ಕಾರ್ಖಾನೆಗಳಿಗೆ ಕಾರ್ಖಾನೆ ಮುಚ್ಚುವಂತೆ ಕ್ಲೋಸಿಂಗ್ ಆರ್ಡರ್ ನೀಡಿದ್ದೇವೆ ಎಂದು ತಿಳಿಸಿದ್ದಾರೆ.  ಒಂದು ವೇಳೆ ಕಾರ್ಖಾನೆ ಮುಚ್ಚದಿದ್ದರೆ ಅವುಗಳಿಗೆ ಪೂರೈಸುತ್ತಿರುವ ವಿದ್ಯುತ್ತನ್ನು ಕಡಿತಗೊಳಿಸುವುದಾಗಿ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin