ಮಾಸ್ತಿಗುಡಿ ದುರಂತ ‘ಕ್ಲೈಮಾಕ್ಸ್’ : ಉದಯ್ ಮತ್ತು ಅನಿಲ್ ಗಾಗಿ ಮುಂದುವರೆದ ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

Mastigudi-01

ಬೆಂಗಳೂರು, ನ.8- ಚಿತ್ರಕರಣದ ವೇಳೆ ನಡೆದ ಅನಾವುತವೊಂದರಲ್ಲಿ ಇಬ್ಬರು ಕಲಾವಿದರು ಮೃತಪಟ್ಟಿರುವ ದುರಂತ ಘಟನೆ ನಡೆದಿದೆ. ಮೈನಾ ಚಿತ್ರ ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ನಾಗಶೇಖರ್ ನಿರ್ದೇಶನದ ಮಾಸ್ತಿಗುಡಿ ಚಿತ್ರದ ಚಿತ್ರೀಕರಣ ಇಂದು ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ನಡೆಯುತ್ತಿತ್ತು. ಕ್ಲೈಮಾಕ್ಸ್ ದೃಶ್ಯದ ಅಂತಿಮ ಹಂತದ ಚಿತ್ರಕರಣದ ವೇಳೆ ಹೆಲಿಕಾಫ್ಟರ್ನಿಂದ ಹಿರೋ ವಿಜಯ್ ಮತ್ತು ಇಬ್ಬರು ಖಳನಾಯಕರು ಕೆರೆಯ ನೀರಿಗೆ 100 ಮೀಟರ್ ಎತ್ತರದಿಂದ ಹಾರುವ ಸಾಹಸ ದೃಶ್ಯವಿತ್ತು. ಖಳನಾಯಕರಾದ ಉದಯ್ ಮತ್ತು ಅನಿಲ್ ಮೊದಲು ಹಾರಿದ್ದು, ಹಿಂದೆಯೇ ನಾಯಕ ನಟ ದುನಿಯಾ ವಿಜಯಾ ಜಿಗಿದಿದ್ದಾರೆ.
ಆದರೆ ಮೊದಲೇ ನಿರ್ಧರಿಸಿದಂತೆ ಬೋಟ್ ಬಂದು ಇವರನ್ನು ರಕ್ಷಿಸಬೇಕಿತ್ತು, ದುರದೃಷ್ಟವಶಾತ್ ಅವರನ್ನು ರಕ್ಷಿಸಬೇಕಿದ್ದ ಬೋಟ್ ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ತಕ್ಷಣಕ್ಕೆ ತಲುಪಲಾಗಿಲ್ಲ. ಅದೇ ವೇಳೆಗೆ ಅಲ್ಲೇ ಸಮೀಪದಲ್ಲಿದ್ದ ಮೀನುಗಾರರ ತೆಪ್ಪದಿಂದ ನಟ ದುನಿಯಾ ವಿಜಯ್ ಅವರನ್ನು ರಕ್ಷಿಸಲಾಗುತ್ತೆ. ಆದರೆ ಅನಿಲ್ ಮತ್ತು ಉದಯ್ ಅವರು ಈಜು ಬಾರದೇ ನೀರಿನಲ್ಲಿ ಮುಳುಗಿದ್ದರು, ವಿಜಯ್ ಅವರನ್ನು ಮಾತ್ರ ರಕ್ಷಿಸಲು ಸಾಧ್ಯವಾಯಿತು. ಉದಯ್ ಮತ್ತು ಅನಿಲ್ ಆಗಲೇ ನೀರಿನಾಳ ಸೆರಿದ್ದರು.

ಮಾಹಿತಿ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಊರಿನಿಂದ ಈಜು ತಜ್ಞರು, ಪೊಲೀಸರು ಉದಯ್ ಮತ್ತು ಅನಿಲ್ ಗಾಗಿ ಹುಡುಕಾಟ ಆರಂಭಿಸಿದರು. ಆರೆ ಅವರ ಸುಳಿವೂ ಕುಡ ಸಿಗಲಿಲ್ಲ. ಈ ಹೊತ್ತಿಗಾಗ ಚಿತ್ರರಂಗ ಮತ್ತು ಕರ್ನಾಟಕವನ್ನು ಎದೆ ನಡುಗಿಸುವಂತಹ ಸುದ್ದು ಹೊರಬಿದ್ದಿತ್ತು. ಈ ದುರಂತದಲ್ಲಿ ಉದಯ್ ಹಾಗೂ ಅನಿ ಸಾವನ್ನಪ್ಪಿಸುವ ಸುದ್ದಿ ಬರಸಿಡಿಲಿನಂತೆ ಬಂದೆರಗಿತ್ತು.

aaaani-'

2.48ಕ್ಕೆ ಘಟನೆ ನಡೆದಿದ್ದು ಸಂಜೆಯ ರಾತ್ರಿಯಾದರೂ ಉದಯ್ ಮತ್ತು ಅನಿಲ್ ದೇಹಗಳು ಪತ್ತೆಯಾಗಿಲ್ಲ. ನಂತ ಬಂದ ಎನ್ ಡಿ ಆರ್ ಎಫ್ ತಂಡ ೆರಡು ವಿಷೇಶ ಬೋಟ್ ಗಳ ಮೂಲಕ ಮಧ್ಯರಾತ್ರವರೆಗೂ ಹುಡುಕಾಟ ನಡೆಸಿದರೂ ದೇಹಗಳು ಪತ್ತೆಯಾಗಲಿಲ್ಲ. ರಾತ್ರಿಯಾದುದರಿಂದ ಕತ್ತಲಲ್ಲಿ ಶೋಧ ಕಾರ್ಯ ನಡೆಸಲು ಸಾದ್ಯವಾಗುತ್ತಿರಲಿಲ್ಲ ಶೂಟಿಂಗ್ ಲೈಟ್ ಗಳನ್ನೇ ಬಳಸಿಕೊಂಡು ಹುಡುಕಾಟ ಮಾಡಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ
ಎಂದು ಶೋಧಕಾರ್ಯ ಸ್ಥಗಿತಗೊಳಿಸಲಾಗಿತ್ತು.. ಇಂದು ಬೆಳಿಗ್ಗೆ 7 ಗಂಟೆಯಿಂದ ಮತ್ತೆ ಶೋಧ ಕಾರ್ಯ ಮುಂದುವರೆದಿದ್ದು ಏನ್ ಡಿ ಆರ್ ಎಫ್ ಪಡೆ ವಿಶೇಷ ಬೋಟ್ ಗಳ ಮೂಲಕ ಶೋಧ ಕಾರ್ಯ ಆರಂಭಿಸಿದೆ.

>ಕುಟುಂಬದವರ ಆಕ್ರಂದನ : ನೆನಪಿರಲಿ ಪ್ರೇಮ್, ಧ್ರವ ಸರ್ಜಾ, ಬುಲೆಟ್ ಪ್ರಕಾಶ್ ಸೇರಿದಂತೆ ಚಿತ್ರಂರಂಗದ ಅನೇಕರು ಸ್ಥಳಕ್ಕಾಗಮಿಸಿದರು.ಈ ಘಟನೆ ಉದಯ್ ಹಾಗೂ ಅನಿಲ್ ಮನೆಯವರಿಗೆ ತಿಳಿಯುತ್ತಿದ್ದಂತೆ ದೌಡಾಯಿಸಿದ ಕುಟುಂಬದರವ ರೋಧನ ಮುಗಿಲು ಮುಟ್ಟಿತ್ತು.

>ಈಜು ಬರುತ್ತಿರಲಿಲ್ಲ : ಘಟನೆಗೆ ಕಾರಣ ಮುಖ್ಯವಾಗಿ ಬೊಟ್ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷ ಎನ್ನಲಾಗಿದೆ, ಇನ್ನೊಂದು ಸಂಗತಿಯೇನೆಂದರೆ ಉದಯ್ ಹಾಗೂ ಅನಿಲ್ ಮನೆಯವರ ಹೇಳಿಕೆಯ ಪ್ರಕಾರ ಅವರಿಗೆ ಈಜು ಬರುತ್ತಿರಲಿಲ್ಲವಂತೆ. ಸಾಹಸದ ನೆಪದಲ್ಲಿ ದುಸ್ಸಾಹಸಕ್ಕೆ ಮುಂದಾಗಿದ್ದೇ ಅವಘಡಕ್ಕೆ ಕಾರಣವಾಗಿದೆ. ಬೆಳಿಗ್ಗೆಯಿಂದ ನಿರಂತರವಾಗಿ ಶೂಟಿಂಗ್ ನಡೆಸಿದ್ದು, ಬಳಲಿದ್ದ ಅನಿಲ್, ಉದಯ್ ಅವರಿಗೆ ಈಜು ಕೂಡ ಬರುತ್ತಿರಲಿಲ್ಲ. ಹೆಲಿಕಾಫ್ಟರ್ ಹತ್ತುವ ಮೊದಲು ಚಿತ್ರತಂಡದ ಬಳಿ ತಮಗೆ ಈಜು ಬರುವುದಿಲ್ಲ ಎಂಬುದನ್ನು ಅನಿಲ್ ಹೇಳಿಕೊಂಡಿದ್ದರೆನ್ನಲಾಗಿದೆ. ಸುಮಾರು 30 ಅಡಿ ಆಳದ ನೀರಿನಲ್ಲಿ ಹಾರಿದ ಇಬ್ಬರನ್ನು ರಕ್ಷಿಸಲು ಸಾಧ್ಯವಾಗದ ಕಾರಣ ಕೆಲವೇ ಕ್ಷಣಗಳಲ್ಲಿ ನೀರಿನಲ್ಲಿ ಮುಳುಗಿದ್ದಾರೆ.

> ಮೊದಲ ಬಾರಿಗೆ ಎತ್ತರದಿಂದ ಹಾರುತ್ತಿದ್ದೇನೆ : ಮೊದಲ ಬಾರಿಗೆ ಎತ್ತರದಿಂದ ಹಾರುತ್ತಿದ್ದೇನೆ, ಹೆಲಿಕಾಪ್ಟರ್ ಹತ್ತುತ್ತಿರುವುದು ಇದೇ ಮೊದಲು ದೇವರ ಮೇಲೆ ಭಾರ ಹಾಕಿ ಕೆಳಗೆ ಹಾರುತ್ತೇನೆ ಸಾವಿಗೂ ಕೆಲವೇ ನಿಮಿಷಗಳ ಮೊದಲು ಉದಯ್ ಹೇಳಿದ್ದರು.

> ಶೂಟ್ ಮುಗಿಸಿಬಂದು ಅನುಭವ ಹೇಳ್ತಿನಿ ಅಂದಿದ್ಧ ಅನಿಲ್ :
ಹೆಲಿಕಾಪ್ಟರ್’ನಲ್ಲಿ ಹತ್ತುತ್ತಿರುವುದು ಇದೇ ಮೊದಲು, ಶೂಟ್ ಮುಗಿಸಿಬಂದು ಅನುಭವ ಹೇಳ್ತಿನಿ ಅಂದಿದ್ಧ ಖಳ ನಟ ಅನಿಲ್ ಬಾರದ ಲೋಕಕ್ಕೆ ಪಯಣ ಬಳಸಿದ್ದಾರೆ. ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಹೆಲಿಕಾಪ್ಟರ್ನಿಂದ ಹಾರಿ 2 ನಿಮಿಷವಷ್ಟೇ ಈಜಿದ್ದ ಉದಯ್, ಅನಿಲ್ ಸಾವನ್ನಪ್ಪಿದ್ದಾರೆ.
ಒಂದು ಪ್ಲೋರ್ ಮೇಲಿನಿಂದ ಕೆಳಗೆ ಬಗ್ಗಿ ನೋಡಿದರೆ ನನಗೆ ತಲೆ ಸುತ್ತವಂತೆ ಆಗುತ್ತದೆ ಎನ್ನುವ ಖಳನಟ ಉದಯ್ ಇಂದು ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಜಲಾಶಯಕ್ಕೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.
> ಕಿಚ್ಚ ಕಂಬನಿ : ಅನಿಲ್ ಮತ್ತು ಉದಯ್ ಸಾವಿನ ಸುದ್ದಿ ನನ್ನ ಮನಸಿಗೆ ತುಂಬಾ ಘಾಸಿಯುಂಟುಮಾಡಿದೆ, ಅನಿಲ್ ಹೆಬ್ಬುಲಿ ಚಿತ್ರದಲ್ಲಿ ನನ್ನೊಟ್ಟಿಗೆ ನಟಿಸಿದ್ದರು , ಅವರು ತುಂಬಾ ಮುಗ್ದ ಹಾಗೂ ಶ್ರಮಜೀವಿಯಾಗಿದ್ದರು ಎಂದು ಕಿಚ್ಚ ಸುದೀಪ್ ಕಂಬನಿ ಮಿಡಿದಿದ್ದಾರೆ.
>ಜಗ್ಗೇಶ್ ಟ್ವೀಟ್ : ಮಾಸ್ತಿಗುಡಿ ಚಿತ್ರೀಕರಣದ ವೇಳೆ ಖಳನಟರಾದ ಉದಯ್ ಮತ್ತು ಅನಿಲ್ ಸಾವಿನ ಕುರಿತು ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ ನಟ ಜಗ್ಗೇಶ್ ‘ಬಡತನದಿಂದ ಬಂದ ಕಂದಮ್ಮಗಳು..ಎರಡು ತುತ್ತಿಗಾಗಿ ದೇಹಧಣಿಸಿ ತಯಾರಾಗಿದ್ದ ಬಗೆ ನನ್ನ ಕಣ್ಣಮುಂದಿದೆ.ಎದುರಿಗೆ ಸಿಕ್ಕರೆ ಬಾಯ್ ತುಂಬ ಅಣ್ಣಾಅಂತ ತಬ್ಬುತ್ತಿದ್ದರು.ಹೆಣವಾದರೆ!’ ರವಿವರ್ಮ ನೀನು ಅಡಿಮಟ್ಟದಿಂದ ಬಂದವನಾಗಿ ಬಡವರಮಕ್ಕಳ ತಳ್ಳಿ ಆಳನೋಡಿಬಿಟ್ಟೆಯಲ್ಲಾ. ದಿಕ್ಕಾರವಿರಲಿ ನಿನ್ನಡಬ್ಬ ಸಾಹಸಕ್ಕೆ! ಅಯ್ಯೋ ದೇವರೆ ನಾನುಕಂಡ ಬಡಮಕ್ಕಳು ಹೋಗಿಬಿಟ್ಟರು’ ಎಂದು ಪ್ರತಿಕ್ರಿಯಿಸಿದ್ದಾರೆ.

 

>ಕೇಸ್ ದಾಖಲು :  ಈ ದುರಂತಕ್ಕೆ ಸಂಬಂಧಿಸಿದಂತೆ ಸ್ವಯಂ ದೂರು ದಾಖಲಿಸಿಕೊಂಡ ಪೊಲೀಸರು ಚಿತ್ರತಂದಡ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ.  ಈ ಕುರಿತು ಮಾಹಿತಿ ನೀಡಿದ  ರಾಮನಗರ ಎಸ್ಪಿ ಡಾ.ಚಂದ್ರಗುಪ್ತ ಪ್ರತಿಕಿಯಿಸಿ ಚಿತ್ರತಂಡದ ನಿರ್ಲಕ್ಷ ಉಲ್ಲೇಖಿಸಿ ಚಿತ್ರದ ಮುಖ್ಯಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ತಾವರೆಕೆರೆ ಇನ್ಸ್ಪೆಕ್ಟರ್ ಗೆ ಸೂಚಿಸಲಾಗಿದೆ  ಎಂದು ತಿಳಿಸಿದರು.

>ಕಿಚ್ಚ ಕಂಬನಿ : ಅನಿಲ್ ಮತ್ತು ಉದಯ್ ಸಾವಿನ ಸುದ್ದಿ ನನ್ನ ಮನಸಿಗೆ ತುಂಬಾ ಘಾಸಿಯುಂಟುಮಾಡಿದೆ, ಅನಿಲ್ ಹೆಬ್ಬುಲಿ ಚಿತ್ರದಲ್ಲಿ ನನ್ನೊಟ್ಟಿಗೆ ನಟಿಸಿದ್ದರು , ಅವರು ತುಂಬಾ ಮುಗ್ದ ಹಾಗೂ ಶ್ರಮಜೀವಿಯಾಗಿದ್ದರು ಎಂದು ಕಿಚ್ಚ ಸುದೀಪ್ ಕಂಬನಿ ಮಿಡಿದಿದ್ದಾರೆ.

Mastigudi

► Follow us on –  Facebook / Twitter  / Google+

Uday-05

Facebook Comments

Sri Raghav

Admin