ಮಾಸ್ತಿಗುಡಿ ದುರಂತ ‘ಕ್ಲೈಮಾಕ್ಸ್’ : ಚಿತ್ರೀಕರಣದ ವೇಳೆ ಖಳನಟರಾದ ಉದಯ್, ಅನಿಲ್ ಸಾವು
ಉದಯ್ ಮತ್ತು ಅನಿಲ್
ಬೆಂಗಳೂರು, ನ.7- ಚಿತ್ರಕರಣದ ವೇಳೆ ನಡೆದ ಅನಾವುತವೊಂದರಲ್ಲಿ ಇಬ್ಬರು ಕಲಾವಿದರು ಮೃತಪಟ್ಟಿರುವ ಘಟನೆ ನಡೆದಿದೆ. ನಾಗಶೇಖರ್ ನಿರ್ದೇಶನದ ಮಾಸ್ತಿಗುಡಿ ಚಿತ್ರದ ಚಿತ್ರೀಕರಣ ಇಂದು ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ನಡೆಯುತ್ತಿತ್ತು. ಕ್ಲೈಮಾಕ್ಸ್ ದೃಶ್ಯದ ಅಂತಿಮ ಹಂತದ ಚಿತ್ರಕರಣದ ವೇಳೆ ಹೆಲಿಕಾಫ್ಟರ್ನಿಂದ ಹಿರೋ ಮತ್ತು ಇಬ್ಬರು ಖಳನಾಯಕರು ಕೆರೆಯ ನೀರಿಗೆ 100 ಮೀಟರ್ ಎತ್ತರದಿಂದ ಹಾರುವ ಸಾಹಸ ದೃಶ್ಯವಿತ್ತು. ಖಳನಾಯಕರಾದ ಉದಯ್ ಮತ್ತು ಅನಿಲ್ ಮೊದಲು ಹಾರಿದ್ದು, ಹಿಂದೆಯೇ ನಾಯಕ ನಟ ದುನಿಯಾ ವಿಜಯಾ ಜಿಗಿದಿದ್ದಾರೆ.
ತಕ್ಷಣವೇ ಬೋಟ್ ಕಲಾವಿದರು ಹಾರಿದ ಜಾಗಕ್ಕೆ ತಲುಪಿದೆ. ದುನಿಯಾ ವಿಜಯ್ ಅವರನ್ನು ರಕ್ಷಿಸಲಾಗಿದೆ. ಆದರೆ ಅನಿಲ್ ಮತ್ತು ಉದಯ್ ಅವರು ಮೇಲೆ ಬಂದಿಲ್ಲ. ಸುತ್ತ ಮುತ್ತ ಅವರನ್ನು ಹುಡುಕಲಾಗಿದೆ. ಆದರೆ ಲಭ್ಯವಾಗಿಲ್ಲ. ಅಕ್ಕಪಕ್ಕದ ಊರಿನಿಂದ ಈಜು ತಜ್ಞರನ್ನು ಕರೆಸಲಾಗಿದ್ದು ಮುಳುಗಿದ್ದ ಕಲಾವಿದರನ್ನು ಹುಡುಕಿಸಲಾಗಿದೆ. ಬಹಳಷ್ಟು ಹೊತ್ತು ಹುಡುಕಿದ ನಂತರವೂ ನೀರಿಗೆ ದುಮುಕಿದವರು ಪತ್ತೆಯಾಗಿಲ್ಲ. 2.48ಕ್ಕೆ ಘಟನೆ ನಡೆದಿದ್ದು ಸಂಜೆಯ ವೇಳೆಗೆ ಇಬ್ಬರು ಕಲಾವಿದರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಖಚಿತ ಪಡಿಸಿದ್ದಾರೆ. ಬೆಂಗಳೂರು ,ಮಾಗಡಿ ,ಚನ್ನಪಟ್ಟಣದಿಂದ ಆಗಮಿಸಿರುವ ಈಜು ತಜ್ಞರು ಮೃತ ದೇಹಗಳಿಗಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದ್ದಾರೆ.
> ಈಜು ಬರುತ್ತಿರಲಿಲ್ಲ : ಘಟನೆಗೆ ಕಾರಣ ಮುಖ್ಯವಾಗಿ ಬೊಟ್ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷ ಎನ್ನಲಾಗಿದೆ, ಇನ್ನೊಂದು ಸಂಗತಿಯೇನೆಂದರೆ ಉದಯ್ ಹಾಗೂ ಅನಿಲ್ ಮನೆಯವರ ಹೇಳಿಕೆಯ ಪ್ರಕಾರ ಅವರಿಗೆ ಈಜು ಬರುತ್ತಿರಲಿಲ್ಲವಂತೆ.
> ಮೊದಲ ಬಾರಿಗೆ ಎತ್ತರದಿಂದ ಹಾರುತ್ತಿದ್ದೇನೆ : ಮೊದಲ ಬಾರಿಗೆ ಎತ್ತರದಿಂದ ಹಾರುತ್ತಿದ್ದೇನೆ, ಹೆಲಿಕಾಪ್ಟರ್ ಹತ್ತುತ್ತಿರುವುದು ಇದೇ ಮೊದಲು ದೇವರ ಮೇಲೆ ಭಾರ ಹಾಕಿ ಕೆಳಗೆ ಹಾರುತ್ತೇನೆ ಸಾವಿಗೂ ಕೆಲವೇ ನಿಮಿಷಗಳ ಮೊದಲು ಉದಯ್ ಹೇಳಿದ್ದರು.
> ಶೂಟ್ ಮುಗಿಸಿಬಂದು ಅನುಭವ ಹೇಳ್ತಿನಿ ಅಂದಿದ್ಧ ಅನಿಲ್ :
ಹೆಲಿಕಾಪ್ಟರ್’ನಲ್ಲಿ ಹತ್ತುತ್ತಿರುವುದು ಇದೇ ಮೊದಲು, ಶೂಟ್ ಮುಗಿಸಿಬಂದು ಅನುಭವ ಹೇಳ್ತಿನಿ ಅಂದಿದ್ಧ ಖಳ ನಟ ಅನಿಲ್ ಬಾರದ ಲೋಕಕ್ಕೆ ಪಯಣ ಬಳಸಿದ್ದಾರೆ. ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಹೆಲಿಕಾಪ್ಟರ್ನಿಂದ ಹಾರಿ 2 ನಿಮಿಷವಷ್ಟೇ ಈಜಿದ್ದ ಉದಯ್, ಅನಿಲ್ ಸಾವನ್ನಪ್ಪಿದ್ದಾರೆ.
ಒಂದು ಪ್ಲೋರ್ ಮೇಲಿನಿಂದ ಕೆಳಗೆ ಬಗ್ಗಿ ನೋಡಿದರೆ ನನಗೆ ತಲೆ ಸುತ್ತವಂತೆ ಆಗುತ್ತದೆ ಎನ್ನುವ ಖಳನಟ ಉದಯ್ ಇಂದು ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಜಲಾಶಯಕ್ಕೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.
> ಕಿಚ್ಚ ಕಂಬನಿ : ಅನಿಲ್ ಮತ್ತು ಉದಯ್ ಸಾವಿನ ಸುದ್ದಿ ನನ್ನ ಮನಸಿಗೆ ತುಂಬಾ ಘಾಸಿಯುಂಟುಮಾಡಿದೆ, ಅನಿಲ್ ಹೆಬ್ಬುಲಿ ಚಿತ್ರದಲ್ಲಿ ನನ್ನೊಟ್ಟಿಗೆ ನಟಿಸಿದ್ದರು , ಅವರು ತುಂಬಾ ಮುಗ್ದ ಹಾಗೂ ಶ್ರಮಜೀವಿಯಾಗಿದ್ದರು ಎಂದು ಕಿಚ್ಚ ಸುದೀಪ್ ಕಂಬನಿ ಮಿಡಿದಿದ್ದಾರೆ.
Very upsetting to hear that demise of #anil&uday.. Anil worked wth me in Hebbuli..Silent n a very hard worker.. really sad. RIP
— Kichcha Sudeepa (@KicchaSudeep) November 7, 2016
ಜಗ್ಗೇಶ್ ಟ್ವೀಟ್ :
ಬೆಂಗಳೂರು. ನ. ೦7 : ಮಾಸ್ತಿಗುಡಿ ಚಿತ್ರೀಕರಣದ ವೇಳೆ ಖಳನಟರಾದ ಉದಯ್ ಮತ್ತು ಅನಿಲ್ ಸಾವಿನ ಕುರಿತು ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ ನಟ ಜಗ್ಗೇಶ್ ‘ಬಡತನದಿಂದ ಬಂದ ಕಂದಮ್ಮಗಳು..ಎರಡು ತುತ್ತಿಗಾಗಿ ದೇಹಧಣಿಸಿ ತಯಾರಾಗಿದ್ದ ಬಗೆ ನನ್ನ ಕಣ್ಣಮುಂದಿದೆ.ಎದುರಿಗೆ ಸಿಕ್ಕರೆ ಬಾಯ್ ತುಂಬ ಅಣ್ಣಾಅಂತ ತಬ್ಬುತ್ತಿದ್ದರು.ಹೆಣವಾದರೆ!’ ರವಿವರ್ಮ ನೀನು ಅಡಿಮಟ್ಟದಿಂದ ಬಂದವನಾಗಿ ಬಡವರಮಕ್ಕಳ ತಳ್ಳಿ ಆಳನೋಡಿಬಿಟ್ಟೆಯಲ್ಲಾ. ದಿಕ್ಕಾರವಿರಲಿ ನಿನ್ನಡಬ್ಬ ಸಾಹಸಕ್ಕೆ! :
ಅಯ್ಯೋ ದೇವರೆ ನಾನುಕಂಡ ಬಡಮಕ್ಕಳು ಹೋಗಿಬಿಟ್ಟರು’ ಎಂದು ಪ್ರತಿಕ್ರಿಯಿಸಿದ್ದಾರೆ
ಬಡತನದಿಂದ ಬಂದ ಕಂದಮ್ಮಗಳು..ಎರಡು ತುತ್ತಿಗಾಗಿ ದೇಹಧಣಿಸಿ ತಯಾರಾಗಿದ್ದ ಬಗೆ ನನ್ನ ಕಣ್ಣಮುಂದಿದೆ.ಎದುರಿಗೆ ಸಿಕ್ಕರೆ ಬಾಯ್ ತುಂಬ ಅಣ್ಣಾಅಂತ ತಬ್ಬುತ್ತಿದ್ದರು.ಹೆಣವಾದರೆ!
— ನವರಸನಾಯಕ ಜಗ್ಗೇಶ್ (@Jaggesh2) November 7, 2016
► Follow us on – Facebook / Twitter / Google+
#ರವಿವರ್ಮ ನೀನುಅಡಿಮಟ್ಟದಿಂದ ಬಂದವನಾಗಿ ಬಡವರಮಕ್ಕಳ ತಳ್ಳಿ ಆಳನೋಡಿಬಿಟ್ಟೆಯಲ್ಲಾ.ದಿಕ್ಕಾರವಿರಲಿ ನಿನ್ನಡಬ್ಬ ಸಾಹಸಕ್ಕೆ!ಅಯ್ಯೋ ದೇವರೆ ನಾನುಕಂಡ ಬಡಮಕ್ಕಳು ಹೋಗಿಬಿಟ್ಟರು
— ನವರಸನಾಯಕ ಜಗ್ಗೇಶ್ (@Jaggesh2) November 7, 2016
ನಡೆದದ್ದಿಷ್ಟು :
ಮಾಸ್ತಿಗುಡಿ ಚಲನಚಿತ್ರದ ಕ್ಲೈಮ್ಯಾಕ್ಸ್ ಚಿತ್ರಿಕರಿಸಲೆಂದು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ತೆರಳಿದ್ದರು. ಈ ವೇಳೆ ಹೆಲಿಕ್ಯಾಪ್ಟರ್ ನಿಂದ ಹಾರುವ ದೃಶ್ಯವನ್ನು ಚಿತ್ರೀಕರಿಸುವಾಗ ಮೇಲಿನಿಂದ ನೀರಿಗೆ ದುನಿಯಾ ವಿಜಿ ಸೇರಿದಂತೆ ಮೂವರು ಬಿದ್ದಿದ್ದು, ವಿಜಿಯನ್ನು ತೆಪ್ಪದ ಮೂಲಕ ರಕ್ಷಿಸಿದ್ದು,ಸರಿಯಾದ ಸಮಯಕ್ಕೆ ತೆಪ್ಪದ ವ್ಯೆವಸ್ಥೆ ಇಲ್ಲದೆ ಅರುಣ್ ಮತ್ತು ಉದಯ್ ಎಂಬ ಇಬ್ಬರು ಖಳನಟರು ನೀರಿನಲ್ಲಿ ಮುಳಗಿ ಮೃತ ಪಟ್ಟಿದ್ದಾರೆ . ತಿಪ್ಪಗೊಂಡನ ಜಲಾಶಯಕ್ಕೆ ಈಜು ತಜ್ಞರು ಆಗಮಿಸಿದ್ದು, ಇಬ್ಬರ ಶವಕ್ಕಾಗಿ ತೀವ್ರ ಹುಡುಕಾಟ ನಡೆಸುತ್ತಿರುವುದಾಗಿ . ತಾವರೆಕೆರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನಂದೀಶ್ ತಿಳಿಸಿದ್ದಾರೆ .ಈ ಬಗ್ಗೆ ರಾಮನಗರ ಎಸ್ಪಿ ಡಾ.ಚಂದ್ರಗುಪ್ತ ಪ್ರತಿಕಿಯಿಸಿ ಚಿತ್ರತಂಡದ ನಿರ್ಲಕ್ಷ ಉಲ್ಲೇಖಿಸಿ ಚಿತ್ರದ ಮುಖ್ಯಸ್ಥರ ವಿರುದ್ದ
ಕ್ರಿಮಿನಲ್ ಕೇಸ್ ದಾಖಲಿಸಲು ತಾವರೆಕೆರೆ ಇನ್ಸ್ಪೆಕ್ಟರ್ ಗೆ ಸೂಚಿಸಲಾಗಿದೆ .ಮೊದಲು ಇಬ್ಬರ ಶವಗಳ ಶೋಧಕ್ಕಾಗಿ ಆಧ್ಯತೆ ನೀಡಲಾಗಿದೆ .