ಮಾಸ್ತಿಗುಡಿ ದುರಂತದಲ್ಲಿ ಸಾವನ್ನಪ್ಪಿದ ಉದಯ್ ಮನೆಯಲ್ಲಿ ಮಡುಗಟ್ಟಿದ ಶೋಕ

ಈ ಸುದ್ದಿಯನ್ನು ಶೇರ್ ಮಾಡಿ

Uday-House-Mastigudi-Family

ತಿಪ್ಪಗೊಂಡನಹಳ್ಳಿ, ನ.8- ಮಾಸ್ತಿಗುಡಿ ಚಿತ್ರೀಕರಣದ ವೇಳೆ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ನಟ ಉದಯ್ ಮನೆಯಲ್ಲಿ ಶೋಕ ಮಡುಗಟ್ಟಿದೆ. ಊಟ, ನಿದ್ದೆ ಬಿಟ್ಟು ಮಗನ ಬರುವಿಕೆಗಾಗಿ ಪೋಷಕರು ಕಾಯುತ್ತಿದ್ದಾರೆ. ನಿನ್ನೆ ಚಿತ್ರೀಕರಣ ಸನ್ನಿವೇಶದಲ್ಲಿ ಹೆಲಿಕಾಪ್ಟರ್‍ನಿಂದ ತಿಪ್ಪಗೊಂಡನಹಳ್ಳಿ ಕೆರೆಗೆ ಜಿಗಿದು ಪ್ರಾಣ ಕಳೆದುಕೊಂಡಿದ್ದಾನೆ ಎಂಬ ಸುದ್ದಿ ತಿಳಿದರೂ ಉದಯ್‍ನ ತಾಯಿ ಕೌಸಲ್ಯ ಮಾತ್ರ ನನ್ನ ಮಗ ಬಂದೇ ಬರುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದರು. ಉದಯ್ ಅವರ ನೆರೆ ಮನೆಗಳಲ್ಲಿ ದುಃಖ ಮಡುಗಟ್ಟಿದೆ. ಅವರ ಸಂಬಂಧಿಕರಲ್ಲಿ ಆಕ್ರಂಧನ ಮುಗಿಲು ಮುಟ್ಟಿದೆ. ಉದಯ್ ಕುಟುಂಬಸ್ಥರು, ಸಂಬಂಧಿಕರ ರೋದನ, ಆಕ್ರಂಧನದಿಂದ ಕರುಳು ಕಿತ್ತು ಬರುತ್ತಿತ್ತು.

ಉದಯ್ ತಾಯಿಯ ಕಣ್ಣೀರು ಬತ್ತಿ ಹೋಗಿತ್ತು. ನಮ್ಮ ಗೋಳು ಯಾರೂ ಕೇಳುವವರಿಲ್ಲ. ತಮ್ಮ ತಮ್ಮ ಅಂತ ಕರೆಯುತ್ತಿದ್ದ ವಿಜಯ್ ತಮ್ಮನನ್ನು ನೀರಿಗೆ ತಳ್ಳಿದ್ದಾನೆ. ನನ್ನ ಮಗನಿಗೆ ಈಜು ಬರುತ್ತಿರಲಿಲ್ಲ, ಜ್ವರ ಬೇರೆ ಇತ್ತು, ಅವನ ತಲೆಗೆ ಪೆಟ್ಟಾಗಿತ್ತು. ಬಲವಂತವಾಗಿ ನಟನೆ ಮಾಡುವಂತೆ ನೀರಿಗೆ ತಳ್ಳಿದ್ದಾರೆ ಎಂದು ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ತಳೆಯಲಾರದೆ ಉದಯ್ ತಾಯಿ ಹೇಳುತ್ತಿದ್ದರು. ನನ್ನ ನೋವು ಯಾವ ತಾಯಿಗೂ ಬರದಿರಲಿ. ಕಣ್ಣೆದುರೇ ಬೆಳೆದು ನಿಂತ ನನ್ನ ಮಗ  ಉದಯ್ ಚಿಕ್ಕಪ್ಪ ಶ್ರೀನಿವಾಸ್ ಸಿನಿಮಾ ತಂಡ ಹಾಗೂ ದುನಿಯಾ ವಿಜಿ ಅವರ ಮನೆಯವರ ಮೇಲೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ( ಇದನ್ನೂ ಓದಿ : ಮಾಸ್ತಿಗುಡಿ ಘೋರ ದುರಂತಕ್ಕೆ ಯಾರು ಹೊಣೆ..? : ನಿರ್ಲಕ್ಷಕ್ಕೆ ಸಾಕ್ಷಿಯಾಯಿತೇ ಕ್ಲೈಮ್ಯಾಕ್ಸ್..! )

ನಮ್ಮ ನೋವು ಯಾರಿಗೂ ಅರ್ಥವಾಗುತ್ತಿಲ್ಲ. ಸಿನಿಮಾ ತಂಡದವರಿಗೆ ಮಾನವೀಯತೆ ಇಲ್ಲ. ಇಷ್ಟೆಲ್ಲ ದುರಂತ ನಡೆದರೂ ಕುಟುಂಬಕ್ಕೆ ಸಾಂತ್ವನ ಹೇಳುವ ಸೌಜನ್ಯ ಕೂಡ ಯಾರಿಗೂ ಇಲ್ಲ ಎಂದು ನೋವು ವ್ಯಕ್ತಪಡಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin