ಮಾಸ್ತಿಗುಡಿ ದುರಂತ : ಚಿತ್ರತಂಡದ ಮೇಲೆ ಹೇರಿದ್ದ ನಿಷೇಧ ವಾಪಸ್

ಈ ಸುದ್ದಿಯನ್ನು ಶೇರ್ ಮಾಡಿ

Mastugudi-Press-Meet

ಬೆಂಗಳೂರು ಡಿ.30 : ಮಾಸ್ತಿಗುಡಿ ದುರಂತಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ದೇಶಕ ನಾಗಶೇಖರ್, ನಟ ದುನಿಯಾ ವಿಜಯ್, ಸಾಹಸ ನಿರ್ದೇಶಕ ರವಿವರ್ಮ ಮತ್ತು ನಿರ್ಮಾಪಕ ಸುಂದರ್ ಗೌಡ ಮೇಲೆ ಹೇರಿದ್ದ ತಾತ್ಕಾಲಿಕ ನಿಷೇಧವನ್ನು ಹಿಂದಕ್ಕೆ ಪಡೆಯಲಾಗಿದೆ. ವಿವಾದ ಕುರಿತಂತೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿಂದು ಚಿತ್ರ ತಂಡ ಮತ್ತು ಫಿಲಂ ಚೇಂಬರ್  ನಿಂದ ನಡೆದ ಜಂಟಿ ಸುದ್ದಿಘೋಷ್ಠಿ ವೇಳೆ ನಿರ್ದೇಶಕ ನಾಗಶೇಖರ್, ನಟ ದುನಿಯಾ ವಿಜಯ್, ಸಾಹಸ ನಿರ್ದೇಶಕ ರವಿವರ್ಮ ಮತ್ತು ನಿರ್ಮಾಪಕ ಸುಂದರ್ ಗೌಡ ಮೇಲೆ ಹೇರಿದ್ದ ತಾತ್ಕಾಲಿಕ ನಿಷೇಧವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಫಿಲಂ ಚೇಂಬರ್ ಅಧ್ಯಕ್ಷ ಸಾ .ರಾ. ಗೊವಿಂದು ತಿಳಿಸಿದರು.

ನಾವು ಹೇರಿದ್ದ ನಿಷೇಧಕ್ಕೆ ಚಿತ್ರತಂಡ ಸ್ಪಂದಿಸಿತ್ತು. ನ್ಯಾಯಾಂಗಕ್ಕೆ ಎಲ್ಲರೂ ತಲೆ ಬಾಗಲೇಬೇಕು, ಗೌರವಿಸಬೇಕು. ಹಾಗಾಗಿ ಅನಿಲ್ ಉದಯ್ ಕುಟುಂಬಗಳ ಜೊತೆಯೂ ಚರ್ಚಿಸಿದ ಬಳಿಕವೆ ಈ ನಿಷೇಧವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದರು. ಚಿತ್ರರಂಗದಲ್ಲಿ ಶಿಸ್ತು ಪಾಲಿಸೋ ನಿಟ್ಟಿನಲ್ಲಿ ನಟ ಅಂಬರೀಶ್ ಮನೆಯಲ್ಲಿ ಚರ್ಚಿಸಲಾಗಿದೆ, ಈ ಘಟನೆಯಿಂದ ಇಡೀ ಭಾರತೀಯ ಚಿತ್ರರಂಗ ದಿಗ್ಭ್ರಾಂತಗೊಂಡಿತ್ತು. ಮತ್ತೆ ಈ ರೀತಿಯ ದುರಂತಗಳು ಮರುಕಳಿಸಬಾರದು. ಮೃತರ ಕುಟುಂಬಗಳಿಗೆ ನೆರವಾಗಲು ಇಡೀ ರಾಜ್ಯವೇ ಮುಂದಾಗಿದೆ. ನಿರ್ಬಂಧ ಹಿಂಪಡೆದ ಹಿನ್ನೆಲೆಯಲ್ಲಿ ಚಿತ್ರತಂಡ ಆದಷ್ಟು ಬೇಗ ಚಿತ್ರವನ್ನು ರಿಲೀಸ್ ಮಾಡಲಿ ಎಂದು ರಾಕ್ ಲೈನ್ ವೆಂಕಟೇಶ್ ಹೇಳಿದರು.

ಕಣ್ಣೀರಿಟ್ಟ ನಾಗಶೇಖರ್ :

ಮಾಸ್ತಿಗುಡಿ ಚಿತ್ರದ ಸಾಹಸ ಚಿತ್ರೀಕರಣ ವೇಳೆ ಮೃತಪಟ್ಟ ಅನಿಲ್ ಮತ್ತು ಉದಯ್ ಅವರನ್ನು ನೆನೆದು ಮಾದ್ಯಮದವರೆದುರು ಚಿತ್ರದ ನಿರ್ದೇಶಕ ನಾಗಶೇಖರ್ ಕಣ್ಣೀರಿಟ್ಟರು. ದುನಿಯಾ ವಿಜಯ್ ಕೂಡ ಮಾತಿನ ಮಧ್ಯೆ ಭಾವುಕರಾದರು. ಘಟನೆಗೆ ಪರೋಕ್ಷವಾಗಿ ಕಾರಣರಾದ ಸಾಹಸ ನಿರ್ದೇಶಕ ರವಿವರ್ಮ ಕೈಮುಗಿದು ಕ್ಷಮೆಕೋರಿದರು. ಹಾಗೂ ಅನಿಲ್ ಮತ್ತು ಉದಯ್ ಮನೆಯವರಲ್ಲೂ ಕ್ಷಮೆ ಯಾಚಿಸಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin