ಮಾಸ್ತಿಗುಡಿ ದುರಂತ : ನಾಗಶೇಖರ್, ದುನಿಯಾ ವಿಜಿ ಮತ್ತು ರವಿವರ್ಮಗೆ ತಾತ್ಕಾಲಿಕ ನಿರ್ಬಂಧ

ಈ ಸುದ್ದಿಯನ್ನು ಶೇರ್ ಮಾಡಿ

saragovindu

ಬೆಂಗಳೂರು. ನ. 09 : ಮಾಸ್ತಿಗುಡಿ ಚಿತ್ರದ ಶೂಟಿಂಗ್ ವೇಳೆ ನಡೆದ ದುರಂತಕ್ಕೆ ಸಂಬಂಧಿಸಿದಂತೆ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ಸಭೆ ನಡೆಸಿ ಮಾಸ್ತಿಗುಡಿ ಚಿತ್ರದ ಚಿತ್ರದ ನಾಯಕ ದುನಿಯಾ ವಿಜಿ, ನಿರ್ದೇಶಕ ನಾಗಶೇಖರ್ ಮತ್ತು ಸಾಹಸ ನಿರ್ದೇಶಕ ರವಿವರ್ಮಗೆ ತಾತ್ಕಾಲಿಕ ನಿರ್ಬಂಧ ಹೇರುವ ನಿರ್ಧಾರಕ್ಕೆ ಬಂದಿದ್ದಾರೆ. ಸಭೆಯ ನಂತರ ಸುದ್ದಿಘೋಷ್ಠಿ ನಡೆಸಿದ ಅವರು, ಮುಂಜಾಗ್ರತೆ ಕೈಗೊಳ್ಳದೆ ಇಬ್ಬರು ಖಳನಟರು ಸಾವಿಗೀಡಾದ ಹಿನ್ನೆಲೆಯಲ್ಲಿ ಮಾಸ್ತಿಗುಡಿ ಚಿತ್ರದ ನಾಯಕ ದುನಿಯಾ ವಿಜಯ್ , ನಿರ್ದೇಶಕ ನಾಗಶೇಖರ್ ಮತ್ತು ಸಾಹಸ ನಿರ್ದೇಶಕ ರವಿವರ್ಮಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಿದರು. ಅವರ ಮುಂದಿನ ಆದೇಶ ಬರುವ ವರೆಗೂ ಯಾವುದೇ ಚಿತ್ರೀಕರಣದಲ್ಲಿ ಭಾಗವಹಿಸಬಾರದು, ಕಾನೂನು ಪ್ರಕ್ರಿಯೆ ಮುಗಿದ ಮೇಲೆ ಅವರೊಟ್ಟಿಗೆ ಕೂತು ಚರ್ಚಿಸಿ ಅಂತಿಮ ನಿರ್ಧಾರ ಮಾಡಲಾಗುವುದು, ಈಗ ತಾತ್ಕಾಲಿಕವಾಗಿ ಅವರಿಗೆ ನಿರ್ಬಂಧ ಹೇರಲಾಗಿದೆ ಎಂದರು.

ಅತ್ತ ತಿಪ್ಪಗೊಂಡನಹಳ್ಳಿ ಜಲಾಶಯ ದಲ್ಲಿ ಉದಯ್ ಶವ ಪತ್ತೆಯಾದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ದುನಿಯಾ ವಿಜಯ್ ಫಿಲ್ಮ್ ಚೇಂಬರ್ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಮತ್ತು ಅವರು ತೆಗೆದುಕೊಂಡ ನಿರ್ಣಯವನ್ನು ಗೌರವಿಸುವುದಾಗಿ ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin