ಮಾಸ್ತಿಗುಡಿ ದುರಂತ : ಪೊಲೀಸರೆದುರು ಶರಣಾದ ನಾಗಶೇಖರ್ ಮತ್ತು ರವಿವರ್ಮಾ

ಈ ಸುದ್ದಿಯನ್ನು ಶೇರ್ ಮಾಡಿ

Directoerfs

ಬೆಂಗಳೂರು, ನ.12-ಮಾಸ್ತಿ ಗುಡಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹಸ ನಿರ್ದೇಶಕ ರವಿವರ್ಮಾ ಮತ್ತು ನಿರ್ದೇಶಕ ನಾಗಶೇಖರ್ ಇಂದು ಬೆಳಗ್ಗೆ ಮಾಗಡಿ ಠಾಣೆಗೆ ತೆರಳಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಕಳೆದ ಮಂಗಳವಾರ ಚಿತ್ರದ ನಿರ್ಮಾಪಕ ಸುಂದರ್ ಪಿ.ಗೌಡ ಅವರ ಬಂಧನವಾಗಿತ್ತು.  ಮಾಸ್ತಿಗುಡಿ ಚಿತ್ರಕ್ಕಾಗಿ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಹೆಲಿಕಾಪ್ಟರ್‍ನಿಂದ ಜಿಗಿಯುವ ದೃಶ್ಯ ಚಿತ್ರೀಕರಿಸುವಾಗ ಆಕಸ್ಮಿಕವಾಗಿ ನೀರು ಪಾಲಾದ ನಟರಾದ ಅನಿಲ್ ಮತ್ತು ಉದಯ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿರ್ಮಾಪಕ ಸುಂದರ್ ಪಿ.ಗೌಡ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿತ್ತು. ಇಂದು ಸರ್ಕಲ್ ಇನ್ಸ್‍ಪೆಕ್ಟರ್ ನಂದೀಶ್ ಅವರ ಮುಂದೆ ಶರಣಾಗಿರುವ ಇಬ್ಬರು ನಿರ್ದೇಶಕರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin