ಮಾಸ್ತಿಗುಡಿ ದುರಂತ ಸ್ಮರಿಸಿದ ಡಾ.ಬರಗೂರು ರಾಮಚಂದ್ರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Mastigudi-shootರಾಯಚೂರು, (ಶಾಂತರಸ ಪ್ರಧಾನ ವೇದಿಕೆ) ಡಿ.2-ಬೆಂಗಳೂರು ಸಮೀಪದ ತಿಪ್ಪಗೊಂಡನಹಳ್ಳಿ ಕೆರೆಯ ಬಳಿ ಮಾಸ್ತಿಗುಡಿ ಸಿನಿಮಾದ ಸಾಹಸ ಚಿತ್ರೀಕರಣ ವೇಳೆ ದುರಂತ ಸಾವಿಗೀಡಾದ ಅನಿಲ್ ಮತ್ತು ಉದಯ್ ಅವರಿಗೆ ಸಮ್ಮೇಳನಾಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ ಶ್ರದ್ಧಾಂಜಲಿ ಸಮರ್ಪಿಸಿದರು. ಮಾಸ್ತಿಗುಡಿ ಕನ್ನಡ ಸಿನಿಮಾರಂಗದ ದುರಂತ ರೂಪಕವಾಗಿ ನನಗೆ ಕಾಣಿಸುತ್ತದೆ ಎಂದು ತಮ್ಮ ಅಧ್ಯಕ್ಷ ಭಾಷಣದಲ್ಲಿ ಅವರು ನೊಂದು ನುಡಿದರು. ನೇರ ಸಾಹಸದ ಪ್ರಚಾರಗಳಿಸುವ ಹುಚ್ಚು ಆಕಾಂಕ್ಷೆ, ಸಹಕಲಾವಿದರಿಗಿಲ್ಲದ ರಕ್ಷಣೆ, ನೀರಿನ ಆಳದಲ್ಲಿ ಹೂಳು ಇದೆ ಎಂಬುದನ್ನು ಗಮನಿಸದ ಅವಿವೇಕ, ಈಜು ಬಾರದಿದ್ದರೂ ಸಾಹಸಕ್ಕೆ ಸೈ ಎನ್ನುವ ಹುಂಬತನ. ಅಮಾಯಕರು ಬಲಿಯಾದ ಮೇಲೆ ಒಬ್ಬರ ಮೇಲೊಬ್ಬರು ಮಾಡುತ್ತಿರುವ ಆರೋಪ, ಪ್ರತ್ಯಾರೋಪ – ಇವೆಲ್ಲವನ್ನೂ ಹೆಣೆದರೆ ಅದು ಒಟ್ಟು ಚಿತ್ರ ರಂಗದ ಸೂಕ್ಷ್ಮ ರಹಿತ ಸತ್ಯದ ದುರಂತ ರೂಪಕವೇ ಆಗುತ್ತದೆ. ಈ ದುರಂತ ರೂಪಕ ಸ್ಥಾಯಿಯಾಗದಂತೆ ಮಾಡುವ ಜವಾಬ್ದಾರಿ ನಮ್ಮ ಸಿನಿಮಾರಂಗದ ಮೇಲಿದೆ ಎಂದು ಡಾ. ಬರಗೂರು ಹೇಳಿದರು.

ಉದಯ್-ಅನಿಲ್ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ

ಬೆಂಗಳೂರು, ಡಿ.2- ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಚಿತ್ರೀಕರಣದ ವೇಳೆ ಮೃತಪಟ್ಟ ಸಾಹಸ ಕಲಾವಿದರಾದ ಅನಿಲ್ ಮತ್ತು ಉದಯ್ ಕುಟುಂಬಕ್ಕೆ ಸಂಸದ ರಾಜೀವ್ ಚಂದ್ರಶೇಖರ್ ತಲಾ 5 ಲಕ್ಷ ರೂ.ಗಳ ಸಹಾಯಧನ ವಿತರಿಸುವರು.  ಇಂದು ಸಂಜೆ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹಾಗೂ ಸಂಘದ ಇತರೆ ಪದಾಧಿಕಾರಿಗಳ ಸಮ್ಮುಖದಲ್ಲಿ ಅನಿಲ್ ಮತ್ತು ಉದಯ್ ಕುಟುಂಬಸ್ಥರಿಗೆ ಪರಿಹಾರ ಧನ ನೀಡಲಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin