ಮಾಸ್ತಿ ಗುಡಿ ದುರಂತಕ್ಕೆ ಸೋನು ಸೂದ್ ಬೇಸರ

ಈ ಸುದ್ದಿಯನ್ನು ಶೇರ್ ಮಾಡಿ

Sonu-Sood-02

ಮುಂಬೈ, ನ.9-ಮಾಸ್ತಿ ಗುಡಿ ಚಿತ್ರೀಕರಣದ ವೇಳೆ ಹೆಲಿಕಾಪ್ಟರ್‍ನಿಂದ ಜಿಗಿದು ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಜಲಸಮಾಧಿಯಾದ ಇಬ್ಬರು ಸಾಹಸ ಕಲಾವಿದರ ಸಾವಿಗೆ ದಿಗ್ಬ್ರಮೆ ವ್ಯಕ್ತಪಡಿಸಿರುವ ಬಾಲಿವುಡ್ ನಟ ಸೋನು ಸೂದ್ ಸುರಕ್ಷತೆಗೆ ಕ್ರಮಕೈಗೊಳ್ಳದ ಚಿತ್ರತಂಡದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ಕನ್ನಡ ಚಿತ್ರಗಳಲ್ಲಿ ಪ್ರಮುಖ ಖಳನಾಯಕನ ಪಾತ್ರ ನಿರ್ವಹಿಸಿರುವ ಸೋನು ಸೂದ್ ಇಂತಹ ಅಪಾಯಕಾರಿ ಸಾಹಸ ಸನ್ನಿವೇಶ ಚಿತ್ರೀಕರಣ ಸಂದರ್ಭದಲ್ಲಿ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಕನ್ನಡ ಚಿತ್ರರಂಗಕ್ಕೆ ಸಲಹೆ ಮಾಡಿದ್ದಾರೆ. ಅನಿಲ್ ಮತ್ತು ಉದಯ್ ಹೆಲಿಕಾಪ್ಟರ್‍ನಿಂದ ಜಿಗಿದು ಕೆರೆಯಲ್ಲಿ ನೀರು ಪಾಲಾದ ದೃಶ್ಯಾವಳಿಯನ್ನು ನೋಡಿ ನನಗೆ ತುಂಬಾ ದುಃಖವಾಯಿತು. ಇಂತಹ ಘಟನೆಗಳು ಚಿತ್ರರಂಗದಲ್ಲಿ ಮರುಕಳಿಸಬಾರದು ಎಂದು ಸೋನು ಸಲಹೆ ಮಾಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin