ಮಾ.10ಕ್ಕೆ ಬ್ರಹ್ಮೋಸ್ ಸುಧಾರಿತ ಶ್ರೇಣಿ ಕ್ಷಿಪಣಿ ಪ್ರಯೋಗ

ಈ ಸುದ್ದಿಯನ್ನು ಶೇರ್ ಮಾಡಿ

Bhramose-01

ಬೆಂಗಳೂರು, ಫೆ.16- ಸುಧಾರಿತ ಶ್ರೇಣಿಯೊಂದಿಗೆ ಮೇಲ್ದರ್ಜೆ ನಮೂನೆಯ ಬ್ರಹ್ಮೋಸ್ ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‍ಡಿಒ) ಮಾ.10ರಂದು ಪ್ರಯೋಗಾರ್ಥ ಪರೀಕ್ಷೆ ನಡೆಸಲಿದೆ. ವೈರಿಗಳ ನೆಲೆಗಳ ಮೇಲೆ ನಿಖರ ದಾಳಿ ನಡೆಸುವ ಸಾಮಥ್ರ್ಯದ ಈ ವಿಸ್ತರಿತ ಶ್ರೇಣಿ ನಮೂನೆಯ ಈ ಖಂಡಾಂತರ ಕ್ಷಿಪಣಿಯು 450 ಕಿ.ಮೀ. ದೂರದ ಗುರಿ ತಲುಪಲು ಸಶಕ್ತವಾಗಿದೆ. ಇದು ಪ್ರಸ್ತುತ 290 ಕಿ.ಮೀ. ಶ್ರೇಣಿಯ ಸುಧಾರಿತ ರೂಪವಾಗಿದೆ ಇದರ ಸೂಕ್ಷ್ಮತೆಯಿಂದಾಗಿ ಸಶಸ್ತ್ರಪಡೆಗಳಿಗೆ ಇದರಿಂದ ತುಂಬಾ ಪ್ರಯೋಜನವಾಗಲಿದೆ ಎಂದು ಡಿಆರ್‍ಡಿಒ ಮುಖ್ಯಸ್ಥ ಎಸ್. ಕ್ರಿಸ್ಟೋಫರ್ ತಿಳಿಸಿದ್ದಾರೆ.

ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಯಲ್ಲಿ (ಎಂಟಿಸಿಆರ್) ಭಾರತವು ಸಂಪೂರ್ಣ ಸದಸ್ಯತ್ವ ಪಡೆದ ನಂತರ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸಲಾಗಿದೆ ಎಂದು ಅವರು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin