ಮಾ.12 ರಂದು ನಂಜನಗೂಡಿಗೆ ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

nanjanagdu

ನಂಜನಗೂಡು, ಮಾ.6- ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಮಾ.12 ರಂದು ನಗರಕ್ಕೆ ಆಗಮಿಸಿ ಮುಖಂಡರ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಲಿದ್ದು , ಮುಂಬರುವ ಉಪ ಚುನಾವಣೆಗೆ ನಂಜನಗೂಡು ಸರ್ವ ವಿಧದಲ್ಲೂ ಸಜ್ಜಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.  ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂಬರುವ ಉಪ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಸ್ವೀಕರಿಸಿದ್ದು ಕಾರ್ಯಕರ್ತರು ಯಾವುದೇ ಮನಸ್ತಾಪ, ಭಿನ್ನಾಭಿಪ್ರಾಯ ಬದಿಗೊತ್ತಿ ಚುನಾವಣೆಯಲ್ಲಿ ಗೆಲ್ಲಲೇ ಬೇಕು ಎಂದು ಶಪಥಗೈಯಬೇಕು. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರೇ ಆಗಲಿ ಗೆಲ್ಲುವುದೇ ನಮ್ಮ ಗುರಿ. ಅಭ್ಯರ್ಥಿ ವಿಷಯದಲ್ಲಿ ಗೊಂದಲ ಬೇಡ. ದೃಢ ಮನಸ್ಸಿನಿಂದ ಒಗ್ಗಟ್ಟಾಗಿ ಚುನಾವಣೆ ಎದುರಿಸೋಣ ಎಂದು ಕರೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯರವರ ಬಳಿ ಕ್ಷೇತ್ರದ ಅಭಿವೃದ್ದಿಗಾಗಿ ಚರ್ಚಿಸಿ ಮನವಿ ಮಾಡಿದಾಗ ಕ್ಷೇತ್ರದಲ್ಲಿ ಅಭಿವೃದ್ದಿಯ ಹೊಳೆಯನ್ನೇ ಹರಿಸಿದ್ದಾರೆ. 8 ವರ್ಷಗಳಿಂದ ಕ್ಷೇತ್ರದಲ್ಲಿದ್ದ ಮಹಾನುಭಾವರು ಅಭಿವೃದ್ದಿ ಮಾಡದೆ ಕ್ಷೇತ್ರವನ್ನು ಕೊಂಪೆಯಾಗಿಸಿದ್ದರು. ಜಾತಿಗಿಂತ ಅಭಿವೃದ್ದಿ ಮುಖ್ಯ ಎಂಬ ಮಂತ್ರ ನಮ್ಮದು. ಇದರಿಂದ ಚುನಾವಣೆಯಲ್ಲಿ ಸುಲಭ ಗೆಲುವು ಸಾಧಿಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಸಂಸದ ಆರ್.ದೃವನಾರಾಯಣ್ ಮಾತನಾಡಿ, ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವಕಾಶವಾದಿ ರಾಜಕಾರಣಿ ತಮ್ಮ ಸ್ವಾರ್ಥಕ್ಕಾಗಿ, ರಾಜೀನಾಮೆ ಸಲ್ಲಿಸಿದ್ದಾರೆ.

ಅವರು ಯಾವುದೇ ರೈತರ ಅಥವಾ ಶೋಷಿತg ಸಮಸ್ಯೆಗಳಿಗೆ ಧ್ವನಿ ಎತ್ತಿ ರಾಜೀ ನಾಮೆ ಸಲ್ಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಅವರ ಸ್ವಹಿತಾಸಕ್ತಿಯಿಂದ ಉಪಚುನಾವಣೆ ಎದುರಾಗುವಂತೆ ಮಾಡಿದ್ದಾರೆ. 2018ರ ಚುನಾವಣೆಗೆ ಉಪಚುನಾವಣೆ ದಿಕ್ಸೂಚಿ ಎಂದರು.ಕಾಂಗ್ರೆಸ್ ಪಕ್ಷದ ವೀಕ್ಷರಾದ ಬಿ.ಕೆ ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯ ಧರ್ಮಸೇನಾ, ಜಿಪಂ ಸದಸ್ಯೆ ಲತಾಸಿದ್ದಶೆಟ್ಟಿ, ತಾಪಂ ಉಪಾಧ್ಯಕ್ಷ ಗೋವಿಂದರಾಜು, ಮುಖಂಡರಾದ ಕಳಲೆ ಕೇಶವಮೂರ್ತಿ, ವಕೀಲರಾದ ನಾಗರಾಜು ಮುರುಳಿಧರ್, ರಾಚಪ್ಪ, ಜಿಪಂ ಮಾಜಿ ಸದಸ್ಯ ಮಾರುತಿ, ಎಪಿಎಂಸಿ ಅಧ್ಯಕ್ಷ ಹುಲ್ಲಹಳ್ಳಿ ಮಾದಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಕುರಹಟ್ಟಿ ಮಹೇಶ ಮತ್ತಿತರರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin