ಮಿಂಚಿದ ರಾಹುಲ್- ಸಮರ್ಥ್ ಬೃಹತ್ ಮೊತ್ತದತ್ತ ಕರ್ನಾಟಕ

ಈ ಸುದ್ದಿಯನ್ನು ಶೇರ್ ಮಾಡಿ

 

kl-Rahul

ವಿಜಯಾನಂಗಾಗ್ರಾಮ್ (ರಾಜಸ್ಥಾನ್), ನ. 13- ಗಾಯದ ಸಮಸ್ಯೆಯಿಂದ ನ್ಯೂಜಿಲೆಂಡ್ ಸರಣಿಯಿಂದ ದೂರ ಉಳಿದಿದ್ದ ಕರ್ನಾಟಕ ಲೋಕೇಶ್ ರಾಹುಲ್ ಅವರು ತಾವು ಸಂಪೂರ್ಣ ಫಿಟ್ ಆಗಿದ್ದು ಇಲ್ಲಿ ರಾಜಾಸ್ಥಾನದ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ 76 ರನ್‍ಗಳನ್ನು ಗಳಿಸುವ ಮೂಲಕ ಆಸರೆಯಾಗಿದೆ.ಈಗಾಗಲೇ ಹ್ಯಾಟ್ರಿಕ್ ಗೆಲುವು ಸಾಧಿಸಿ ಮತ್ತೊಂದು ಜಯದ ಸವಿಯನ್ನು ಕಾಣುವ ಕಾತರದಲ್ಲಿರುವ ವಿನಯ್‍ಕುಮಾರ್ ನೇತೃತ್ವದ ರಾಜ್ಯ ತಂಡ ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿತು.

ಸಮರ್ಥ್- ರಾಹುಲ್ ಆನೆಬಲ:
ಕರ್ನಾಟಕ ತಂಡದ ಆರಂಭಿಕ ಆಟಗಾರರಾದ ಲೋಕೇಶ್ ರಾಹುಲ್ ಹಾಗೂ ಆರ್.ಸಮರ್ಥ್ ರಾಜಸ್ಥಾನ ತಂಡದ ಬೌಲರ್‍ಗಳನ್ನು ದಿಟ್ಟವಾಗಿ ಎದುರಿಸಿ ಮೊದಲ ವಿಕೆಟ್‍ಗೆ 111 ರನ್‍ಗಳ ಜೊತೆಯಾಟ ನೀಡಿದರು.ಡ್ರಿಂಕ್ಸ್ ವೇಳೆಗಾಗಲೇ 61 ಎಸೆತಗಳಲ್ಲಿ 50 ರನ್‍ಗಳನ್ನು ಪೂರೈಸಿದ ರಾಹುಲ್ ಶತಕ ಬಾರಿಸುವ ಭರವಸೆ ಮೂಡಿಸಿದ್ದರು. ಆದರೆ ಟಿ.ಎಂ. ಉಲ್ ಹಕ್‍ರ ಚೆಂಡನ್ನು ಬೌಂಡರಿ ಗಟ್ಟುವ ಆತುರದಲ್ಲಿ ಸಿ.ಬಿ.ಬಿಸ್ಟ್‍ಗೆ ಕ್ಯಾಚ್ ನೀಡಿ ಹೊರ ನಡೆದರು.ರಾಹುಲ್ ಔಟಾಗುವ ಮುನ್ನ 85 ಎಸೆತಗಳಲ್ಲಿ 15 ಬೌಂಡರಿ, 1 ಸಿಕ್ಸರ್ ನೆರವಿನಿಂದ 76 ರನ್ ಗಳಿಸಿದ್ದರು.  ಎರಡನೇ ವಿಕೆಟ್‍ಗೆ ಜೊತೆಗೂಡಿದ ರಾಬಿನ್ ಉತ್ತಪ್ಪ ಮತ್ತೊಮ್ಮೆ ದೊಡ್ಡ ಮೊತ್ತ ಪೇರಿಸುವಲ್ಲಿ ಎಡವಿ 6 ರನ್‍ಗಳಿಗೆ ಟಿ.ಎಂ.ಉಲ್‍ಗೆ ವಿಕೆಟ್ ಒಪ್ಪಿಸಿದರು.

 

ಸಮರ್ಥ್- ಅಗರ್‍ವಾಲ್ ಆಸರೆ:
ರಾಬಿನ್ ಉತ್ತಪ್ಪ ಔಟಾಗುತ್ತಿದ್ದಂತೆ ಕ್ರೀಸ್‍ಗೆ ಇಳಿದ ಭರವಸೆಯ ಆಟಗಾರ ಮಯಾಂಕ್ ಅಗರ್‍ವಾಲ್ ಸಮರ್ಥ್‍ರೊಂದಿಗೆ ಕೂಡಿ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿಯನ್ನು ಹೊತ್ತರು.ಭೋಜನ ವಿರಾಮದ ವೇಳೆಗೆ ಈ ಜೋಡಿಯು ತಂಡದ ಮೊತ್ತವನ್ನು 125 ಗುರಿ ಮುಟ್ಟಿಸಿದರು.
ಭೋಜನ ವಿರಾಮದ ನಂತರ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಸಮರ್ಥ್ ಆಕರ್ಷಕ ಅರ್ಧಶತಕ ಗಳಿಸಿದರಾದರೂ 62 ರನ್‍ಗಳಾಗಿದ್ದಾಗ ಪಂಕಜ್‍ಸಿಂಗ್‍ಗೆ ವಿಕೆಟ್ ಒಪ್ಪಿಸಿದರು.ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಕರ್ನಾಟಕ ತಂಡವು 3 ವಿಕೆಟ್‍ಗಳನ್ನು ಕಳೆದುಕೊಂಡು 164 ರನ್‍ಗಳನ್ನು ಗಳಿಸಿದ್ದು ಸ್ಟುವರ್ಟ್ ಬಿನ್ನಿ ಹಾಗೂ 20 ರನ್ ಗಳಿಸಿರುವ ಮಯಾಂಕ್ ಅಗರ್‍ವಾಲ್ ಕ್ರೀಸ್‍ನಲ್ಲಿದ್ದರು.

 

► Follow us on –  Facebook / Twitter  / Google+

¿

Facebook Comments

Sri Raghav

Admin