ಮಿಲಿಟರಿ ಅಧಿಕಾರಿಗಳಿಂದ ಅಂಗಡಿ ತೆರವು

ಈ ಸುದ್ದಿಯನ್ನು ಶೇರ್ ಮಾಡಿ

vijayapura

ವಿಜಯಪುರ, ಸೆ.10- ಇಲ್ಲಿನ ಹಳೆಯ ಪುರಸಭಾ ಕಚೇರಿ ವೃತ್ತದಲ್ಲಿ ಅನಧಿಕೃತವಾಗಿ ಹಣ್ಣಿನ ಅಂಗಡಿಗಳನ್ನು ಇಟ್ಟುಕೊಂಡಿದ್ದವರನ್ನು ಇಂಡೋ ಟಿಬೇಟಿಯನ್ ಮಿಲಿಟರಿ ಪೊ ಲೀಸ್‍ನವರು ತೆರವುಗೊಳಿಸಿದ್ದಾರೆ.ಈಗಾಗಲೇ ಹಳೆಯ ಪುರಸಭಾ ಕಚೇರಿಯನ್ನು ಇಂಡೋ ಟಿಬೇಟಿಯನ್ ಬಾರ್ಡರ್ ಮಿಲಿಟರಿ ಪೊಲೀಸ್‍ನವರಿಗೆ ಪುರಸಭೆಯವರು ಬಾಡಿಗೆಗೆ ನೀಡಿದ್ದು, ಅವರ ವಾಹನಗಳು ನಿಲ್ಲಿಸಲು ಸ್ಥಳಾವಕಾಶದ ಕೊರತೆಯಾದ ಕಾರಣ ಪುರಸಭೆಯವರ ಅನುಮತಿ ಮೇರೆಗೆ ಅನಧಿಕೃತವಾಗಿ ಹಣ್ಣಿನ ಅಂಗಡಿ ಇಟ್ಟುಕೊಂಡ ಜಗವನ್ನು ಮಿಲಿಟರಿ ಅಧಿಕಾರಿಗಳು ತೆರವುಗೊಳಿಸಿದರು. ಈ ಹಿಂದೆ ಇದೇ ಅಂಗಡಿಗಳನ್ನು ತೆರವುಗೊಳಿಸಲು ಪುರಸಭಾ ಮುಖ್ಯಾಧಿಕಾರಿ ಮಾರುತಿ ಶಂಕರ್ ಹಾಗೂ ಸಿಬ್ಬಂದಿ ವರ್ಗ ಹೋಗಿದ್ದಾಗ ಹಣ್ಣಿನ ಅಂಗಡಿ ಮಾಲೀಕ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಯನ್ನು ವಾಚಾಮಗೋಚರವಾಗಿ ನಿಂದಿಸಿದ ಪರಿಣಾಮ ಪುರಸಭಾ ಸಿಬ್ಬಂದಿ ವರ್ಗದವರು ಪ್ರತಿಭಟನೆ ನಡೆಸಿದ್ದುದನ್ನು ನೆನಪಿಸಿಕೊಳ್ಳಬಹುದು.

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin