ಮಿಸ್ಟರ್ ವರ್ಲ್ಡ್ ಸ್ಪರ್ಧೆಗೆ ಆಯ್ಕೆಯಾದ ಕೋಲಾರದ ಇಬ್ಬರು ಬಾಡಿಬಿಲ್ಡರ್‍ಗಳು

ಈ ಸುದ್ದಿಯನ್ನು ಶೇರ್ ಮಾಡಿ

Kolar-Body--002

ಕೋಲಾರ, ಅ.7- ಫಿಲಿಫೈನ್‍ನಲ್ಲಿ ನಡೆದ ಏಷ್ಯಾ ಮಟ್ಟದ ದೇಹದಾಢ್ರ್ಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ಎಲೈಟ್ ಜಿಮ್‍ನ ವೆಂಕಟಾಚಲಪತಿ ಮತ್ತು ತನ್ವೀರ್‍ಖಾನ್ ಅವರು ಮಿಸ್ಟರ್ ವರ್ಲ್ಡ್-2018 ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕ್ರೀಡಾಪಟುಗಳನ್ನು ರೂಪಿಸಲು ಶ್ರಮಿಸುತ್ತಿರುವ ನಮ್ಮ ಸಂಸ್ಥೆಯ ಇಬ್ಬರು ಮಿಸ್ಟರ್ ವಲ್ರ್ಡ್ ಸ್ಪರ್ಧೆಗೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಸಂಸ್ಥೆಯ ಮುಖ್ಯಸ್ಥ ರಮೇಶ್‍ಯಾದವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹೋಟೆಲ್ ಉದ್ಯೋಗಿಯಾಗಿರುವ ವೆಂಕಟಾಚಲಪತಿ ತನ್ನ ಪರಿಶ್ರಮದಿಂದ ಫಿಲಿಫೈನ್ ಕ್ರೀಡಾಕೂಟದಲ್ಲಿ ಎರಡನೇ ಸ್ಥಾನಗಳಿಸಿದ್ದಾರೆ. ಅದೇ ರೀತಿ ತನ್ವೀರ್‍ಖಾನ್ ಅವರು 6ನೇ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದರು.

ರಾಜ್ಯದ ಕೀರ್ತಿ ಪತಾಕೆಯನ್ನು ವಿದೇಶದಲ್ಲಿ ಹಾರಿಸಲು ತೆರಳುತ್ತಿರುವ ಈ ಇಬ್ಬರು ಕ್ರೀಡಾಪಟುಗಳ ಪೌಷ್ಠಿಕ ಆಹಾರಕ್ಕೆ ದುಬಾರಿ ವೆಚ್ಚ ತಗಲುವುದರಿಂದ ಇವರಿಗೆ ಸಹಾಯಸ್ತ ನೀಡಲು ಸಂಘ-ಸಂಸ್ಥೆಗಳು ಮುಂದೆ ಬರಬೇಕೆಂದು ಯಾದವ್ ಮನವಿ ಮಾಡಿಕೊಂಡರು. ಯಾವುದೇ ಕ್ರೀಡಾಪಟುಗಳು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ದುಶ್ಚಟಗಳಿಂದ ದೂರವಿರಬೇಕು ಹಾಗೂ ತಮ್ಮ ಸಾಧನೆಯಡೆಗೆ ಗುರಿಯಿಟ್ಟುಕೊಂಡರೆ ಯಾವುದೂ ಅಸಾಧ್ಯ ಅಲ್ಲ ಎಂದು ಯಾದವ್ ಅಭಿಪ್ರಾಯಪಟ್ಟರು.  ಪತ್ರಿಕಾಗೋಷ್ಠಿಯಲ್ಲಿ ಜಿಮ್‍ನ ಪಾಲುದಾರ ಶಬರೀಶ್‍ಯಾದವ್ ಮತ್ತಿತರರು ಹಾಜರಿದ್ದರು.

Facebook Comments

Sri Raghav

Admin