ಮಿಸ್ ಮಾಡದಿರಿ ಬೆಳಗಿನ ಉಪಾಹಾರ

ಈ ಸುದ್ದಿಯನ್ನು ಶೇರ್ ಮಾಡಿ

sdgsfdfshsfhನಮ್ಮ ದಿನದ ಆಹಾರಗಳಲ್ಲಿ ಬೆಳಗಿನ ಉಪಾಹಾರವೇ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ರಾತ್ರಿಯ ನಿದ್ದೆಯ ಅವಧಿಯಲ್ಲಿ ಶರೀರ ವಿಶ್ರಾಂತ ಸ್ಥಿತಿಯಲ್ಲಿದ್ದಾಗ ಹಲವು ಕಾರ್ಯಗಳು ನಡೆದು ದೇಹ ಶಕ್ತಿ ಕಳೆದುಕೊಂಡಿರುತ್ತದೆ. ಒಂದು ರೀತಿಯಲ್ಲಿ ಅಷ್ಟು ಹೊತ್ತೂ ಉಪವಾಸ ವಿದ್ದಂತೆ. ಆದ್ದರಿಂದಲೇ ಈ ಉಪವಾಸದ ಅವಧಿಯ ಬಳಿಕ ಸೇವಿಸುವ ಆಹಾರ ದೇಹಕ್ಕೆ ಹೆಚ್ಚು ಅನಿವಾರ್ಯವಾಗಿರುತ್ತದೆ. ಈ ಉಪಾಹಾರದಲ್ಲಿರುವ ಉತ್ತಮ ಪೌಷ್ಟಿಕ, ಪ್ರೋಟೀನ್ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಬೇಡಿಕೆಗಳನ್ನು ಪೂರೈಸುತ್ತದೆ.  ಬೆಳಗಿನ ಉಪಾಹಾರವನ್ನು ತಪ್ಪಿಸಬಾರದು ಎಂಬುದಕ್ಕೆ ಕಾರಣಗಳೂ ಇವೆ. ಇಂದಿನ ಧಾವಂತದ ದಿನಗಳಲ್ಲಿ ಬೆಳಿಗೆ ಬೇಗನೆ ಆಫೀಸ್ ಸೇರುವ ಅವಸರ ಎಲ್ಲರಿಗೂ ಇದೆ. ಆದರೆ ಸಮಯಾವಕಾಶ ಕಡಿಮೆ ಇರುವಾಗ ಅಲಂಕಾರ ಅಥವಾ ಸೌಂದರ್ಯ ಪ್ರಸಾಧನ ಹಚ್ಚುವುದು ಅಥವಾ ಉಪಾಹಾರ ಇವೆರಡರಲ್ಲಿ

ಯಾವುದಾದರೊಂದನ್ನು ಬಿಡಲೇಬೇಕೆಂದಾಗ ಹೆಚ್ಚಿನವರು ಉಪಾಹಾರವನ್ನೇ ಬಿಡುವುದನ್ನು ಗಮನಿಸಬಹುದು. ಇನ್ನೂ ಅಪಾಯಕಾರಿಯಾದುದೆಂದರೆ ಹೆಚ್ಚಿನವರಿಗೆ ಬೆಳಿಗ್ಗೆ ಉಪಾಹಾರ ತಯಾರಿಸಿಕೊಳ್ಳಲು ಸಮಯವೇ ಇರುವುದಿಲ್ಲ. ಇವರು ದಾರಿಯಲ್ಲಿ ಎಲ್ಲಿ, ಏನು ಸಿಕ್ಕಿತೋ ಅದನ್ನು ಗಡಿಬಿಡಿಯಲ್ಲಿ ತಿನ್ನುತ್ತಾ, ಅರ್ಧಂಬರ್ಧ ಬಿಡುತ್ತಾ, ತಂಪುಪಾನೀಯವನ್ನೋ, ದುಬಾರಿ ಬೆಲೆಯ ಕಾಫಿ ಅಥವಾ ಇನ್ನಾವುದೋ ಪೇಯವನ್ನು ಗುಟುಕರಿಸುತ್ತಾ ಸಾರ್ಥಕತೆಯನ್ನು ಅನುಭವಿಸುವುದನ್ನು ನೋಡಬಹುದು. ಆದರೆ ಇವೆಲ್ಲಾ ಆರೋಗ್ಯಕ್ಕೆ ಅಪಾಯಕಾರಿಯಾಗಿವೆ. ಥಟ್ಟನೇ ಅಲ್ಲದಿದ್ದರೂ ನಿಧಾನವಾಗಿ ಇದರ ಪ್ರಕೋಪ ದೇಹದ ಮೇಲೆ ಆಗುವುದನ್ನು ಕಾಣಬಹುದು. ಹಾಗಾದರೆ ಬೆಳಗಿನ ಉಪಾಹಾರ ಸೇವಿಸದಿದ್ದರೆ ಅನೇಕ ಸಮಸ್ಯೆಗಳಿಗೆ ದಾರಿ ಮಾಡಿ ಕೊಟ್ಟಂ ತಾಗುತ್ತದೆ.
ಉಪಾಹಾರವನ್ನು ತ್ಯಜಿಸುವ ಮಹಿಳೆಯರಲ್ಲಿ ಮಧುಮೇಹ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಒಂದು ಅಧ್ಯಯನದ ಪ್ರಕಾರ ಯಾವ ಮಹಿಳೆಯರು ಉಪಾಹಾರವನ್ನು ತ್ಯಜಿಸುತ್ತಾರೋ, ಅವರಿಗೆ ಸಾಮಾನ್ಯವಾಗಿ ಉಪಾಹಾರವನ್ನು ಸೇವಿಸುವ ಮಹಿಳೆಯರಿಗೆ ಬರುವುದಕ್ಕಿಂತ ಹೆಚ್ಚಾಗಿ ಮಧುಮೇಹ ಬರುವ ಸಾಧ್ಯತೆ ಆರು ಪಟ್ಟು ಹೆಚ್ಚಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.  ಬಹುತೇಕ ಗಂಡಸರಿಗೆ ಹೃದ್ರೋಗವು ಉಪಾಹಾರವನ್ನು ತ್ಯಜಿಸುವುದರಿಂದ ಬರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಅದರಲ್ಲಿಯು 45 ರಿಂದ 82 ವರ್ಷ ಒಳಗಿನವರಲ್ಲಿ ಈ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ದು ಈ ಅಧ್ಯಯನವೊಂದು ತಿಳಿಸಿದೆ.
ಉಪಾಹಾರಕ್ಕೆ ಸಂಬಂಧಿಸಿದಂತೆ 47 ಅಧ್ಯಯನಗಳ ಪ್ರಕಾರ, ಯಾರು ಉಪಾಹಾರವನ್ನು ಸೇವಿಸುತ್ತಾರೋ, ಅವರಲ್ಲಿ ಸ್ಮರಣೆ ಶಕ್ತಿಗೆ ಸಂಬಂಧಿಸಿದ ಮನೋಜನ್ಯ ಅಂಶಗಳು ಸರಿಯಾಗಿ ಕೆಲಸ ಮಾಡುತ್ತವೆ ಎಂದು ತಿಳಿದುಬಂದಿದೆ. ಸರಳವಾಗಿ ಹೇಳಬೇಕೆಂದರೆ ಉಪಾಹಾರ ಸೇವಿಸುವವರಲ್ಲಿ ಮೆದುಳಿನ ಕಾರ್ಯಕ್ಷಮತೆ ಹೆಚ್ಚಾಗಿರುತ್ತದೆ. ಒಂದು ಕುತೂಹಲಕಾರಿ ವರದಿಯ ಪ್ರಕಾರ ಯಾರು ಉಪಾಹಾರವನ್ನು ತಪ್ಪದೆ ಸೇವಿಸುತ್ತಾರೋ, ಅವರು ಮೂರು ತಿಂಗಳಲ್ಲಿ ಕನಿಷ್ಠ 17.8 ಪೌಂಡ್ ತೂಕವನ್ನು ಇಳಿಸಿಕೊಳ್ಳಬಹುದಂತೆ. ಈ ಅಧ್ಯಯನದಲ್ಲಿ ಉಪಾಹಾರವನ್ನು ತ್ಯಜಿಸಿದವರು ಮಧ್ಯಾಹ್ನ ಮತ್ತು ರಾತ್ರಿಯ ಊಟದಲ್ಲಿ ಅಧಿಕ ಕ್ಯಾಲೋರಿಗಳನ್ನು ಸೇವಿಸಿದ್ದರಂತೆ. ಅವರು ಉಪಾಹಾರವನ್ನು ಸೇವಿಸಿದವರಿಗಿಂತ ಕಡಿಮೆ ತೂಕ ಅಂದರೆ 7.3 ಪೌಂಡ್‍ಗಳನ್ನು ಮಾತ್ರ ಕರಗಿಸಲು ಸಾಧ್ಯವಾಯಿತಂತೆ.

ಸರಿಯಾದ ಸಮಯಕ್ಕೆ, ಸರಿಯಾದ ಪ್ರಮಾಣದಲ್ಲಿ ಉಪಹಾರ ಸೇವಿಸುವುದರಿಂದ ಆರೋಗ್ಯದ ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು ಎಂಬುದು ಸತ್ಯ. ಅವಸರದ ಬದುಕಿನಲ್ಲಿ ಅಂದಕ್ಕಿಂತ ಆರೋಗ್ಯಕ್ಕೆ ಹೆಚ್ಚು ಬೆಲೆ ಕೊಡುವುದರಿಂದ ದೀರ್ಘಕಾಲ ಆರೋಗ್ಯವಾಗಿ ಬದುಕಲು ಸಹಾಯವಾಗುತ್ತದೆ. ಉತ್ತಮ ಆರೋಗ್ಯದ ಮೂಲವೇ ಆಹಾರ. ಆದರೆ ಎಷ್ಟು, ಎಲ್ಲಿ, ಯಾವಾಗ ಹೇಗೆ ಸೇವಿಸಬೇಕೆಂಬ ಅಂಶಗಳನ್ನು ತಿಳಿದಿದ್ದರೆ ಸಾಕು, ಆರೋಗ್ಯ ಸದಾ ನಿಮ್ಮೊಂದಿಗಿರುತ್ತದೆ.

Facebook Comments

Sri Raghav

Admin