‘ಮೀಟ್ ಯು ಅಟ್ ಜಪಾನ್” ಘೋಷಣೆಯೊಂದಿಗೆ ರಿಯೋ ಒಲಿಂಪಿಕ್ಸ್ ಗೆ ತೆರೆ

ಈ ಸುದ್ದಿಯನ್ನು ಶೇರ್ ಮಾಡಿ

rio

ರಿಯೋ ಡಿ ಜನೈರೋ ಆ.21: ಸತತ 18 ದಿನಗಳ ಕಾಲ ನಡೆದ ಕ್ರೀಡಾ ಉತ್ಸವ ರಿಯೋ ಒಲಿಂಪಿಕ್ಸ್ ಗೆ ಭಾನುವಾರ ರಾತ್ರಿ ವಿದ್ಯುಕ್ತ ತೆರೆ ಬಿದ್ದಿದ್ದು, ಸಿಡಿ ಮದ್ದು ಪ್ರದರ್ಶನದ ಮೂಲಕ ಕ್ರೀಡಾ ಉತ್ಸವಕ್ಕೆ ತೆರೆ ಎಳೆಯಲಾಗಿದೆ. ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆದ, ಜಾಗತಿಕ ಕ್ರೀಡಾ ಹಬ್ಬಕ್ಕೆ ವರ್ಣ ರಂಜಿತ ತೆರೆ ಬಿದ್ದಿದೆ. ‘ಮೀಟ್ ಯು ಅಟ್ ಜಪಾನ್” ಘೋಷಣೆಯೊಂದಿಗೆ ಟೋಕಿಯೋ ಗವರ್ನರ್ ಅವರಿಗೆ ಒಲಂಪಿಕ್ಸ್ ಧ್ವಜ ಹಸ್ತಾಂತರಿಸಲಾಯಿತು. ವಿವಿಧ ದೇಶಗಳ ಸಾವಿರಾರು ಕ್ರೀಡಾ ಪಟುಗಳು, ಲಕ್ಷಾಂತರ ಅಭಿಮಾನಿಗಳು ಈ ಅಪೂರ್ವ ಕ್ಷಣಗಳನ್ನು ಕಣ್ತುಂಬಿಕೊಂಡರು. ಸುಮಾರು 206 ದೇಶಗಳ 11,239 ಸ್ಪರ್ಧಿಗಳು ಪಾಲ್ಗೊಂಡಿದ್ದ ರಿಯೋ ಒಲಂಪಿಕ್ಸ್ ನ ಮುಕ್ತಾಯ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಬ್ರೆಜಿಲ್ ಕಲೆ, ಸಂಸ್ಕೃತಿ ಬಿಂಬಿಸುವ ನೃತ್ಯಗಳು ಗಮನಸೆಳೆದವು.

ಈ ಜಾಗತಿಕ ಕ್ರೀಡಾಹಬ್ಬದಲ್ಲಿ ಅಮೆರಿಕ ಪದಕಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. 43 ಚಿನ್ನ, 37 ಬೆಳ್ಳಿ ಹಾಗೂ 38 ಕಂಚಿನ ಪದಕಗಳೊಂದಿಗೆ ಅಮೆರಿಕ ಕ್ರೀಡಾಪಟುಗಳು ಮೊದಲ ಸ್ಥಾನ ಗಳಿಸಿದ್ದಾರೆ. ಗ್ರೇಟ್ ಬ್ರಿಟನ್ 27 ಚಿನ್ನ, 22 ಬೆಳ್ಳಿ, 17 ಕಂಚಿನ ಪದಕಗಳೊಂದಿಗೆ 2ನೇ ಸ್ಥಾನ ಪಡೆದುಕೊಂಡಿದೆ. 26 ಚಿನ್ನ, 18 ಬೆಳ್ಳಿ, 26 ಕಂಚಿನ ಪದಕಗಳೊಂದಿಗೆ ಚೀನಾ 3ನೇ ಸ್ಥಾನಗಳಿಸಿದೆ. ಭಾರತ 67ನೇ ಸ್ಥಾನದಲ್ಲಿದೆ. ಭಾರತದ ಪಿ.ವಿ.ಸಿಂಧು ಚಿನ್ನ ಹಾಗೂ ಸಾಕ್ಷಿ ಮಲಿಕ್ ಕಂಚಿನ ಪದಕ ಗಳಿಸಿದ್ದಾರೆ. ದೀಪಾ ಕರ್ಮಕಾರ್, ಅದಿತಿ ಅಶೋಕ್ ಮೊದಲಾದವರು ಉತ್ತಮ ಪ್ರದರ್ಶನ ನೀಡಿದ್ದಾರೆ.

ಪದಕ ಪಟ್ಟಿ
ಪದಕ ಪಟ್ಟಿ

► Follow us on –  Facebook / Twitter  / Google+

Facebook Comments

Sri Raghav

Admin