ಮುಂಗಾರು ಆರ್ಭಟಕ್ಕೆ ಬಿಹಾರ-ಮಹಾರಾಷ್ಟ್ರ ತತ್ತರ : ಸಾವಿನ ಸಂಖ್ಯೆ 90ಕ್ಕೆ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

mahaಪಾಟ್ನಾ,ಆ.4- ನಿರಂತರ ಮಳೆ, ಪ್ರವಾಹ, ಭೂಕುಸಿತಗಳಿಂದ ಜರ್ಝರಿತವಾಗಿರುವ ಬಿಹಾರದಲ್ಲಿ ಇಂದು ವ್ಯಕ್ತಿಯೊಬ್ಬರು ಸಾವನ್ನಪ್ಪುವ ಮೂಲಕ ಮುಂಗಾರು ಆರ್ಭಟಕ್ಕೆ ಬಲಿಯಾದವರ ಸಂಖ್ಯೆ 61ಕ್ಕೇರಿದ್ದು , ಸುಮಾರು 31 ಲಕ್ಷಕ್ಕೂ ಹೆಚ್ಚು ಜನ ಬೀದಿಪಾಲಾಗಿದ್ದಾರೆ.   ಬಿಹಾರದ ಬಹುತೇಕ ಭಾಗ ಜಲಾವೃತಗೊಂಡು ದ್ವೀಪದಂತಾಗಿ ಹೊರಗಿನ ಪ್ರಪಂಚದ ಸಂಪರ್ಕವನ್ನೇ ಕಡಿದುಕೊಂಡಿದೆ. ಸಂತ್ರಸ್ತರಿಗೆ ಆಶ್ರಯ ಕಲ್ಪಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆಯಾದರೂ ಸುರಿಯುವ ಮಳೆ, ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದು ಮತ್ತು ಕೆಳಗೆ ಪ್ರವಾಹದ ನೀರು ಇದಕ್ಕೆ ಅಡಚಣೆಯಾಗಿದೆ.
ತತ್ತರಿಸಿದ ಮಹಾರಾಷ್ಟ್ರ:

ಮಹಾರಾಷ್ಟ್ರದಲ್ಲಿ ಮಳೆಯ ಅವಾಂತರದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮುಂಬೈ-ಗೋವಾ ಹೆದ್ದಾರಿಯಲ್ಲಿ ನಿನ್ನೆ ಬ್ರಿಟಿಷರ ಕಾಲದ ಸೇತುವೆ ಕುಸಿದುಬಿದ್ದು ವಾಹನಗಳು ಕೊಚ್ಚಿ ಹೋಗಿದ್ದರಿಂದ ನಾಪತ್ತೆಯಾಗಿದ್ದ  29 ಜನರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಎರಡು ಸರ್ಕಾರಿ ಬಸ್‍ಗಳು, ನಾಲ್ಕು ಖಾಸಗಿ ವಾಹನಗಳು ನಿನ್ನೆ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದವು.   ಈ ದುರಂತಕ್ಕೆ ಸಂಬಂಧಿಸಿದಂತೆ ನಿನ್ನೆ ಶಿವಸೇನೆ ಸಂಸದ ವಿನಾಯಕ್ ರಾವತ್  ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದರು. ಇದಕ್ಕೆ ಉತ್ತರಿಸಿದ ಗೃಹ ಸಚಿವ ರಾಜನಾಥ್ ಸಿಂಗ್, ಮಹಾರಾಷ್ಟ್ರ ರಾಜ್ಯ ಸರ್ಕಾರ ರಕ್ಷಣಾ ಕಾರ್ಯ ಕೈಗೊಂಡಿದ್ದು , ಅಗತ್ಯವಾದ ಎಲ್ಲ ನೆರವುಗಳನ್ನು ಕೇಂದ್ರ ನೀಡಲಿವೆ ಎಂದು ಭರವಸೆ ನೀಡಿದ್ದರು.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin