ಮುಂಗಾರು ವರುಣ ಅಬ್ಬರ : ರೈತರಲ್ಲಿ ಹೆಚ್ಚಿದ ಸಂತಸ

ಈ ಸುದ್ದಿಯನ್ನು ಶೇರ್ ಮಾಡಿ

malavalli
ಮಳವಳ್ಳಿ, ಮೇ 15- ಮುಂಗಾರು ಪೂರ್ವದಲ್ಲಿ ವರುಣ ಅಬ್ಬರಿಸುತ್ತಿದ್ದು ರೈತರಲ್ಲಿ ನಿರೀಕ್ಷೆ ಹೆಚ್ಚಿದೆ ಕಳೆದ ಎರಡು ದಿನಗಳ ಹಿಂದೆ ಸುರಿದ ಅಲ್ಪ ಪ್ರಮಾಣದ ಮಳೆಯಿಂದಾಗಿ ಭೂಮಿ ಹದಗೊಳಿಸುವ ಕಾರ್ಯ ಚುರುಕುಗೊಂಡಿದೆ.  ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಬಿತ್ತನೆ ಮುಂಚಿನ ಕಾರ್ಯದಲ್ಲಿ ತೊಡಗಿದ್ದಾರೆ ಕಳೆದ ವರ್ಷ ಮುಂಗಾರು ಹಾಗೂ ಮುಂಗಾರು ಪೂರ್ವದ ಮಳೆಗಳು ಅಬ್ಬರಿಸಿದ್ದವು. ಆದರೆ ಕೊನೆ ಹಂತದಲ್ಲಿ ಬೆಳೆ ಕೈಗೆ ಬರುವ ವೇಳೆಗೆ ಮಳೆ ಕೊರತೆ ಎದುರಾಗಿ ಬಿತ್ತಿದ್ದ ಬೆಳೆ ಬಾಡಿ ಹೋಗಿತ್ತು. ಬೀಜ ಗೊಬ್ಬರಕ್ಕಾಗಿ ವೆಚ್ಚ ಮಾಡಿದ್ದ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿತ್ತು.ಹೀಗಾಗಿ ತಾಲ್ಲೂಕಿನ ರೈತರು ಕೃಷಿಯಿಂದಲೇ ವಿಮುಖರಾಗುವ ಪರಿಸ್ಥಿತಿಗೆ ಬಂದಿದ್ದರು. ಈ ವರ್ಷ ಮುಂಗಾರು ಆರಂಭದಲ್ಲೇ ಮಳೆ ಆರ್ಭಟ ನೋಡಿ ರೈತರು ಮತ್ತೆ ಕೃಷಿಯತ್ತ ಚಿತ್ತ ಹರಿಸಿದ್ದಾರೆ ಈವರ್ಷ ಉತ್ತಮ ಮಳೆಯಾಗ ಬಹುದೆಂಬ ನಿರೀಕ್ಷೆ ರೈತರಲ್ಲಿ ಹೆಚ್ಚಿದೆ. ತಾಲ್ಲೂಕಿನ ಹಲಗೂರು, ಬಿಜಿ ಪುರ, ಹೋಬಳಿ ಮತ್ತು ಕಸಬಾದಲ್ಲಿ ಉತ್ತಮ ಮಳೆಯಾಗಿದೆ. ಬರಡಾಗಿದ್ದ ಭೂಮಿಯನ್ನು ರೈತರು ಹದಗೊಳಿಸಿ ಬಿತ್ತನೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.  ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಸಮೃದ್ಧಗೊಂಡರೆ ಕೃಷಿ ಚಟುವಟಿಕೆಗಳು ಇನ್ನಷ್ಟು ಬಿರುಸುಗೊಳ್ಳಲಿವೆ. ಈಗಾಗಲೇ ಸಗಣಿ ಗೊಬ್ಬರವನ್ನು ಜಮೀನಿಗೆ ಹಾಕಿ ಭೂಮಿಯನ್ನು ಶಕ್ತಿಯುತಗೊಳಿಸಿಕೊಳ್ಳ ಕಾರ್ಯ ನಡೆಯುತ್ತಿವೆ. ಹಾಗೂ ಸಣ್ಣ ರೈತರು ತಮ್ಮ ಜಮೀನಿನಲ್ಲಿ ಖುಷಿಯಿಂದ ಉಳುಮೆ ಕಾರ್ಯಕ್ಕೆ ಮುಂದಾದರು. ಅಲ್ಲಲ್ಲಿ ಹೆಸರು ಕಾಳು, ಎಳ್ಳು, ಅಲಸಂದೆ ಬಿತ್ತನೆಯಲ್ಲಿ ತೊಡಗಿದ್ದು ಕಂಡು ಬಂತು.

ರೈತ ತಮ್ಮಯ್ಯ ಮಾತನಾಡಿ, ಎರಡು ದಿನಗಳ ಹಿಂದೆ ಸ್ವಲ್ಪ ಮಳೆಯಾಗಿತ್ತು. ಟ್ರ್ಯಾಕ್ಟರ್ ಉಳುಮೆ ಮಾಡಿಸಿ ಭೂಮಿ ಸಿದ್ದಗೊಳಿಸಿದ್ದೆ. ಸಂಜೆ ಹದವಾದ ಮಳೆ ಬಿದ್ದಿದ್ದು ಅಲಸಂದೆ,ಎಳ್ಳು ಜೋಳವನ್ನು ಬಿತ್ತುತ್ತಿದ್ದೇನೆ. ಮುಂದಿನ ಮೂರು ದಿನದಲ್ಲಿ ಮಳೆ ಬಂದರೇ ಬೆಳೆ ಕೈ ಸೇರಬಹುದು ಎಂಬ ಆಸೆಯಿಂದ ಬಿತ್ತನೆ ಮಾಡುತ್ತಿದ್ದೇನೆ. ಕಳೆದ ವರ್ಷ ಮಳೆ ಬಿತ್ತಿದ ಬೀಜ ಮೊಳೆತಿರಲ್ಲ ಎಂದು ಹಿಂದಿನ ವರ್ಷದ ಕೃಷಿಯ ದುಃಸ್ಥಿತಿಯನ್ನು ನೆನಪಿಸಿಕೊಂಡರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin