ಮುಂದಿನ ಏಪ್ರಿಲ್‍ನಿಂದ ಜಾರಿಯಾಗಲಿರುವ ಜಿಎಸ್‍ಟಿನ ಪ್ರಯೋಜನಗಳೇನು ?

ಈ ಸುದ್ದಿಯನ್ನು ಶೇರ್ ಮಾಡಿ

adgsghshsfh

ಬೆಂಗಳೂರು, ಆ.7-  ಕೇಂದ್ರ ಸರ್ಕಾರ ಮುಂದಿನ ವರ್ಷ ಏಪ್ರಿಲ್‍ನಿಂದ ಜಾರಿಗೊಳಿಸಲಿರುವ ಜಿಎಸ್‍ಟಿ ಮಸೂದೆ ಬಗ್ಗೆ ಜನಸಾಮಾನ್ಯರಿಗೆ ಇರುವ ಅನುಮಾನಗಳನ್ನು ಬಗೆಹರಿಸಲು ಇಲ್ಲಿ ಪ್ರಶ್ನೋತ್ತರ ರೂಪದಲ್ಲಿ ಮಾಹಿತಿ ನೀಡಲಾಗಿದೆ.
ಜಿಎಸ್‍ಟಿ ಎಂದರೇನು ? ಇದು ಹೇಗೆ ಕೆಲಸ ಮಾಡುತ್ತದೆ ? :  ಜಿಎಸ್‍ಟಿ ಅಂದರೆ ಸರಕು ಮತ್ತು ಸೇವಾ ತೆರಿಗೆ ಎಂದರ್ಥ. ಇದು ಇಡೀ ದೇಶಕ್ಕೆ ಏಕ ಪರೋಕ್ಷ ತೆರಿಗೆಯಾಗಿದ್ದು, ಭಾರತವನ್ನು ಒಂದು ಏಕೀಕೃತ ಸಾಮಾನ್ಯ ಮಾರುಕಟ್ಟೆಯಾಗಿ ಮಾಡುತ್ತದೆ. ಇದನ್ನು ಇನ್ನೂ ಸರಳವಾಗಿ ಹೇಳುವುದಾದರೆ ತಯಾರಕರಿಂದ ಗ್ರಾಹಕರವರೆಗೆ ಸರಕು ಮತ್ತು ಸೇವೆಗಳ ಪೂರೈಕೆ ಮೇಲಿನ ಒಂದು ಏಕ ತೆರಿಗೆಯಾಗಿದೆ.

ಜಿಎಸ್‍ಟಿಯಿಂದ ಯಾರಿಗೆ ಪ್ರಯೋಜನ ?:

ಜಿಎಸ್‍ಟಿಯಿಂದ ಮುಖ್ಯವಾಗಿ ವಾಣಿಜ್ಯ ವಹಿವಾಟು ಮತ್ತು ಕೈಗಾರಿಕೆಗಳಿಗೆ ಪ್ರಯೋಜನವಾಗುತ್ತದೆ. ಭಾರತದಲ್ಲಿ ಜಿಎಸ್‍ಟಿ ಜಾರಿಯಿಂದ ಸಮಗ್ರ ಐಟಿ ವ್ಯವಸ್ಥೆಗೆ ಭದ್ರ ಬುನಾದಿಯಾಗಲಿದೆ. ಇದರಿಂದಾಗಿ ನೋಂದಣಿಗಳು, ಸಲ್ಲಿಕೆ, ಪಾವತಿಗಳು ಇತ್ಯಾದಿಯಂಥ ಎಲ್ಲ ತೆರಿಗೆ ಪಾವತಿದಾರರ ಸೇವೆಗಳು ತೆರಿಗೆ ಪಾವತಿದಾರರ ಆನ್‍ಲೈನ್‍ನಲ್ಲಿ ಲಭ್ಯವಾಗಲಿದೆ. ಇದರಿಂದಾಗಿ ಪಾರದರ್ಶಕತೆ ಸಾಧ್ಯ.  ಜಿಎಸ್‍ಟಿ ಜಾರಿಯಿಂದ ದೇಶದಾದ್ಯಂತ ಪರೋಕ್ಷ ತೆರಿಗೆಗಳು ಸಾಮಾನ್ಯವಾಗಲಿದ್ದು, ಆ ಮೂಲಕ ವಾಣಿಜ್ಯ ವ್ಯವಹಾರಗಳನ್ನು ನಡೆಸಲು ಸುಲಭವಾಗುತ್ತದೆ, ಅಂದರೆ ವಾಣಿಜ್ಯ ವಹಿವಾಟು ನಡೆಸುವ ಸ್ಥಳದ ಆಯ್ಕೆಯನ್ನು ಪರಿಗಣನೆಗೆ ತೆಗೆದುಕೊಳ್ಳದೇ ಏಕರೂಪದ ತೆರಿಗೆಯಲ್ಲಿ ದೇಶದಲ್ಲಿ ಎಲ್ಲಿ ಬೇಕಾದರೂ ವ್ಯವಹಾರಗಳನ್ನು ನಡೆಸಬಹುದಾಗಿರುತ್ತದೆ.

ಈ ವ್ಯವಸ್ಥೆಯಿಂದ ಮೌಲ್ಯಯುತ ಸಂಪರ್ಕ ಸರಪಳಿ ಮತ್ತು ರಾಜ್ಯಗಳ ಗಡಿಗಳಾದ್ಯಂತ ಮುಕ್ತ ರೀತಿಯಲ್ಲಿ ವಹಿವಾಟು ನಡೆಯುವುದರಿಂದ ಇದು ವಾಣಿಜ್ಯ-ವ್ಯಾಪಾರದಲ್ಲಿ ಗುಪ್ತ ವೆಚ್ಚಗಳ ಹಾವಳಿಯನ್ನು ತಗ್ಗಿಸುತ್ತದೆ. ವಾಣಿಜ್ಯ ಚಟುವಟಿಕೆಯಲ್ಲಿ ವ್ವವಹಾರಗಳ ವೆಚ್ಚದ ಇಳಿಕೆಯಿಂದಾಗಿ ಉದ್ಯಮದಲ್ಲಿ ಆರೋಗ್ಯಕರ ಸ್ಪರ್ಧಾತ್ಮಕತೆಗೆ ಅವಕಾಶ ನೀಡುತ್ತದೆ.  ತಯಾರಕರು ಮತ್ತು ರಫುದಾರರಿಗೂ ಇದರಿಂದ ಲಾಭವಾಗುತ್ತದೆ. ಸರಕು ಮತ್ತು ಸೇವೆಗಳ ತೆರಿಗೆ ಪದ್ದತಿ ಜಾರಿಯಿಂದ ಪ್ರಮುಖ ಕೇಂದ್ರ ಮತ್ತು ರಾಜ್ಯ ತೆರಿಗೆಗಳು, ಅದರಲ್ಲೂ ವಿಶೇಷವಾಗಿ ಕೇಂದ್ರೀಯ ಮಾರಾಟ ತೆರಿಗೆ (ಸಿಎಸ್‍ಟಿ) ತಗ್ಗುವುದರಿಂದ ಸ್ಥಳೀಯವಾಗಿ ತಯಾರಾಗುವ ಸರಕು ಮತ್ತು ಸೇವೆಗಳ ವೆಚ್ಚದಲ್ಲಿ ಇಳಿಮುಖವಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಸರಕುಗಳು ಮತ್ತು ಸೇವೆಗಳ ಪೈಪೆÇೀಟಿಯನ್ನು ಹೆಚ್ಚಿಸಿ, ಭಾರತೀಯ ರಫ್ತು ವಹಿವಾಟಿಗೆ ಉತ್ತೇಜನ ನೀಡುತ್ತದೆ.   ಇನ್ನೊಂದೆಡೆ ಜಿಎಸ್‍ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೂ ತುಂಬಾ ಪ್ರಯೋಜನವಾಗಲಿದೆ. ಈ ಎರಡೂ ಸರ್ಕಾರಗಳಲ್ಲಿರುವ ಬಹು ಪರೋಕ್ಷ ತೆರಿಗೆಗಳನ್ನು ಜಿಎಸ್‍ಟಿ ಪರಿವರ್ತಿಸುವುದರಿಂದ ಆಡಳಿತವು ಸರಳು ಮತ್ತು ಸುಲಭವಾಗುತ್ತದೆ.

ಮೌಲ್ಯಯುತ ಸಂಪರ್ಕ ಸರಪಳಿಯಲ್ಲಿ ತೆರಿಗೆ ವಹಿಟಾಟು ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಅಡೆತಡೆ ಇಲ್ಲದೇ ವರ್ಗಾವಣೆಯಾಗುವುದರಿಂದ ಸೋರಿಕೆ ಮತ್ತು ಅವ್ಯವಹಾರಗಳನ್ನು ಸುಲಭವಾಗಿ ತಡೆಗಟ್ಟಲು ಸಹಕಾರಿ. ಅಲ್ಲದೇ ಅಧಿಕ ಆದಾಯ ಕ್ಷಮತೆಯೂ ಸಾಧ್ಯವಾಗಲಿದೆ.  ಮತ್ತೊಂದೆಡೆ ಈ ವ್ಯವಸ್ಥೆಯಿಂದ ಗ್ರಾಹಕರಿಗೂ ಹಲವಾರು ಅನುಕೂಲಗಳು ಮತ್ತು ಪ್ರಯೋಜನಗಳುಂಟು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ಬಹು ಪರೋಕ್ಷ ತೆರಿಗೆಗಳಿಂದ ಬಸವಳಿದಿರುವ ಗ್ರಾಹಕರಿಗೆ ಈ ಏಕರೂಪದ ಪಾರದರ್ಶಕ ಪದ್ದತಿಯು ತೆರಿಗೆ ಹೊರೆ ಇಳಿಸಲು ಸಹಕಾರಿಯಾಗಿದೆ.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin