ಮುಂದಿನ ವರ್ಷ 27 ಮಂದಿ ಐಎಎಸ್, ಐಪಿಎಸ್, ಐಎಫ್‍ಎಸ್ ಅಧಿಕಾರಿಗಳು ನಿವೃತ್ತಿ

ಈ ಸುದ್ದಿಯನ್ನು ಶೇರ್ ಮಾಡಿ

IAS

ಬೆಂಗಳೂರು, ಡಿ.2- ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಸೇರಿದಂತೆ 27 ಮಂದಿ ಐಎಎಸ್, ಐಪಿಎಸ್ ಹಾಗೂ ಐಎಫ್‍ಎಸ್ ಅಧಿಕಾರಿಗಳು 2018ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. ಎಂಟು ಮಂದಿ ಐಎಎಸ್ ಅಧಿಕಾರಿಗಳು, ಐದು ಮಂದಿ ಐಪಿಎಸ್ ಅಧಿಕಾರಿಗಳು ಹಾಗೂ 14 ಮಂದಿ ಐಎಫ್‍ಎಸ್ ಅಧಿಕಾರಿಗಳು ಮುಂದಿನ ವರ್ಷ ಸೇವೆಯಿಂದ ವಯೋನಿವೃತ್ತಿ ಹೊಂದಲಿದ್ದಾರೆ.

ಸರ್ಕಾರದ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ 2018ರ ಮಾರ್ಚ್ 31ರಂದು ಸೇವೆಯಿಂದ ವಯೋನಿವೃತ್ತಿ ಹೊಂದಲಿದ್ದಾರೆ. ಹಿರಿಯ ಐಎಎಸ್ ಅಧಿಕಾರಿಗಳಾದ ಜಿ.ಲತಾಕೃಷ್ಣರಾವ್, ಉಮೇಶ್ ಕುಸುಗಲ್ ಅವರು 2018ರ ಏ.30ರಂದು ನಿವೃತ್ತಿಯಾಗಲಿದ್ದಾರೆ. ಎಚ್.ಎಸ್.ಅಶೋಕಾನಂದ ಅವರು ಮೇ 31ರಂದು ನಿವೃತ್ತಿಹೊಂದಿದರೆ, ರೇಣುಕಾ ಚಿದಂಬರಂ ಮತ್ತು ಪಾಂಡುರಂಗ ಬೊಮ್ಮಯ್ಯ ನಾಯಕ್ ಅವರು ಜುಲೈ 31ರಂದು ಸೇವೆಯಿಂದ ವಯೋನಿವೃತ್ತಿ ಹೊಂದಲಿದ್ದಾರೆ. ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಎಸ್.ಕೆ.ಪಟ್ನಾಯಕ್ ಹಾಗೂ ಎಂ.ಲಕ್ಷ್ಮೀನಾರಾಯಣ ಅವರು ಸೆಪ್ಟೆಂಬರ್ 30ರಂದು ನಿವೃತ್ತಿಯಾಗಲಿದ್ದಾರೆ.

ಐಪಿಎಸ್ ಅಧಿಕಾರಿಗಳಾದ ಪ್ರೇಮ್‍ಶಂಕರ್‍ಮೀನಾ ಜನವರಿ 31ರಂದು ನಿವೃತ್ತಿ ಹೊಂದಿದರೆ , ರವಿಕುಮಾರ್ ಎಚ್.ನಾಯಕ್ ಏಪ್ರಿಲ್ 30ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಎನ್.ಶಿವಪ್ರಸಾದ್ ಮತ್ತು ಎಚ್.ಎಸ್.ವೆಂಕಟೇಶ್ ಅವರು ಮೇ 31ರಂದು ನಿವೃತ್ತಿ ಹೊಂದಿದರೆ, ಡಾ.ಬಿ.ಎ.ಮಹೇಶ್ 2018ರ ಡಿ.31ರಂದು ನಿವೃತ್ತಿಯಾಗಲಿದ್ದರೆ. ಹಿರಿಯ ಐಎಫ್‍ಎಸ್ ಅಧಿಕಾರಿಗಳಾದ ಅಶೋಕ್ ಕುಮಾರ್ ಗಾರ್ಗ್ ಫೆ.28ರಂದು ನಿವೃತ್ತಿಹೊಂದಿದರೆ, ಡಾ.ಕೆ.ಎನ್.ಮೂರ್ತಿ, ಡಾ.ಆರ್.ರಾಜು, ಕೆ.ಎಚ್.ನಾಗರಾಜು ಅವರು ಜೂ.30ರಂದು ನಿವೃತ್ತಿಯಾಗುವರು. ಜನವರಿ 31ರಂದು ಎಚ್.ಸಿ.ಸುಭಾಕಾತ್ ಹುಸೇನ್ ನಿವೃತ್ತಿಯಾಗಲಿದ್ದಾರೆ.

ಜಿ.ಸತೀಶ್, ರಂಗೇಗೌಡ, ಎಚ್.ಸಿ.ಕಾಂತರಾಜು ಅವರು ಜುಲೈ 31ರಂದು ನಿವೃತ್ತಿಹೊಂದಿದರೆ, ಎಸ್.ಶೇಖರ್, ಕೆ.ಬಿ.ಮಾರ್ಕಂಡೇಯ, ಕೆ.ಡಿ.ಉಡಪುಡಿ ಹಾಗೂ ಜಾವಿದ್‍ಮುಮ್ತಾಜ್ ಮೇ 31ರಂದು ನಿವೃತ್ತಿ ಹೊಂದಲಿದ್ದಾರೆ. ಬಿ.ಎಂ.ಪರಮೇಶ್ವರ್ ನ.30ರಂದು ನಿವೃತ್ತಿಯಾದರೆ, ಎಸ್.ಶಾಂತಪ್ಪ ಡಿ.31ರಂದು ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಕಟಿಸಿದೆ.

Facebook Comments

Sri Raghav

Admin