ಮುಂದಿನ 3 ವರ್ಷಗಳಲ್ಲಿ ಹೆಚ್ಚಾಗಲಿವೆ ಸೈಬರ್ ದಾಳಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Hack
ನವದೆಹಲಿ, ಜು.24- ಮುಂದಿನ ಮೂರು ವರ್ಷಗಳಲ್ಲಿ ಅತ್ಯಾಧುನಿಕ ಮತ್ತು ವಿನಾಶಕಾರಿ ಸೈಬರ್ ಅಪರಾಧಗಳು ದೇಶಾದ್ಯಂತ ತೀವ್ರವಾಗಿ ಹೆಚ್ಚಲಿವೆ. ಕಂಪ್ಯೂಟರ್ ವ್ಯವಸ್ಥೆಯನ್ನು ಹಾಳುಗೆಡಹುವ 200 ದಶಲಕ್ಷ ಮಾಲ್‍ವೇರ್‍ಗಳು ಹಾಗೂ 1.90 ಲಕ್ಷ ಅತಿಕ್ರಮಣದ ಮೂಲಕ ಈ ಆತಂಕ ಸೃಷ್ಟಿಯಾಗಲಿದೆ.
ಏಳು ವರ್ಷಗಳ ಹಿಂದೆ ವೈರಸ್ ಬೆದರಿಕೆ ಮತ್ತು ಕಂಪ್ಯೂಟರ್‍ಗೆ ತೊಂದರೆ ನೀಡುವ ವ್ಯವಸ್ಥೆ ಮೂಲಕ ಸೈಬರ್ ಬೆದರಿಕೆ ಇತ್ತು. ಆದರೆ ಈಗ ಅತ್ಯಾಧುನಿಕ ಮಾಲ್‍ವೇರ್ ಮತ್ತು ಸೇವೆ ನಿರಾಕರಣೆಯ ಸೈಬರ್ ದಾಳಿ ಆತಂಕ ಸೃಷ್ಟಿಯಾಗಿದ್ದು, 2020ರಲ್ಲಿ ಅದು ಮತ್ತಷ್ಟು ತೀವ್ರವಾಗಲಿದೆ.

ಮುಂದಿನ ಮೂರು ವರ್ಷಗಳಲ್ಲಿ ಸೈಬರ್ ಬೆದರಿಕೆ ಗಂಭೀರ ಅಪಾಯ ಉಂಟು ಮಾಡಲಿದೆ ಎಂದು ದೇಶದ ಸೈಬರ್ ಭದ್ರತೆ ಮುಖ್ಯಸ್ಥ ಗುಲ್ಷನ್ ರೈ ಸಂಸತ್ತಿನ ಆರ್ಥಿಕ ಸಮಿತಿಗೆ ನೀಡಿದ ವರದಿಯಲ್ಲಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin