ಮುಂದುವರೆದ ಕಾಡಾನೆ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

dabaspete
ದಾಬಸ್‍ಪೇಟೆ, ಏ.6- ಹೋಬಳಿಯಲ್ಲಿ ಕಾಡಾನೆಗಳ ದಾಳಿ ಮುಂದುವರೆದಿದ್ದು, ಗಂಗೇನಪುರದಲ್ಲಿ ದಾಳಿ ನಡೆಸಿ ರೈತರ ಬೆಳೆಗಳನ್ನು ನಾಶ ಮಾಡಿರುವ ಘಟನೆ ನಡೆದಿದೆ.ಘಟನೆಯಲ್ಲಿ ಗಂಗೇನಪುರದಲ್ಲಿಚಿತ್ರನಟ ನಿರ್ಧೇಶಕ ಎಸ್.ನಾರಾಯಣ್ ತೋಟದ ಮನೆಯ ಎರಡು ಕಡೆಯ ಕಾಂಪೌಂಡ್ ಗೋಡೆ ಮತ್ತುರೈತ ಬಸವರಾಜು ಇವರಿಗೆ ಸೇರಿದ ಜೋಳ, ರಾಗಿ ಸುಮಾರು ಎರಡು ಲಕ್ಷ ರೂ.ಗಳ ಮೌಲ್ಯದ ವಸ್ತು ಮತ್ತು ಬೆಳೆ ನಷ್ಟವಾಗಿದೆ.ಅರಣ್ಯಾಧಿಕಾರಿ ನಾಗರಾಜು ಗಂಗೇನಪುರದ ಗ್ರಾಮದ ರೈತರ ಬೆಳೆಗಳ ಮೇಲೆ ಕಾಡಾನೆಗಳ ದಾಳಿಯ ಕುರಿತು ಬೆಳೆನಷ್ಟದ ಪರಿಶೀಲನೆ ನಡೆಸಿ ಬೆಳೆ ನಷ್ಟದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಈಗ ಮತ್ತೆ ಮೂರು ಕಾಡಾನೆಗಳ ದಾಳಿ ಮತ್ತೆ ಮತ್ತೆ ಮರುಕಳಿಸುತ್ತಿದ್ದು ಜನ ಭಯಗೊಂಡಿದ್ದಾರೆ. ಸದ್ಯ ಎರಡು ಸಲಗಗಳು ಮತ್ತು ಒಂದು ಮರಿಯಾನೆಯಿದ್ದು ಇವುಗಳನ್ನು ತುಮಕೂರು ಕಡೆ ಓಡಿಸಲು ಸಿದ್ದತೆ ಮಾಡಿಕೊಂಡಿರುವುದಾಗಿ ತಿಳಿಸಿದರು.

ಕಳೆದ ಎರಡು ಮೂರು ತಿಂಗಳಿಂದಲೂ ಸೋಂಪುರ ಹೋಬಳಿಯ ಸಾಕಷ್ಟು ಹಳ್ಳಿಗಳಲ್ಲಿನ ರೈತರು, ಜನಸಾಮಾನ್ಯರು ಕಾಡಾನೆಗಳ ದಾಳಿಯಿಂದ ರೋಸಿ ಹೋಗಿದ್ದಾರೆ. ಕಳೆದ ಒಂದು ತಿಂಗಳಿಂದ ಈ ಕಾಡಾನೆಗಳ ಉಪಟಳ ತಪ್ಪಿದ್ದು ಸ್ವಲ್ಪ ನೆಮ್ಮದಿ ಇತ್ತು. ಆದರೆ ಈಗ ಮತ್ತೆ ಮೂರು ಆನೆಗಳು ಮತ್ತೆ ದಾಳಿ ಮೂಲಕ ಭಯ ಹುಟ್ಟಿಸಿವೆ. ಈ ಬಗ್ಗೆ ಸಂಬಂಧಿಸಿದ ಸಚಿವರನ್ನು ಭೇಟಿ ನೀಡಿ ಕ್ರಮ ತೆಗೆದುಕೊಳ್ಳಲು ಒತ್ತಾಯಿಸುವುದಾಗಿ ಶಾಸಕ ಶ್ರೀನಿವಾಸಮೂರ್ತಿ ತಿಳಿಸಿದರು.
ಸೋಂಪುರ ಹೋಬಳಿಯಲ್ಲಿ ಕಳೆದ ಹತ್ತು ವರ್ಷದಿಂದಲೂ ಕಾಡಾನೆಗಳು ಮತ್ತುಚಿರತೆ ದಾಳಿ ನಿರಂತರವಾಗಿ ನಡೆಯುತ್ತಲೆಇದೆ ಈಗಾಗಲೇ ಮೂರು ಮಂದಿಪ್ರಾಣ ಕಳೆದು ಕೊಂಡಿದ್ದಾರೆ, ಸಾಕಷ್ಟು ಪ್ರಮಾಣದ ಬೆಳೆ ಮತ್ತು ಆಸ್ತಿ ನಷ್ಟವಾಗಿದೆಅಲ್ಲದೆಚಿರತೆ ದಾಳಿಯಿಂದ ನೂರಾರು ಪ್ರಾಣಿಗಳು ತುತ್ತಾಗಿವೆಇದರ ನಷ್ಟವನ್ನು ಸರಕಾರ ಭರಿಸಿದೆ ಈ ಬಗ್ಗೆ ಮಾಹಿತಿಯನ್ನು ಶಾಸನ ಸಭೆಯಲ್ಲಿ ಚರ್ಚಿಸಿದ್ದೇನೆ ಎಂದರುರೈತರಿಗೆಆಗಿರುವ ನಷ್ಟದ ಹಣ ಬಿಡುಗಡೆಯಾಗಿಲ್ಲದಿದ್ದರೆತಕ್ಷಣವೇ ಪರಿಹಾರ ಹಣ ಬಿಡುಗಡೆಗೆಒತ್ತಾಯಿಸುವುದಾಗಿ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin