ಮುಂದುವರೆದ ನ್ಯಾಯಾಂಗ ಮತ್ತು ಸರ್ಕಾರದ ನಡುವಿನ ಭಿನ್ನಾಭಿಪ್ರಾಯ

ಈ ಸುದ್ದಿಯನ್ನು ಶೇರ್ ಮಾಡಿ

Supreme-Court

ನವದೆಹಲಿ, ನ. 26 : ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ನಡುವಿನ ಭಿನ್ನಾಭಿಪ್ರಾಯ ಮುಂದುವರೆದಿದ್ದು, ಎಷ್ಟೋ ಖಾಲಿ ಕೋರ್ಟ್ ಹಾಲ್ ಗಳು ಇವೆ, ಆದರೆ ಅಲ್ಲಿ ನ್ಯಾಯಮೂರ್ತಿಗಳು ಇಲ್ಲ. ಅನೇಕ ಪ್ರಸ್ತಾವಗಳು ಬಾಕಿ ಉಳಿದಿವೆ ಎಂಬ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಅವರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಹೇಳಿದ್ದಾರೆ.

ಸರಕಾರವು ನೂರಿಪ್ಪತ್ತು ಜಡ್ಜ್ ಗಳನ್ನು ಈ ವರ್ಷ ನೇಮಿಸಿದೆ. 1990ರಿಂದ ಈಚೆಗೆ ನಡೆದ ಅತಿ ಹೆಚ್ಚಿನ ನೇಮಕ ಇದು. ಹಿಂದೆ 2013ರಲ್ಲಿ 121 ನೇಮಕವಾಗಿತ್ತು. ಆದ್ದರಿಂದ ಜಡ್ಜ್ ಗಳ ಕೊರತೆ ಎಂಬ ಅವರ ಮಾತನ್ನು ತುಂಬ ಗೌರವದಿಂದ ನಿರಾಕರಿಸುತ್ತಿದ್ದೇನೆ ಎಂದು ಸಚಿವರು ಹೇಳಿದ್ದಾರೆ.
1990ರಿಂದ ಇದುವರೆಗೆ ಕೇವಲ 80 ನ್ಯಾಯಾಧೀಶರ ನೇಮಕವಾಗಿದೆ. ಇನ್ನೂ ಕೇಳ ಹಂತದ ಕೋರ್ಟ್ ಗಳಲ್ಲಿ 5000 ನ್ಯಾಯಾಧೀಶರ ಹುದ್ದೆಗಳು ಖಾಲಿ ಇದ್ದು, ಇದರಲ್ಲಿ ಭಾರತ ಸರ್ಕಾರದ ಪಾತ್ರವಿಲ್ಲ. ಈ ಬಗ್ಗೆ ನ್ಯಾಯಾಂಗವೇ ಗಮನಹರಿಸಬೇಕು ಎಂದು ರವಿಶಂಕರ್ ಪ್ರಸಾದ್ ಅವರು ಹೇಳಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin