ಮುಂದುವರೆದ ರಾಜಕಾಲುವೆ ಒತ್ತುವರಿ ತೆರವು ಕಾರ್ಯ

ಈ ಸುದ್ದಿಯನ್ನು ಶೇರ್ ಮಾಡಿ

88

ಬೆಂಗಳೂರು, ಅ.4-ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಮತ್ತೆ ಮುಂದುವರೆದಿದ್ದು, ಇಂದು ಯಲಹಂಕ, ಬೊಮ್ಮನಹಳ್ಳಿ, ದಾಸರಹಳ್ಳಿ, ಮಹದೇವಪುರ ವಲಯಗಳಲ್ಲಿ ಕಾರ್ಯಾಚರಣೆ ಮಾಡಿ ಕೋಟ್ಯಂತರ ರೂ. ಬೆಲೆಯ ಕಟ್ಟಡಗಳನ್ನು ನೆಲಸಮ ಗೊಳಿಸಲಾಯಿತು.  ಯಲಹಂಕ ವ್ಯಾಪ್ತಿಯ ಚೌಡೇಶ್ವರಿ ವಾರ್ಡ್‍ನ ಹಾರೋಹಳ್ಳಿಯಲ್ಲಿ 1200 ಮೀಟರ್ ರಾಜಕಾಲುವೆ, 6 ಖಾಲಿ ಜಾಗ ತೆರವುಗೊಳಿಸಲಾಯಿತು.  ಮಹದೇವಪುರ ವಲಯದ ಬೆಳ್ಳಂದೂರು ವಾರ್ಡ್‍ನ ಹರಳೂರು ಗ್ರಾಮದಲ್ಲಿ 500 ಮೀಟರ್ ರಾಜಕಾಲುವೆ, 4 ಖಾಲಿ ಜಾಗಗಳನ್ನು ತೆರವುಗೊಳಿಸಲಾಯಿತು.

ಬೊಮ್ಮನಹಳ್ಳಿ ವಲಯದ ಅರೆಕೆರೆ ವಾರ್ಡ್‍ನ ನ್ಯಾನಪ್ಪನಹಳ್ಳಿ ಗ್ರಾಮದಲ್ಲಿ 300 ಮೀಟರ್ ರಾಜಕಾಲುವೆ, ಎರಡು ಕಟ್ಟಡ, 3 ಖಾಲಿ ಜಾಗಗಳನ್ನು ತೆರವುಗೊಳಿಸಲಾಯಿತು.ದಾಸರಹಳ್ಳಿಯ ಶೆಟ್ಟಿಹಳ್ಳಿ ವಾರ್ಡ್ ನ ಮ್ಯಾದರಹಳ್ಳಿ ಗ್ರಾಮದಲ್ಲಿ 1500 ಮೀಟರ್ ರಾಜಕಾಲುವೆ, 4 ಖಾಲಿ ಜಾಗಗಳನ್ನು ತೆರವುಗೊಳಿಸ ಲಾಯಿತು.ಬೊಮ್ಮನಹಳ್ಳಿಯ ಅವನಿ ಶೃಂಗೇರಿ ಸಮೀಪ ಸರಸ್ವತಿ ಬಡಾವಣೆಯಲ್ಲಿ ಕೆಲವು ಮನೆ ಮಾಲೀಕರು ತಾವೇ ತೆರವುಗೊಳಿಸುವುದಾಗಿ ಹೇಳಿದ್ದರು.

ಆದರೆ ಮಾಲೀಕರು ಇದುವರೆಗೆ ಮನೆ ತೆರವುಗೊಳಿಸದ ಕಾರಣ ಬೊಮ್ಮನಹಳ್ಳಿ ಬಿಬಿಎಂಪಿ ಆಯುಕ್ತ ಮುನಿರಾಜು ನೇತೃತ್ವದಲ್ಲಿ ತೆರವುಕಾರ್ಯ ನಡೆಯಿತು.ಅವನಿ ಶೃಂಗೇರಿ ನಗರದಲ್ಲಿ ಒತ್ತುವರಿ ತೆರವುಗೊಳಿಸಲು ಮುಂದಾದಾಗ ಸ್ಥಳೀಯರು ತೀವ್ರ ಅಸಮಾಧಾನಪಟ್ಟು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೊಮ್ಮನಹಳ್ಳಿ ವಲಯದಲ್ಲಿ ಒಟ್ಟು 4 ಕಟ್ಟಡ, 9 ಖಾಲಿ ನಿವೇಶನ ಸೇರಿ ಒಟ್ಟಾರೆ 17 ಖಾಲಿ ಜಾಗ ಹಾಗೂ ಎರಡು ವಸತಿ ಕಟ್ಟಡ ತೆರವುಗೊಳಿಸಲಾಗಿದೆ.

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin