ಮುಂದೆ ಬರಲಿದೆ ‘ಗ್ಯಾಪ್‍ನಲ್ಲೊಂದು ಸಿನಿಮಾ’

ಈ ಸುದ್ದಿಯನ್ನು ಶೇರ್ ಮಾಡಿ

gapenallondu-cinema

ಕನ್ನಡ ಚಿತ್ರರಂಗಕ್ಕೆ ಬರುತ್ತಿರುವ ಹೊಸ ಪ್ರತಿಭೆಗಳ ತಲೆಯಲ್ಲಿ ಹಲವಾರು ಹೊಸ ಆಲೋಚನೆಗಳಿರುತ್ತವೆ ಎನ್ನುವುದೇನೋ ನಿಜ. ಅದಕ್ಕೆ ಇಲ್ಲೊಂದು ಉತ್ತಮ ಉದಾಹರಣೆ ಇದೆ. ಮಂಜು ಹೆಡುರ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಹೊಸ ಚಿತ್ರ ಗ್ಯಾಪ್‍ನಲ್ಲೊಂದು ಸಿನಿಮಾ. ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲಾ ಮುಗಿಸಿ ಸೆನ್ಸಾರ್‍ಗಾಗಿ ಕಾಯುತ್ತಿರುವ ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಮೊನ್ನೆ ನೆರವೇರಿತು.ನಟಿ ಭಾವನಾ ಈ ಚಿತ್ರದ ಹಾಡುಗಳ ಸಿಡಿಯನ್ನು ಲೋಕಾರ್ಪಣೆ ಮಾಡಿದರು. ಚಿತ್ರದಲ್ಲಿ ಕೇವಲ ಎರಡೇ ಹಾಡುಗಳಿದ್ದು, ಶ್ರೀಧರ್ ಕಶ್ಯಪ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಶಿಕುಮಾರ್ ಹಾಗೂ ಮಮತಾ ರಾಹುತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ಶರವಣ ವೈದೇಹಿ ಅವರು ನಿರ್ಮಾಣ ಮಾಡಿದ್ದಾರೆ.  ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕಿ ಮಂಜು ಹೆಬ್ಬೂರು ಈ ಹಿಂದೆ ಲೋ ಬಜೆಟ್ ಎಂಬ ಸಿನಿಮಾವನ್ನು ಆರಂಭಿಸಿದ್ದೆ. ಕಾರಣಾಂತರಗಳಿಂದ ಆ ಚಿತ್ರ ಸ್ಥಗಿತಗೊಂಡಿದೆ. ಅದೇ ಗ್ಯಾಪ್‍ನಲ್ಲಿ ಒಂದು ಸಿನಿಮಾ ಮಾಡೋಣ ಎಂದು ಕೊಂಡಾಗ ಹೊಳೆದಷ್ಟೇ ಈ ಸಿನಿಮಾ ಪಕ್ಕಾ ಹಳ್ಳಿ ಸೊಗಡಿನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಕಾಮಿಡಿ, ಥ್ರಿಲ್ಲರ್‍ನ ಎಳೆಯದೆ. ಪ್ರಮುಖವಾಗಿ ಅಡಿಷನ್ ನಡೆದಿದೆ. ಹೊಸ ಕಲಾವಿದರನ್ನು ಈ ಚಿತ್ರದಲ್ಲಿ ಬಳಸಿಕೊಂಡಿದ್ದೇನೆ.
ತಿಪಟೀರಿನ ಮಾಡೇನೂರು ಎಂಬ ಗ್ರಾಮದಲ್ಲಿ ಈ ಚಿತ್ರದ ಬಹುತೇಕ ಚಿತ್ರೀಕರಣವನ್ನು ನಡೆಸಿದ್ದೇವೆ. ಗ್ಯಾಪ್‍ನಲ್ಲಿ ನಿರ್ಮಾಣ ಮಾಡುತ್ತಿರುವ ಸಿನಿಮಾ ಇದಾಗಿರುವುದರಿಂದ ಅದೇ ಹೆಸರನ್ನಿಡಲು ನಿರ್ಧರಿಸಿ ಗ್ಯಾಪ್‍ನಲ್ಲೊಂದು ಸಿನಿಮಾ ಶೀರ್ಷಿಕೆ ಇಟ್ಟಿದ್ದೇನೆ ಎಂದು ಹೇಳಿದರು.   ನಿರ್ಮಾಪಕರಾದ ಶರವಣ ವೈದೇಹಿ ಮಾತನಾಡಿ, ಗ್ರಾಮೀಣ ಪರಿಸರದಲ್ಲಿ ನಡೆವಂಥ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ತುಂಬಾ ಚೆನ್ನಾಗಿ ಬಂದಿದೆ ಎಂದು ಹೇಳಿದರು. ನಾಯಕ ಶಶಿಕುಮಾರ್‍ಗೆ ಇದು ಮೊದಲ ಸಿನಿಮಾ. ಪಕ್ಕಾ ಹಳ್ಳಿ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿ ಮಮತಾರಾಹುತ್ ಚಿತ್ರದಲ್ಲಿ ಗಂಡುಬೀರಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ನಟ ಪ್ರೇಮ್‍ಕುಮಾರ್ ಚಿತ್ರದಲ್ಲಿ ಹಾಸ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿ ಮ್ಯೂಸಿಕ್ ಈ ಹಾಡುಗಳನ್ನು ಹೊರ ತಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin