ಮುಂದೆ ಭೂಮಿಗೆ ಅಪ್ಪಳಿಸಲಿರುವ ಕ್ಷುದ್ರಗ್ರಹದಿಂದ ಮನುಕುಲ ಸರ್ವನಾಶ

ಈ ಸುದ್ದಿಯನ್ನು ಶೇರ್ ಮಾಡಿ

asteroid

ಬರ್ಲಿನ್, ಜೂ.29-ಮುಂದೆ ಭೂಮಿಗೆ ಅಪ್ಪಳಿಸಲಿರುವ ದೈತ್ಯಾಕಾರದ ಕ್ಷುದ್ರಗ್ರಹದಿಂದ(ಅಂತರಿಕ್ಷದ ಬಂಡೆಗಳು) ಮನುಕುಲವೇ ಸರ್ವನಾಶವಾಗುವ ಆತಂಕವಿದೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ಗಂಭೀರ ಎಚ್ಚರಿಕೆ ನೀಡಿದ್ದಾರೆ.  ಜೂ.30ರಂದು ನಡೆಯಲಿರುವ ಅಂತಾರಾಷ್ಟ್ರೀಯ ಕ್ಷುದ್ರಗ್ರಹ ದಿನಾಚರಣೆಗೆ ಪೂರ್ವಭಾವಿಯಾಗಿ ಜಗತ್ತಿನ ವಿವಿಧೆಡೆ ಈ ಸಂಬಂಧ ಅನೇಕ ಕಾರ್ಯಕ್ರಮಗಳು ಜರುಗುತ್ತಿವೆ.   ಯಾವುದೇ ಸಂದರ್ಭದಲ್ಲಿ ಲಘು ಅಥವಾ ಬೃಹತ್ ಕ್ಷುದ್ರಗ್ರಹಗಳು ಭೂಮಿಗೆ ಡಿಕ್ಕಿಯಾಗಬಹುದು ಎಂದು ಜರ್ಮನಿಯ ಡಾಮ್ರ್ಸ್‍ಟಾಡ್‍ನಲ್ಲಿರುವ ಐರೋಪ್ಯ ಬಾಹ್ಯಾಕಾಶ ಕಾರ್ಯಾಚರಣೆಗಳ ಕೇಂದ್ರದ (ಇಎಸ್‍ಒಸಿ) ಮುಖ್ಯಸ್ಥ ರಾಲ್ಫ್ ಡೆನ್ಸಿಂಗ್ ಹೇಳಿದ್ದಾರೆ.

ಕ್ಷುದ್ರಗ್ರಹಗಳು ಭೂಮಿಗೆ ಯಾವಾಗ ಬೇಕಾದರೂ ಅಪ್ಪಳಿಸಬಹುದು, ನಮ್ಮ ಜೀವಮಾನದಲ್ಲಿ ಸಂಭವಿಸದಿರಬಹುದು. ಆದರೆ ಮುಂದೊಂದು ದಿನ ಬಾಹ್ಯಾಕಾಶದ ಭಾರೀ ಬಂಡೆಗಳು ವಸುಂಧರೆಗೆ ಡಿಕ್ಕಿ ಹೊಡೆದು ಮನುಕುಲವೇ ನಾಶವಾಗುವ ಅಪಾಯ ಇದ್ದೇ ಇದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಅತ್ಯಂತ ದೊಡ್ಡ ಕ್ಷುದ್ರಗ್ರಹಗಳು ಭೂಮಿಗೆ ಪ್ರತಿ 10 ಕೋಟಿ ವರ್ಷಗಳಿಗೊಮ್ಮೆ ಅಪ್ಪಳಿಸುತ್ತದೆ. ಅದು ಇದೇ ಸಮಯಕ್ಕೆ ಇಳೆಗೆ ಡಿಕ್ಕಿಯಾಗುತ್ತದೆ ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ. ಮುಂದಿನ ಅಪ್ಪಳಿಸುವಿಕೆಯು ಭೂಮಿಯನ್ನೇ ನಾಶ ಮಾಡುವ ಆತಂಕವಿದೆ ಎಂಬ ಭೀತಿಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಭೂಮಿಯ ಸುಮಾರು 450 ಕೋಟಿ ವರ್ಷಗಳ ಇತಿಹಾಸದಲ್ಲಿ ಕ್ಷುದ್ರಗ್ರಹಗಳು ಧರಣಿಗೆ ಅಪ್ಪಳಿಸುತ್ತಾ ಅಲ್ಲೋಲ-ಕಲ್ಲೋಲ ಮಾಡುತ್ತಲೇ ಬಂದಿವೆ. ಈ ಡಿಕ್ಕಿಯು ಭಾರೀ ತೀವ್ರತೆಯನ್ನು ಹೊಂದಿರುತ್ತವೆ. ಇನ್ನು ಹಲವು ಆಕಾಶಕಾಯಗಳು ಭೂಮಿಯ ಜೀವಸಂಕುಲಗಳನ್ನೇ ನಾಶಗೊಳಿಸಿವೆ. ಅದನ್ನು ಮುಂಚಿತವಾಗಿ ನಿರ್ಧರಿಸುವ ಅಥವಾ ಅದು ಬರುವ ದಿಕ್ಕನ್ನು ಗುರುತಿಸಿ ತಡೆಗಟ್ಟುವ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin