ಮುಂಬೈಗೆ ಮೂವರು ಐಎಸ್ ಉಗ್ರರು ಎಂಟ್ರಿ, ಹೈ ಅಲರ್ಟ್ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ISIS--020

ಮುಂಬೈ,ಏ.5 – ಮೂವರು ಐಎಸ್  ಉಗ್ರಗಾಮಿಗಳು ನಗರದಲ್ಲಿ ನುಸುಳಿದ್ದಾರೆ ಎಂಬ ಗುಪ್ತಚರ ಇಲಾಖೆ ಅಧಿಕಾರಿಗಳ ಮಾಹಿತಿಯ ಹಿನ್ನೆಲೆಯಲ್ಲಿ ನಗರದಾದ್ಯಂತ ಭಾರೀ ಹೈ ಅಲರ್ಟ್ ಘೋಷಿಸಲಾಗಿದೆ.   ಈ ಮೂವರು ಉಗ್ರರು ರೈಲು ಮೂಲಕ ಮುಂಬೈ ಮಹಾನಗರವನ್ನು ಪ್ರವೇಶಿಸಿರುವ ಸಾಧ್ಯತೆ ಇದೆ ಎಂದು ಗುಪ್ತದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗುಪ್ತಚರ ಇಲಾಖೆ ಅಧಿಕಾರಿಗಳ ಈ ಮಾಹಿತಿ ನಂತರ ಮುಂಬೈ ಮಹಾನಗರದ ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು, ಪ್ರವಾಸಿ ತಾಣಗಳು, ಹೋಟೆಲ್‍ಗಳು, ಸರ್ಕಾರಿ ಕಚೇರಿಗಳು, ಆಯಾಕಟ್ಟಿನಸ್ಥಳಗಳು ಹಾಗೂ ಜನವಸತಿ ಪ್ರದೇಶಗಳಲ್ಲಿ ಭಾರೀ ಬಿಗಿಬಂದೋ ಬಸ್ತ್ ಏರ್ಪಡಿಸಲಾಗಿದೆ ಎಂದು ಗೃಹ ಇಲಾಖೆ ತಿಳಿಸಿದೆ.

ಎಂಥದೇ ಸಂದರ್ಭವನ್ನು ಎದುರಿಸಲು ನಾವು ಸಿದ್ದರಿರಿದ್ದೇವೆ, ಯಾರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin