ಮುಂಬೈದಾಳಿ ಸೂತ್ರಧಾರ ಉಗ್ರ ಹಫೀಜ್ ಭಾವಮೈದುನನಿಗೆ ಜೆಯುಡಿ ಮುಖ್ಯಸ್ಥನ ಪಟ್ಟ

ಈ ಸುದ್ದಿಯನ್ನು ಶೇರ್ ಮಾಡಿ

Hafeez-Syeed

ಲಾಹೋರ್, ಮಾ.13-ಮುಂಬೈ ಭಯೋತ್ಪಾದನೆ ದಾಳಿ ಸೂತ್ರಧಾರ ಹಫೀಜ್ ಸಹೀದ್ ಭಾವಮೈದುನ ಹಫೀಜ್ ಅಬ್ದುಲ್ ರೆಹಮಾನ್ ಮಕ್ಕಿಗೆ ಜಮಾತ್-ಉದ್-ದವಾ (ಜೆಯುಡಿ) ಉಸ್ತುವಾರಿ ಮುಖ್ಯಸ್ಥನ ಪಟ್ಟ ನೀಡಲಾಗಿದೆ. ಮಕ್ಕಿ ಕೂಡ ಕುಖ್ಯಾತ ಭಯೋತ್ಪಾದಕನಾಗಿದ್ದು, ಆತನ ತಲೆ 2 ದಶಲಕ್ಷ ಡಾಲರ್ ಬಹುಮಾನ ಘೋಷಿಸಲಾಗಿದೆ. ಹಫೀಜ್ ಸಯೀದ್‍ನನ್ನು ಪಾಕಿಸ್ತಾನದ ಪಂಜಾಬ್ ಸರ್ಕಾರ ಗೃಹ ಬಂಧನದಲ್ಲಿಟ್ಟಿರುವುದರಿಂದ ಭಾವಮೈದುನ ಹಫೀಜ್ ಅಬ್ದುಲ್ ರೆಹಮಾನ್ ಮಕ್ಕಿಗೆ ಸಂಘಟನೆಯ ಉಸ್ತುವಾರಿ ಮುಖ್ಯಸ್ಥನಾಗಿ ಮಾಡಲಾಗಿದೆ ಎಂದು ಜೆಯುಡಿ ಅಧಿಕೃತ ಪ್ರಕಟಣೆ ತಿಳಿಸಿದೆ. ಗೃಹ ಬಂಧನಲ್ಲಿರುವ (ಉಪ-ಕಾರಾಗೃಹ) ಸಹೀದ್ ಅಲ್ಲಿಂದಲೇ ಸಂಘಟನೆ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ ಎಂಬ ಸುದ್ದಿಗಳನ್ನು ತಳ್ಳಿ ಹಾಕಿರುವ ಜೆಯುಡಿ, ಮಕ್ಕಿ ಎಲ್ಲವನ್ನು ನಿಭಾಯಿಸುತ್ತಿದ್ಧಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin