ಮುಂಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದವರು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

chain--snatcher
ಬೆಂಗಳೂರು,ಅ.20- ಮುಂಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು ಸರಗಳ್ಳತನ ನಡೆಸಿ ವಾಪಸ್ ಮುಂಬೈಗೆ ಹೋಗುತ್ತಿದ್ದ ಇಬ್ಬರು ಅಂತಾರಾಜ್ಯ ಸರಗಳ್ಳರನ್ನು ಉತ್ತರ ವಿಭಾಗದ ಜಾಲಹಳ್ಳಿ ಪೊಲೀಸರು ಬಂಧಿಸಿ 6.25 ಲಕ್ಷ ರೂ. ಬೆಲೆಯ 6 ಮಾಂಗಲ್ಯ ಸರಗಳನ್ನು ವಶಪಡಿಸಿಕೊಂಡಿದ್ದಾರೆ. ಮುಂಬೈನ ಆಸೀಫ್ ರೆಹಮತ್ ಖಾನ್(36) ಮತ್ತು ಹಸ್ಮುಖ್ ಪುಕ್‍ರಾಜ್ ಸುರಾನ(46) ಬಂಧಿತ ಸರಗಳ್ಳರು.  ಜಾಲಹಳ್ಳಿ ಠಾಣೆ ಸರಹದ್ದಿನಲ್ಲಿ ಸೆ.13ರಂದು ಮಧ್ಯಾಹ್ನ ಗೋಕುಲ ಸುಂದರನಗರದ ರಸ್ತೆಯಲ್ಲಿ ವಾಯುವಿಹಾರ ಮಾಡುತ್ತಿದ್ದ ಮಹಿಳೆಯ ಕೊರಳಲಿದ್ದ ಚಿನ್ನದ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ ಬಂದ ಸರಗಳ್ಳರು ಎಗರಿಸಿ ಪರಾರಿಯಾಗಿದ್ದರು.

ಈ ಸಂಬಂಧ ಜಾಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಈ ಇಬ್ಬರನ್ನು ಬಂಧಿಸಿ ತೀವ್ರವಿಚಾರಣೆಗೊಳಪಡಿಸಿದಾಗ ಮುಂಬೈನಿಂದ ಬಂದು ಸರಗಳ್ಳತನ ಮಾಡಿ ಮತ್ತೆ ವಿಮಾನದಲ್ಲಿ ಮುಂಬೈಗೆ ವಾಪಸ್ ಆಗುತ್ತಿದುದ್ದಾಗಿ ಸರಗಳ್ಳರು ಬಾಯ್ಬಿಟ್ಟಿದ್ದಾರೆ. ಆರೋಪಿಗಳ ಬಂಧನದಿಂದ ಯಶವಂತಪುರ ವ್ಯಾಪ್ತಿಯ 3, ಜಾಲಹಳ್ಳಿಯ ಒಂದು, ಕೊಡುಗೆಹಳ್ಳಿ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಸರಗಳವು ಪ್ರಕರಣಗಳು ಪತ್ತೆಯಾದಂತಾಗಿದೆ. ಜಾಲಹಳ್ಳಿ ಇನ್‍ಸ್ಪೆಕ್ಟರ್ ಮುರುಗೇಂದ್ರಯ್ಯ, ಪಿಎಸ್‍ಐ ಲಿಂಗಾರೆಡ್ಡಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

 

► Follow us on –  Facebook / Twitter  / Google+

Facebook Comments

Sri Raghav

Admin