ಮುಂಬೈನಿಂದ ಯುವತಿಯರನ್ನು ಕರೆತಂದು ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದವನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Arrest01

ಬೆಳಗಾವಿ, ಸೆ.25- ನಗರದ ಟಿಳಕವಾಡಿಯ ಅಪಾರ್ಟ್‍ಮೆಂಟ್‍ವೊಂದರ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಮುಂಬೈ ಮೂಲದ ಯುವತಿಯೊಬ್ಬಳನ್ನು ರಕ್ಷಿಸಿ ಓರ್ವನನ್ನು ಬಂಧಿಸಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಮುಂಬೈ ಮೂಲದ ಪ್ರವೀಣ ಪಾಟೀಲ ಎಂಬುವವನೇ ಬಂಧಿತ ವ್ಯಕ್ತಿ. ಈತನು ಮುಂಬೈ ಮೂಲದ ಯುವತಿಯರನ್ನು ಬೆಳಗಾವಿಗೆ ಕರೆಯಿಸಿ ಟಿಳಕವಾಡಿಯ ಅಪಾರ್ಟ್‍ಮೆಂಟ್‍ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ. ಕೆಲ ಗಿರಾಕಿಗಳು ನೇರವಾಗಿ ಅಪಾರ್ಟ್‍ಮೆಂಟ್‍ಗೆ ಬರುತ್ತಿದ್ದರು. ಇನ್ನೂ ಕೆಲವು ಯುವತಿಯರನ್ನು ಹೋಟೆಲ್‍ಗೆ ಕರೆದೊಯ್ಯಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಇಸ್ಪೆಕ್ಟರ್ ಡ್ಡೇಕರ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ದಂಧೆಗೆ ಗಿರಾಕಿಗಳಿಂದ ಸಾವಿರಾರು ರೂ. ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಆಯುಕ್ತ ಟಿ.ಜೆ.ಕೃಷ್ಣಭಟ್, ಡಿಸಿಪಿ ಅಮರನಾಥ ರೆಡ್ಡಿ ಮಾರ್ಗದರ್ಶನದಲ್ಲಿ ಈ ದಾಳಿ ನಡೆಸಲಾಯಿತು. ಈ ಪ್ರಕರಣದ ಹಿಂದೆ ಯಾರಿದ್ದಾರೆ, ಯಾರ ಕೈವಾಡವಿದೆ ಎಂಬ ಬಗ್ಗೆ ತನಿಖೆ ನಡೆದಿದೆ.

► Follow us on –  Facebook / Twitter  / Google+

Facebook Comments

Sri Raghav

Admin