ಮುಂಬೈನ ವಸತಿ ಕಟ್ಟಡದ 20ನೇ ಮಹಡಿಯಲ್ಲಿ ಬೆಂಕಿ ಆಕಸ್ಮಿಕ : ಇಬ್ಬರ ಸಜೀವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

Fire-Mumbai

ಮುಂಬೈ, ಅ.18-ದಕ್ಷಿಣ ಮುಂಬೈನ ವಸತಿ ಕಟ್ಟಡದ 20ನೇ ಮಹಡಿಯಲ್ಲಿ ಇಂದು ಮುಂಜಾನೆ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಇಬ್ಬರು ಸಜೀವ ದಹನವಾಗಿದ್ದು, 11ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ.  ಮುಂಬೈನ ನಾರಿಮನ್ ಪಾಯಿಂಟ್ ಬಳಿ ಇರುವ ರೆಸಿಡೆನ್ಷಿಯಲ್ ಮೇಕರ್ ಚೇಂಬರ್‍ನ 20ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಸುದ್ದಿ ತಿಳಿದ ತಕ್ಷಣ 10 ಅಗ್ನಿಶಾಮಕ ವಾಹನಗಳೊಂದಿಗೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅಗ್ನಿಯ ಕೆನ್ನಾಲಿಗೆಯನ್ನು ನಂದಿಸಲು ಶ್ರಮಿಸಿದರು ಎಂದು ಫೈರ್ ಬ್ರಿಗೇಡ್‍ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಕಫ್ ಪೆರೇಡ್‍ನ ಮೇಕರ್ ಚೇಂಬರ್ ವಸತಿ ಸಮುಚ್ಚಯದ ಎ ವಿಂಗ್‍ನಲ್ಲಿ 20ನೇ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ಕಟ್ಟಡದ ಬಹುತೇಕ ಮಂದಿ ನಿದ್ರಾವಸ್ಥೆಯಲ್ಲಿದ್ದರು. ಈ ಅಗ್ನಿ ಆಕಸ್ಮಿಕದಲ್ಲಿ ಇಬ್ಬರು ಮೃತಪಟ್ಟಿದ್ದು, 11 ಮಂದಿಯನ್ನು ರಕ್ಷಿಸಲಾಗಿದೆ ಎಂದು ಪೊ ಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಸತತ ಮೂರುವರೆ ತಾಸುಗಳ ಕಾಲ ಸೆಣಸಿ ಅಗ್ನಿಯ ಪ್ರಕೋಪವನ್ನು ತಹಬಂದಿಗೆ ತಂದಿದ್ದಾರೆ. ಈ ಘಟನೆಯ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin