ಮುಂಬೈ ಮಹಾನಗರ ಪಾಲಿಕೆ 9 ಪೌರಾಡಳಿತ ಸಂಸ್ಥೆಗಳಿಗೆ ಬಿರುಸಿನ ಮತದಾನ

ಈ ಸುದ್ದಿಯನ್ನು ಶೇರ್ ಮಾಡಿ

BMC

ಮುಂಬೈ, ಫೆ.21-ಏಷ್ಯಾದ ಅತ್ಯಂತ ದೊಡ್ಡ ಸ್ಥಳೀಯ ಸಂಸ್ಥೆಯಾಗಿರುವ ಬೃಹನ್ ಮುಂಬೈ ಮಹಾನಗರ ಪಾಲಿಕೆ ಹಾಗೂ ಮಹಾರಾಷ್ಟ್ರದ ಇತರ 9 ಪೌರಾಡಳಿತ ಸಂಸ್ಥೆಗಳಿಗೆ ಇಂದು ಚುನಾವಣೆ ನಡೆದು ಬಿರುಸಿನ ಮತದಾನವಾಗಿದೆ. ಮಿನಿ ಸಾರ್ವತ್ರಿಕ ಚುನಾವಣೆ ಎಂದೇ ಬಿಂಬಿಸಲ್ಪಟ್ಟಿರುವ ಜನಾದೇಶಕ್ಕಾಗಿ ಎರಡನೇ ಹಂತದ ಚುನಾವಣೆ ವ್ಯಾಪಕ ಬಂದೋಬಸ್ತ್‍ನೊಂದಿಗೆ ನಡೆಯಿತು. ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದಂತೆ ಮತದಾನ ಶಾಂತಿಯುತವಾಗಿತ್ತು.   10 ನಗರ ಪಾಲಿಕೆಗಳು, 11 ಜಿಲ್ಲಾ ಪರಿಷತ್ ಮತ್ತು 118 ತಾಲೂಕು ಪಂಚಾಯತ್ ಸಮಿತಿಗಳ 3210 ಸ್ಥಾನಗಳಿಗಾಗಿ ಸ್ಪರ್ಧಿಸಿರುವ 17,331 ಅಭ್ಯರ್ಥಿಗಳ ಭವಿಷ್ಯವನ್ನು ಒಟ್ಟು 3.77 ಕೋಟಿ ಮತದಾರರು ನಿರ್ಧರಿಸಲಿದ್ಧಾರೆ.

BMC-elction

ಥಾಣೆ, ಉಲ್ಲಾಸ್‍ನಗರ, ಪುಣೆ, ಪಿಂಪ್ರಿ-ಚಂಚವಾಡ, ಸೊಲ್ಲಾಪುರ, ನಾಸಿಕ್, ಅಕೋಲಾ, ಅಮರಾವತಿ, ನಾಗಪುರ ನಗರಪಾಲಿಕೆಗಳು ಹಾಗೂ ಜಿಲ್ಲಾ ಪರಿಷತ್ ಮತ್ತು ಪಂಚಾಯತ್ ಸಮಿತಿಗಳಿಗೆ ಬೆಳಗ್ಗೆಯಿಂದಲೇ ಮತದಾರರು ಉತ್ಸಾಹದಿಂದ ತಮ್ಮ ಸಂವಿಧಾನಿಕ ಹಕ್ಕು ಚಲಾಯಿಸಿದರು.   ಮಹಾರಾಷ್ಟ್ರದ ಆಡಳಿತಾರೂಢ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಶಿವಸೇನಾ ನಡುವೆ ಒಡಕು ಉಂಟಾಗಿರುವುದರಿಂದ ಈ ಚುನಾವಣೆ ಮಹತ್ವದ್ದಾಗಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರಿಗೆ ಇದು ಪ್ರತಿಷ್ಠೆಯ ವಿಷಯವೂ ಆಗಿದೆ.

 

 

 

 

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin