ಮುಂಬೈ ಮೂಲದ ವರದ್ಕರ್ ಐರ್ಲೆಂಡ್ ಪ್ರಧಾನಿ..!

ಈ ಸುದ್ದಿಯನ್ನು ಶೇರ್ ಮಾಡಿ

Varadkar
ಮುಂಬೈ, ಜೂ.2-ಮುಂಬೈ ಮೂಲದ ಲಿಯೋ ವರದ್ಕರ್ ಐರ್ಲೆಂಡ್ ಪ್ರಧಾನಮಂತ್ರಿ ಆಗುವುದು ಬಹುತೇಕ ನಿಶ್ಚಿತವಾಗಿದೆ. ಐರಿಶ್ ಪ್ರಧಾನಮಂತ್ರಿ ಚುನಾವಣಾ ಫಲಿತಾಂಶ ಇಂದು ಸಂಜೆ 5 ಗಂಟೆಗೆ ಪ್ರಕಟಗೊಳ್ಳಲಿದ್ದು, ವರದ್ಕರ್ ಗೆಲುವು ಖಚಿತವಾಗಿದೆ.  ಮುಂಬೈನಲ್ಲಿರುವ ವರದ್ಕರ್ ಕುಟುಂಬ ಫಲಿತಾಂಶವನ್ನು ಕಾತುರದಿಂದ ಎದುರು ನೋಡುತ್ತಿದೆ.38 ವರ್ಷದ ವರದ್ಕರ್ ಐರ್ಲೆಂಡ್ ಪ್ರಧಾನಿಯದರೆ ಆ ದೇಶದ ಅತ್ಯಂತ ಕಿರಿಯ ರಾಷ್ಟ್ರನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.  ವೃತ್ತಿಯಲ್ಲಿ ವೈದ್ಯರಾಗಿದ್ದ ವರದ್ಕರ್ ತಂದೆ ಅಶೋಕ್ ಐರ್ಲೆಂಡ್‍ನ ನರ್ಸ್‍ನನ್ನು ಪ್ರೇಮ ವಿವಾಹವಾಗಿದ್ದರು. ಅವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಇವರು ಜನಿಸಿದ್ದರು. ಇವರ ಸಹೋದರಿ ಶುಭದಾ ವರದ್ಕರ್ ಖ್ಯಾತಿ ಒಡಿಸ್ಸಿ ನರ್ತಕಿಯಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin