ಮುಂಬೈ ವಿಮಾನ ನಿಲ್ದಾಣದ ಮೇಲೆ ಡ್ರೋಣ್ ಹಾರಾಟ ನಡೆಸಿದ್ದ ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Arrested-3

ಮುಂಬೈ, ಅ.20- ಇಲ್ಲಿನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಡ್ರೋಣ್ ಹಾರಾಟ ಕಂಡುಬಂದ ಹಿನ್ನೆಲೆಯಲ್ಲಿ ಪೆÇಲೀಸರು ಮೂವರನ್ನು ಬಂಧಿಸಿದ್ದಾರೆ.
ರಾಹುಲ್ ರಾಜ್‍ಕುಮಾರ್ ಜೈಸ್ವಾಲ್(24), ರಾಣಾ ಸುಬಾಷ್ ಸಿಂಗ್ (25) ಹಾಗೂ ವಿಧಿಚಂದ್ ಜೈಸ್ವಾಲ್ (45) ಇವರುಗಳನ್ನು ಡ್ರೋಣ್ ಹಾರಾಟ ನಡೆಸಿದ ಆರೋಪದ ಮೇಲೆ ಅಪರಾಧ ತನಿಖಾ ವಿಭಾಗದ ಘಟಕ-11ರ ಪೊಲೀಸರು ಬಂಧಿಸಿದ್ದಾರೆ.  ಮುಂಬೈನ ಪಶ್ಚಿಮ ಉಪನಗರದ ಚಾರ್ಕೊಪ್ ಪ್ರದೇಶದಲ್ಲಿ ಸಿನಿಮಾವೊಂದರ ಚಿತ್ರೀಕರಣದ ಪೂರ್ವಭಾವಿ ಸಿದ್ದತೆಯಾಗಿ ಕ್ಯಾಮೆರಾ ಅಳವಡಿತ ಡ್ರೋಣ್‍ನನ್ನು ತಾವು ಬಳಸಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ.

ದೇಶದ ವಾಣಿಜ್ಯ ನಗರಿ ಮೇಲೆ ಭಯೋತ್ಪಾದಕರು ಮಾನವರಹಿತ ವಿಮಾನಗಳಿಂದ ದಾಳಿ ನಡೆಸಲಿದ್ದಾರೆ ಎಂಬ ಆತಂಕದ ವರದಿಗಳ ಬೆನ್ನಲ್ಲೇ ವಿಮಾನ ನಿಲ್ದಾಣದ ಮೇಲೆ ಡ್ರೋಣ್ ಹಾರಾಟ ಕಂಡುಬಂದ ಕಾರಣ ಮುಂಬೈನಲ್ಲಿ ನಿನ್ನೆ ಕಟ್ಟೆಚ್ಚರ ವಹಿಸಲಾಗಿತ್ತು. ಡೆಹ್ರಾಡೂನ್‍ನಿಂದ ಬರುತ್ತಿದ್ದ ಇಂಡಿಗೋ ಏರ್‍ಲೈನ್ಸ್ 6ಇ-755 ವಿಮಾನದ ಪೈಲೆಟ್ ಆಶೀಶ್ ರಂಜನ್ ತಾವು ಶಂಕಾಸ್ಪದ ರೀತಿಯಲ್ಲಿ ಡ್ರೋಣ್ ಹಾರುತ್ತಿದುದನ್ನು ನೋಡಿದ್ದಾಗಿ ತಿಳಿಸಿದ ಹಿನ್ನೆಲೆಯಲ್ಲಿ ತೀವ್ರ ಶೋಧ ನಡೆಸಿ ಈ ಮೂವರನ್ನು ಬಂಧಿಸಲಾಗಿದೆ.
ಭಯೋತ್ಪಾದಕರ ದಾಳಿ ಭೀತಿ ಹಿನ್ನೆಲೆಯಲ್ಲಿ ಡ್ರೋಣ್‍ಗಳು, ದೂರ ನಿಯಂತ್ರಿತ ವಿಮಾನಗಳು, ಪ್ಯಾರಾಗ್ಲೈಡರ್‍ಗಳು ಮತ್ತು ಬೆಲೂನ್‍ಗಳ ಹಾರಾಟವನ್ನು ನಗರದ ವಾಯುಪ್ರದೇಶದಲ್ಲಿ ನಿಷೇಧಿಸಲಾಗಿದೆ.

Facebook Comments

Sri Raghav

Admin