ಮುಂಬೈ ಹಂತಕರಿಗೆ ಸುಪಾರಿ ನೀಡಿ RSS ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

Sharat-Madiwala-----n01

ಬಂಟ್ವಾಳ, ಆ.13- ರಾಜ್ಯದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿ ಪ್ರತಿಭಟನೆಯ ಕಿಚ್ಚು ಹೊತ್ತಿಸಿದ್ದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಶರತ್‍ರನ್ನು ಹತ್ಯೆ ಮಾಡಲು ಮುಂಬೈನಲ್ಲಿ ಹಂತಕರಿಗೆ ಸುಪಾರಿ ನೀಡಲಾಗಿತ್ತು ಎಂಬ ಸಂಗತಿ ಬೆಳೆಕಿಗೆ ಬಂದಿದೆ. ಆರೋಪಿಗಳು ಮುಂಬೈನಲ್ಲಿ ತಲೆಮರೆಸಿಕೊಂಡಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸುವುದಾಗಿ ಸಿಸಿಬಿ ಉನ್ನತಾಧಿಕಾರಿಗಳು ಹೇಳಿದ್ದಾರೆ.
ಶರತ್ ಹತ್ಯೆ ಜಾಡು ಹಿಡಿದು ಮುಂಬೈಗೆ ತೆರಳಿದ್ದ ಸಿಸಿಬಿ ವಿಶೇಷ ತಂಡದ ಪೊಲೀಸರು ಮಹತ್ವದ ಸಂಗತಿಗಳನ್ನು ಕಲೆ ಹಾಕಿ ರಾಜ್ಯಕ್ಕೆ ಹಿಂದಿರುಗಿದ್ದಾರೆ.

ಶರತ್ ಹತ್ಯೆಗೆ ಮುಂಬೈನಲ್ಲೇ ಕುತಂತ್ರ ರೂಪಿಸಿ ಹಂತಕರಿಗೆ ಸುಪಾರಿ ನೀಡಲಾಗಿತ್ತು. ಸುಪಾರಿ ನೀಡಿದ್ದ ದುಷ್ಕರ್ಮಿಗಳ ಅಣತಿಯಂತೆ ಬಂಟ್ವಾಳದಲ್ಲಿ ಶರತ್ ಅವರನ್ನು ಹಂತಕರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಭೀಕರ ದಾಳಿ ನಡೆಸಿ ಕೊಂದು ತಕ್ಷಣ ಮುಂಬೈಗೆ ಪರಾರಿಯಾಗಿದ್ದರು ಎಂಬ ಆಂಶ ಬಯಲಾಗಿದೆ.
ಮುಂಬೈಗೆ ತೆರಳಿದ್ದ ಸಿಸಿಬಿ ತಂಡಕ್ಕೆ ಸುಪಾರಿ ನೀಡಿದವರು ಮತ್ತು ಹತ್ಯೆಗೆ ಸುಪಾರಿ ಪಡೆದವರ ಬಗ್ಗೆ ನಿಖರ ಸುಳಿವು ಲಭಿಸಿದೆ. ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

Facebook Comments

Sri Raghav

Admin