ಮುಖ್ಯಮಂತ್ರಿ ಪರಿಹಾರ ನಿಧಿ ದುರ್ಬಳಕೆ : ನಾಲ್ವರ ವಂಚಕರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

gssfdghadfhdhಬೆಂಗಳೂರು, ಆ.4-  ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವೈದ್ಯಕೀಯ ಚಿಕಿತ್ಸೆಗಾಗಿ ಹಣ ಮಂಜೂರಾತಿಗಾಗಿ 2015ನೇ ಸಾಲಿನಲ್ಲಿ     ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಫಲಾನುಭವಿಗಳ ಹೆಸರಿನಲ್ಲಿ ವಿವಿಧ ದಾಖಲಾತಿಗಳನ್ನು ಸೃಷ್ಟಿಸಿವಂಚಿಸಿದ್ದ ನಾಲ್ವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಗುಲ್ಬರ್ಗದ  ಅಮೋಘಪ್ಪ, ತುಮಕೂರಿನ ಕಿರಣ್, ಮಂಡ್ಯದ ನಾಗರಾಜಶೆಟ್ಟಿ ಮತ್ತು ಶಂಕರ್ ಬಂಧಿತ  ಆರೋಪಿಗಳು. 54 ಪ್ರಕರಣಗಳಲ್ಲಿ  ರಾಜ್ಯ ಹಾಗೂ ಹೊರರಾಜ್ಯದ ವಿವಿಧ ಆಸ್ಪತ್ರೆಗಳ ಹೆಸರಿನಲ್ಲಿ ಸುಮಾರು 3 ಕೋಟಿ 39 ಲಕ್ಷರೂ.ಗಳ ನಕಲಿ ಬಿಲ್ಲುಗಳನ್ನು ಸೃಷ್ಟಿಸಿದ ಬಗ್ಗೆ ತನಿಖೆಯ ಸಲುವಾಗಿ, 4 ಡಿವೈ.ಎಸ್.ಪಿ. ಹಾಗೂ 4 ಪೊಲೀಸ್ ಇನ್ಸ್‍ಪೆಕ್ಟರ್‍ರವರುಗಳ ತಂಡವನ್ನು ರಚಿಸಿ, ಸಿ.ಐ.ಡಿ.ಯ ಆರ್ಥಿಕ ಅಪರಾಧಗಳ ವಿಭಾಗದಲ್ಲಿ ತನಿಖೆ ನಡೆಸಲಾಗಿತ್ತು,.
ಆಸ್ಪತ್ರೆಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಠಿಸಿ, ಅವುಗಳನ್ನು ನೈಜವೆಂದು ವೈದ್ಯಕೀಯ ಪರಿಹಾರ ಕೋರಿ ಅರ್ಜಿ ಸಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಲ್ವರನ್ನು  ಸಿಐಡಿ ತನಿಖಾಧಿಕಾರಿಯವರುಗಳು ದಸ್ತಗಿರಿ ಮಾಡಿದ್ದು ತನಿಖೆ ನಡೆಸಲಾಗುತ್ತಿದೆ.

ಈ ಆರೋಪಿಗಳು  ಸಚಿವರು ಹಾಗೂ ಶಾಸಕರುಗಳಿಂದ ಫಲಾನುಭವಿಗಳ ಹೆಸರಿನಲ್ಲಿ ಶಿಫಾರಸು ಪತ್ರಗಳನ್ನು ಪಡೆದುಕೊಂಡಿರುತ್ತಾರೆ. ಕೆಲವು ಫಲಾನುಭವಿಗಳ ಹೆಸರಿನಲ್ಲಿ ಸ್ವಯಂ ಕೋರಿಕೆಯಾಗಿ ಫಲಾನುಭವಿಗಳಿಗೆ ಗೊತ್ತಿಲ್ಲದಂತೆ ಅವರ ಹೆಸರಿನಲ್ಲಿ ನಕಲಿ ಅರ್ಜಿಗಳನ್ನು ಸಲ್ಲಿಸಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.   ಆರೋಪಿ ಅಮೋಘಪ್ಪ  ಗುಲ್ಬರ್ಗಾ ಜಿಲ್ಲೆಯಲ್ಲಿನ ಸುತ್ತಮುತ್ತಲ ಗ್ರಾಮಸ್ಥರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣ ಕೊಡಿಸುತ್ತೇನೆಂದು ಗುಲ್ಬರ್ಗಾದ  ವಿವಿಧ ಆಸ್ಪತ್ರೆಗಳ ನಕಲಿ ದಾಖಲಾತಿಗಳನ್ನು ಸೃಷ್ಟಿಸಿದ್ದು,   ಗುಲ್ಬರ್ಗಾ, ಯಾದಗಿರಿ ಹಾಗೂ ಬಾಗಲಕೋಟೆ ಜಿಲ್ಲೆಯ ಒಟ್ಟು 20  ಫಲಾನುಭವಿಗಳ ಹೆಸರಿನಲ್ಲಿ  ಹಣ ಪಡೆದು ವಂಚಿಸಿರುವುದು ಬೆಳಕಿಗೆ ಬಂದಿದೆ.

ಮತ್ತೊಬ್ಬ ಆರೋಪಿ ಎಂ.ಕೆ.ಕಿರಣ್ ಈತನು ಚಿಕ್ಕನಾಯಕನಹಳ್ಳಿ ವಾಸಿಯಾಗಿದ್ದು, ಸಹಚರನಾದ ಹೊಸದುರ್ಗದ ವಿಜಯಕುಮಾರನೊಂದಿಗೆ ಶಾಮೀಲಾಗಿ ತುಮಕೂರು ಜಿಲ್ಲೆಯ ಗುಬ್ಬಿ ಮತ್ತು ತುಮಕೂರು ತಾಲ್ಲೋಕಿನ ಸುತ್ತಮುತ್ತಲ ಗ್ರಾಮಸ್ಥರಿಗೆ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಹಣ ಕೊಡಿಸುತ್ತೇನೆಂದು ಅವರುಗಳಿಂದ ತಲಾ 20 ಸಾವಿರ ರೂ ಹಣ ಪಡೆದು ವಂಚಿಸಿರುವುದಲ್ಲದೆ,  ನಕಲಿ ವೈದ್ಯಕೀಯ ದಾಖಲಾತಿಗಳನ್ನು ಸಲ್ಲಿಸಿ ಹಣ ಪಡೆದಿರುವುದು ತನಿಖೆ ವೇಳೆ ದೃಢಪಟ್ಟಿದೆ.  ಆರೋಪಿಗಳಾದ ಸಿ.ಎಂ.ನಾಗರಾಜ ಶೆಟ್ಟಿ ಹಾಗೂ ಶಂಕರ ತನ್ನ ಸಹಚರರೊಂದಿಗೆ ಸೇರಿಕೊಂಡು  ಜಿಲ್ಲೆಯಲ್ಲಿನ ಸುತ್ತಮುತ್ತಲ ಗ್ರಾಮಸ್ಥರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣ ಕೊಡಿಸುತ್ತೇನೆಂದು ವಿವಿಧ ಆಸ್ಪತ್ರೆಗಳ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ವಂಚಿಸಿರುವುದು ತನಿಖೆ ವೇಳೆ ತಿಳಿದು ಬಂದಿದೆ.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್

Facebook Comments

Sri Raghav

Admin