ಮುಖ್ಯವಾಹಿನಿಗೆ ವಿಶ್ವಕರ್ಮ ಜನಾಂಗ ಬರಬೇಕು

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಸೆ.20-ವಿಶ್ವಕರ್ಮ ಜನಾಂಗ ಹಿಂದುಳಿದಿದ್ದು,ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್ ತಿಳಿಸಿದ್ದಾರೆ.ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ವಿಶ್ವಕರ್ಮ ಯಜ್ಞಮಹೋತ್ಸವ ಸಮಿತಿ ಆಯೋಜಿಸಿದ್ದ ಪೂಜೆ ಮತ್ತು ಸಂಸ್ಕೃತಿ  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಪಂಚ ಕಸುಬುಗಳನ್ನು ಮಾಡುತ್ತಾ ಇಂದಿಗೂ ಭಾರತೀಯ ಸಂಸ್ಕೃತಿ  ಮತ್ತು ಪರಂಪರೆಯನ್ನು ಉಳಿಸಲು ವಿಶ್ವಕರ್ಮ ಜನಾಂಗ ಶ್ರಮಿಸುತ್ತಿದೆ ಎಂದರು.

ನಗರಕ್ಕೆ ಸಮೀಪದ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ವಿಶ್ವಕರ್ಮ ಜನಾಂಗ ಎನಾದರೂ ಕರಕುಶಲ ಕೈಗಾರಿಕೆಗಳನ್ನು ಕೈಗೊಳ್ಳಲು ಇಚ್ಛಿಸಿದಲ್ಲಿ ಅವರಿಗೆ ಜಿಲ್ಲಾಡಳಿತ ಭೂಮಿ ಒದಗಿಸಲು ಸಿದ್ಧವಿದೆ . ಆಸಕ್ತರು ಅರ್ಜಿ ಸಲ್ಲಿಸಬಹುದು ಎಂದು ಕೆ.ಪಿ.ಮೋಹನ್ ರಾಜ್ ಸಲಹೆ ನೀಡಿದರು.ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ಹೆಚ್.ಪಿ.ನಾಗರಾಜಾಚಾರ್ ಮಾತನಾಡಿ,ಸಮುದಾಯದಿಂದ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಹಾಸ್ಟಲ್ ನಿರ್ಮಿಸುತಿದ್ದು, ಹೆಚ್ಚುವರಿ ಅನುದಾನ ನೀಡಿ ಸಹಕರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ ಅವರು,ಸಮುದಾಯ ಭವನ ನಿರ್ಮಾನಕ್ಕೆ ಸಿ.ಎ ನಿವೇಶನ ಹಾಗೂ ಚಿಕ್ಕಪೇಟೆ ವೃತ್ತಕ್ಕೆ ವಿಶ್ವಕರ್ಮ ವೃತ್ತವೆಂದು ನಾಮಕರಣ ಮಾಡಲು ಮನವಿ ಸಲ್ಲಿಸಿದರು.ಅಭಯಹಸ್ತೆ ಆದಿಲಕ್ಷ್ಮಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀನೀಲಕಂಠಚಾರ್ಯಸ್ವಾಮೀಜಿ, ಸಮಾಜದ ಮುಖಂಡರಾದ ಟಿ.ಹೆಚ್.ಆನಂದರಾಮು, ಪ್ರೊ ರ.ಕೆ.ವಿ.ಕೃಷ್ಣಮೂರ್ತಿ, ಜಕಣಾಚಾರಿ, ಪಿ.ಚಿ.ನರಸಿಂಹಮೂರ್ತಿ, ವಿಶ್ವಮೂರ್ತಿ, ಚಂದ್ರಾಚಾರ್, ಗೋವರ್ಧನಾಚಾರ್, ಸುಧೀರ್,ವೆಂಕಟರಮಣಾಚಾರ್ ಮತ್ತಿತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin