ಮುಟ್ಟನಹಳ್ಳಿ ಶರತ್ ಕೊಲೆ ಪ್ರಕರಣ : ಮತ್ತೆ ಏಳು ಜನರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Arrested-01

ಮಂಡ್ಯ,ಫೆ.4-ಕಳೆದ ಜ.26ರಂದು ಜಿಲ್ಲೆಯ ಮದ್ದೂರು ತಾಲ್ಲೂಕಿನ ಮುಟ್ಟನಹಳ್ಳಿಯಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿನ್ನೆ ಮತ್ತೆ ಏಳು ಜನರನ್ನು ಬಂಧಿಸಿದ್ದು , ಇದರೊಂದಿಗೆ ಬಂಧಿತರ ಸಂಖ್ಯೆ 8ಕ್ಕೇರಿದೆ.ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಚಿಕ್ಕದೇವನಹಳ್ಳಿ ಗ್ರಾಮದ ನಿವಾಸಿಗಳಾದ ದಾಸ ಅಲಿಯಾಸ್ ಶ್ರೀನಿವಾಸ್, ಯಶವಂತ್ ಅಲಿಯಾಸ್ ಯಶು, ಆದಿತ್ಯ, ವೀರೇಂದ್ರ, ಜೀವನ್ ಹಾಗೂ ಇವರಿಗೆ ಆಶ್ರಯ ನೀಡಿದ್ದ ಅದೇ ಗ್ರಾಮದ ಮಹೇಶ್ ಮತ್ತು ಅಜರುದ್ದೀನ್ ಬಂಧಿತರು. ಈ ಮೊದಲು ಲೊಕೇಶ್ ಎಂಬುವವನ್ನು ಬಂಧಿಸಲಾಗಿತ್ತು. ಜನವರಿ 26ರ ರಾತ್ರಿ ಈ ಆರೋಪಿಗಳು ಶರತ್ ಎಂಬ ವ್ಯಕ್ತಿಯನ್ನು ಹತ್ಯೆ ಮಾಡಿದ್ದರು. ಹಂತಕರ ಬಂಧನಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಡಿವೈಎಸ್ಪಿ ಮ್ಯಾಥ್ಯೂ ಥಾಮಸ್ ಅವರ ನೇತೃತ್ವದಲ್ಲಿ ತಂಡ ರಚನೆಯಾಗಿತ್ತು. ತಂಡದ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ ಕೊಲೆಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 8 ಮಂದಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin